ಭಗವದ್ಗೀತೆಯ ಶ್ಲೋಕಾರ್ಥ-೩೬
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ …೩೬
ಅರ್ಜುನ ಉವಾಚ…
ನಿಹತ್ಯ ಧಾರ್ತರಾಷ್ಟ್ರಾನ್ನ: ಕಾ ಪ್ರೀತಿ: ಸ್ಯಾಜ್ಜನಾರ್ದನ|
ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನ: ||
ಕೃಷ್ಣನ ಬಳಿ ಅರ್ಜುನ ತಾನು ಶಸ್ತ್ರ ಕೆಳಗಿಡಲು ಕಾರಣವನ್ನು ಹೇಳುತ್ತಿದ್ದಾನೆ..ಈಗ ಅವನು ಮಾತುಗಳಲ್ಲಿ , ತಾನೇ ಯುದ್ಧ ಮಾಡುವವನೆಂಬ ಅಹಂಕಾರ ಮತ್ತು ತನ್ನವರು ಸಾಯುವರೆಂಬ ಸ್ವಾರ್ಥ ತುಂಬಿದೆ ..ಹಾಗೇ ಇನ್ನು ಯುದ್ಧ ಆರಂಭವೇ ಆಗಿರದಿದ್ದರೂ ತಾನೇ ಎಲ್ಲರನ್ನೂ ಕೊಲ್ಲುವವನೆಂದೂ , ತಾವೇ ಯುದ್ಧದಲ್ಲಿ ಗೆಲ್ಲುವವರೆಂದೂ ತೀರ್ಮಾನ ಮಾಡಿದಂತೆ ಮಾತನಾಡುತ್ತಿದ್ದಾನೆ .. ಹಾಗಾಗಿ ಕೃಷ್ಣನ ಬಳಿ , ನಮ್ಮವರೇ ಆದ ಧೃತರಾಷ್ಟ್ರನ ಮಕ್ಕಳಾದ ದುರ್ಯೋಧನಾದಿಗಳನ್ನು ಕೊಲ್ಲುವುದರಿಂದ ನಮ್ಮ ಮನಸ್ಸಿಗೇನು ಖುಷಿಯಿದೆ ಜನಾರ್ದನ?? ಒಂದೊಮ್ಮೆ ಕೊಂದರೂ ಅವರು ಸತ್ತ ಸೂತಕವನ್ನು ಆಚರಿಸಬೇಕಾದವರೂ ನಾವೇ ಅಲ್ಲವೇ?? ಅದೂ ಅಲ್ಲದೇ ಆತತಾಯಿನ: ಅಂದರೆ ಅತ್ಯಂತ ದುಷ್ಟರಾದ ಇವರೆಲ್ಲರನ್ನೂ ಕೊಂದು ನಾವು ಪಾಪವನ್ನೇ ಸಂಚಯ ಮಾಡಿದಂತಾಗುವುದು ? ಹಾಗಾಗಿ ತಾನು ಸ್ವಜನ ಬಾಂಧವರನ್ನು ಕೊಲ್ಲುವುದಿಲ್ಲಾ ಎಂದು ಅರ್ಜುನ ಕೃಷ್ಣನ ಬಳಿ ಹೇಳುತ್ತಾನೆ..
ಧನ್ಯವಾದಗಳು 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





