ಭಗವದ್ಗೀತೆಯ ಶ್ಲೋಕಾರ್ಥ ೩೪
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಅರ್ಜುನ ಉವಾಚ
ಶ್ಲೋಕ..೩೪
ಆಚಾರ್ಯಾ: ಪಿತರ: ಪುತ್ರಾಸ್ತಥೈವ ಚ ಪಿತಾಮಹಾ:|
ಮಾತುಲಾ: ಶ್ವಶುರಾ: ಪೌತ್ರಾ: ಶ್ಯಾಲಾ: ಸಂಬಂಧಿನಸ್ತಥಾ||
ಅರ್ಜುನ ಕೃಷ್ಣನ ಬಳಿ ತನ್ನ ಮನದ ದುಗುಡವನ್ನು ತಿಳಿಸುತ್ತಿದ್ದಾನೆ. ಯಾರಿಗಾಗಿ ತಾನು ಹೋರಾಡಲು ರಣಭೂಮಿಗೆ ಬಂದಿರುವನೋ , ಅವರೆಲ್ಲರೂ ಇಂದು ತನ್ನೊಡನೆಯೇ ಹೋರಾಟಕ್ಕೆ ಇಳಿದಿದ್ದಾರೆ..ತನ್ನ ಗುರುಗಳಾದ ದ್ರೋಣಾಚಾರ್ಯರು ಕೃಪಾಚಾರ್ಯರೂ ..ತಂದೆಗೆ ಸಮಾನರಾದ ದೊಡ್ಡಪ್ಪ ಚಿಕ್ಕಪ್ಪಂದಿರೂ , ಮಕ್ಕಳು , ಮೊಮ್ಮಕ್ಕಳು, ಭೀಷ್ಮರೇ ಮೊದಲಾದ ಅಜ್ಜಂದಿರು , ಸೋದರ ಮಾವಂದಿರು , ಹೆಣ್ಣು ಕೊಟ್ಟ ಮಾವಂದಿರು , ಭಾವ ಮೈದುನರೂ ಹೀಗೆ ಅನೇಕ ರೀತಿಯ ಎಲ್ಲಾ ಸಂಬಂಧಿಕರೂ ಸಹ ಹೋರಾಟಕ್ಕೆ ಇಳಿದಿರುವಾಗ , ಈ ಯುದ್ಧವನ್ನು ಯಾರ ಖುಷಿಗಾಗಿ ಮಾಡುವುದು ?? ಇವರೆಲ್ಲರ ಸಂತೋಷಕ್ಕೆ ತಾನು ಯುದ್ಧ ಮಾಡಲು ಬಂದಿದ್ದು , ಈಗ ಇವರ ವಿರುದ್ಧವೇ ಹೇಗೆ ಹೋರಾಡುವುದು?? ಎಂದು ಕೃಷ್ಣನ ಬಳಿ ತನ್ನ ದುಃಖ ತೋಡಿಕೊಳ್ಳುತ್ತಿದ್ದಾನೆ.
ಧನ್ಯವಾದಗಳು
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





