ಭಗವದ್ಗೀತೆಯ ಶ್ಲೋಕಾರ್ಥ-೩೭

ಭಗವದ್ಗೀತೆಯ ಶ್ಲೋಕಾರ್ಥ
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಅರ್ಜುನ ಉವಾಚ
ಶ್ಲೋಕ….೩೭


ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ ಸ್ವಬಾಂಧವಾನ್|
ಸ್ವಜನಂ ಹಿ ಕಥಂ ಹತ್ವಾ ಸುಖಿನ: ಸ್ಯಾಮ ಮಾಧವ ||
ಅರ್ಜುನ ಕೃಷ್ಣನ ಬಳಿ ಮತ್ತೆ ಮತ್ತೆ ಹೇಳುವನು .” .ಹೇ ಮಾಧವ, ನಮ್ಮವರೇ ಆದಂತಹ‌ ಧೃತರಾಷ್ಟ್ರನ ಮಕ್ಕಳಾದ ದುರ್ಯೋಧನಾದಿಗಳನ್ನು ಕೊಲ್ಲುವುದು ನಮಗೆ ಶ್ರೇಯಸ್ಕರವಲ್ಲಾ ..ಏಕೆಂದರೆ ನಮ್ಮವರನ್ನೇ ಕೊಂದು ನಾವು ಸುಖದಿಂದ ಬದುಕಲು ಸಾಧ್ಯವಿಲ್ಲ. ” ಧೃತರಾಷ್ಟ್ರನ ಮಕ್ಕಳಾದ ದುಷ್ಟ ದುರ್ಯೋಧನಾದಿಗಳಿಗೆ ಸಹಕರಿಸುವವರನ್ನೂ ಕೊಲ್ಲುವ ಉದ್ದೇಶದಿಂದ ಬಂದ ಅರ್ಜುನ ಈಗ ಬೇರೆಯದ್ದೇ ಭಾವವನ್ನು ಹೊಂದಿದ್ದಾನೆ ..ಅದಕ್ಕೆ ಕಾರಣ ಜೊತೆಯಲ್ಲೇ ರಥದಲ್ಲಿ ಕುಳಿತ ಕಪಟ ನಾಟಕ ಸೂತ್ರಧಾರಿ ಕೃಷ್ಣ ಪರಮಾತ್ಮ. .ಕೃಷ್ಣನನ್ನು ” ಜಗದ್ಗುರು “ಎಂದು ಸಂಬೋಧಿಸುತ್ತೇವೆ ..ಅಂತಹ ಜಗದ್ಗುರು ಇಡೀ ವಿಶ್ವದ ಜನರಿಗೆ ಬೇಕಾದ ಜ್ಞಾನವನ್ನು ಹಂಚಲು ಆರಿಸಿಕೊಂಡ ಶಿಷ್ಯನೂ ಸಹ ವಿಶ್ವ ಮಾನ್ಯ ನಾದ , ಸೋಲರಿಯದ ಅರ್ಜುನನನ್ನು …ಆದರೆ ಈಗ ನಾವು ಕಾಣುವ ಅರ್ಜುನನೇ ಬೇರೆ ..ಹಿಂದೆ ಧರ್ಮರಾಯ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆಯ ವಿರುದ್ಧ ಹೋರಾಡಲು ತಮ್ಮ ಏಳು ಅಕ್ಷೋಹಿಣಿ ಸೈನ್ಯ ಸಾಲದು , ಹಾಗಾಗಿ ಯುದ್ಧವೇ ಬೇಡ ಅಂದಾಗ ಇದೇ ಅರ್ಜುನ ಅಣ್ಣನಿಗೆ ಧೈರ್ಯ ತುಂಬಿದ್ದನು .. ಸತ್ಯ, ನ್ಯಾಯ,ಧರ್ಮದ ಮಾರ್ಗದಲ್ಲಿ ಇರುವ ತಮಗೆ ಎಂದಿಗೂ ಸೋಲಾಗದು ..ಹಾಗೇ ಕೃಷ್ಣನೇ ತಮ್ಮ ಬಳಿ ಇರುವಾಗ ಹೆದರುವ ಅಗತ್ಯವಿಲ್ಲ ಎಂದವನು , ಇದೀಗ ತಾನೇ ಯುದ್ಧ ಬೇಡ ಎಂದು ರೋಧಿಸಲು ಕಾರಣ , ಕೃಷ್ಣ ರಥವನ್ನು ತಂದು ಭೀಷ್ಮ ದ್ರೋಣರ ಮುಂದೆ ನಿಲ್ಲಿಸಿ , ” ನೋಡು ನೀನು ಯಾರು ಜೊತೆ ಯುದ್ಧ ಮಾಡಬೇಕು ” ಎಂದು ಹೇಳಿದ್ದರಿಂದಲೇ ಎಂಬುದು ಸ್ಪಷ್ಟ.. ಹಾಗೆ ಹೇಳಲೂ ಕಾರಣವಿದೆ .. ಕೃಷ್ಣನ ಅತ್ಯಂತ ಪ್ರೀತಿಪಾತ್ರ ಗೆಳೆಯ ಅರ್ಜುನ,.. ತನ್ನ ಪ್ರಿಯ ಶಿಷ್ಯನನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲು ,ಅವನ ಅಜ್ಞಾನ ದೂರ ಮಾಡಲು ಕೊನೆಯ ಪ್ರಹಾರ ಎಂಬಂತೆ ಅರ್ಜುನನ ಮನಸ್ಸಿಗೆ ಆಘಾತ ಉಂಟಾಗುವಂತೆ ಮಾಡಿದ್ದಾನೆ ..ಅದರಿಂದ ತನ್ನ ಪ್ರಿಯ ಶಿಷ್ಯ ಇನ್ನಷ್ಟು ಧೈರ್ಯವಂತನಾಗಿ ಗೀತೆಯ ಬೆಳಕಿನಲ್ಲಿ ಪ್ರಕಾಶಿಸುವಂತಾಗಲಿ ಎಂಬುದು ಭಗವಂತನ ಇಚ್ಛೆ.


ಧನ್ಯವಾದಗಳು
ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!