ಭಗವದ್ಗೀತೆಯ ಶ್ಲೋಕಾರ್ಥ-೩೫
ಭಗವದ್ಗೀತೆಯ ಶ್ಲೋಕಾರ್ಥ
🌷🌷🌷🌷🌷🌷🌷🌷
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೩೫
ಅರ್ಜುನ ಉವಾಚ…
ಏತಾನ್ನ ಹಂತುಮಿಚ್ಛಾಮಿ ಘ್ನತೋsಪಿ ಮಧುಸೂದನ|
ಅಪಿ ತ್ರೈಲೋಕ್ಯ ರಾಜ್ಯಸ್ಯ ಹೇತೋ: ಕಿಂ ನು ಮಹೀಕೃತೇ ||
ಕೃಷ್ಣನ ಬಳಿ ಅರ್ಜುನ ತನಗೆ ಯುದ್ಧ ಬೇಡವಾಗಿದೆ ಎಂಬುದನ್ನು ಹೇಳಲು , ಅದಕ್ಕೆ ಪೂರಕವಾಗಿ ನಾನಾ ಕಾರಣಗಳನ್ನು ಹೇಳುತ್ತಿದ್ದಾನೆ …ಮೊದಲು ಬಹಳ ಉತ್ಸಾಹದಿಂದ ಬಂದ ಅರ್ಜುನ, ನಂತರ ಅಹಂಕಾರ ಮಮಕಾರದ ವಶವಾಗಿ ಈ ರೀತಿ ತನ್ನವರ ವಿರುದ್ಧವೇ ಯುದ್ಧ ಮಾಡಲಾರೆ ಎಂದು ಕಾರಣ ಹೇಳುತ್ತಿದ್ದಾನೆ .. ತನ್ನ ಸಂಬಂಧಿಗಳನ್ನೇ ಕೊಂದು ಪಡೆಯುವ ಜಯ ತನಗೆ ಬೇಕಾಗಿಲ್ಲ..ಒಂದು ವೇಳೆ ಅವರೆಲ್ಲರೂ ಸೇರಿ ತನ್ನನ್ನು ಕೊಂದರೂ ಸರಿಯೇ ,ತಾನು ಮಾತ್ರ ಅವರನ್ನು ಕೊಲ್ಲುವವನಲ್ಲಾ…ಹೇ ಮಧುಸೂದನ ..ಮೂರು ಲೋಕದ ಒಡೆತನ ಕೊಡುವೆನೆಂದರೂ ಸರಿಯೇ ನಾನು ಅವರೆದುರು ಹೋರಾಡಲಾರೆ …ಚಿಕ್ಕದಾದ ತುಂಡು ಭೂಮಿಗಾಗಿ ನನ್ನವರನ್ನೇ ಕೊಲ್ಲುವ ಕೆಲಸ ಮಾಡಲಾರೆ !! ಎಂದು ಅರ್ಜುನ ತನ್ನ ಮನದ ಮಾತನ್ನು ಕೃಷ್ಣನ ಬಳಿ ಹೇಳುವನು .. ಅರ್ಜುನನ ಮನದಲ್ಲಿ ಈಗ ತಾನೇ ಎಲ್ಲವನ್ನೂ ಮಾಡುವವನೆಂಬ ಅಹಂಕಾರ ಹೊಕ್ಕಿದೆ.. ಹಾಗಾಗಿ ತನ್ನ ರಥದಲ್ಲಿ ಕೃಷ್ಣ ಕುಳಿತಿರುವುದನ್ನೂ ಮರೆತು , ತಾನೇ ಸ್ವತಂತ್ರವಾಗಿ ಎಲ್ಲವನ್ನೂ ಮಾಡುವೆನೆಂದು ಭಾವಿಸಿ ,ತನ್ನ ಕರ್ತವ್ಯ ಮರೆತು ಮಾತನಾಡುತ್ತಿದ್ದಾನೆ … ಅನ್ಯಾಯ ಅಧರ್ಮದ ವಿರುದ್ಧ ಸ್ವಜನರೇ ಇದ್ದರೂ ಧರ್ಮವೇ ಮುಖ್ಯ ಆಗಬೇಕೆಂಬುದನ್ನು ಕಡೆಗಣಿಸಿ , ಮಮಕಾರ ವಶನಾಗಿದ್ದಾನೆ..ನಾವೂ ಅಷ್ಟೇ.. ಎಲ್ಲವನ್ನೂ ದೇವರು ಮಾಡಿಸುವನು ಎಂದು ಹೇಳುತ್ತೇವೆ ..ಆದರೆ ಯಾವಾಗ ನಮ್ಮ ಭಾವನೆಗೆ ದಕ್ಕೆ ಆಗುವುದೋ , ಮನಸ್ಸು ಹೀಗೆ ಅಸಂಬದ್ಧ ಯೋಚನೆ ಮಾಡಿ ದೇವರನ್ನು ಮರೆತು ಮಾತನಾಡುತ್ತೇವೆ.. ಎಲ್ಲದಕ್ಕೂ ನಾವೇ ಕಾರಣ ಎಂಬ ಭಾವವೇ ನಮ್ಮ ದುಃಖಕ್ಕೆ ಕಾರಣ ಎನ್ನುವುದು ಗೀತೆ..ಅದನ್ನು ಹೇಗೆ ಹೋಗಲಾಡಿಸುವುದು ಎಂಬುದನ್ನು ತಿಳಿಸುವುದೇ ಗೀತಾ ಮಹಾತ್ಮೆ..
ಧನ್ಯವಾದಗಳು 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





