ಲೇೂಕಸಭೆ ವಿಧಾನ ಸಭೆ ಸದಸ್ಯರ ಸಂಖ್ಯೆ ಹೆಚ್ಚಿಸುತ್ತಿರುವುದು ರಾಜಕಾರಣಿಗಳ ಲಾಭಕ್ಕಾಗಿಯೇ ಹೊರತು ಜನಸಾಮಾನ್ಯರ ಹಿತದೃಷ್ಟಿಯಿಂದ ಅಲ್ಲ
ಪ್ರಸ್ತುತ ಲೇೂಕ ಸಭೆಯ 543 ಸದಸ್ಯರ ಸಂಖ್ಯೆಯನ್ನು 850 ಕ್ಕೆ ಅದೇ ರೀತಿಯಲ್ಲಿ ಪ್ರತಿ ರಾಜ್ಯ ವಿಧಾನ ಸಭೆಯ ಸದಸ್ಯರ ಸಂಖ್ಯೆಯನ್ನು ಆಯಾಯ ಮತದಾರರ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಿಸುವ ವಿದೇಯಕ ಮಂಡನೆ ಅದೇ ರೀತಿಯಲ್ಲಿ ನಾರಿ ಶಕ್ತಿ ಅನ್ನುವ ಘೇೂಷಣೆಯೊಂದಿಗೆ ಶೇ.33 ಮೀಸಲಾತಿಯನ್ನು ಈ ಎರಡು ಸದನಗಳಲ್ಲಿನೀಡುವ ನಿಟ್ಟಿನಲ್ಲಿ ವಿಶೇಷ ಲೇೂಕಸಭಾ ಅಧಿವೇಶನ ಕರೆದು ಚಚೆ೯ಗೆ ಮುಂದಾಗಿದೆ.
ಈ ವಿಶೇಷ ಅಧಿವೇಶದನಮುಖ್ಯ ಉದ್ದೇಶವೇ ಈ ಎಲ್ಲಾ ರಾಜಕೀಯ ಪಕ್ಷಗಳ ರಾಜಕಾರಣಿಗಳ ಹಿತಾಸಕ್ತಿಗಳನ್ನು ಭದ್ರಗೊಳಿಸುವುದು ಬಿಟ್ಟರೆ ಈ ದೇಶದ 145 ಕೇೂಟಿ ಜನಸಾಮಾನ್ಯರ ಶಿಕ್ಷಣ ಆರೇೂಗ್ಯ ಉದ್ಯೋಗ ಬದುಕಿನ ಮೂಲ ಸೌಕರ್ಯಗಳ ಸುಧಾರಣೆಗಳ ಕಡೆಗೆ ಗಂಭೀರವಾಗಿ ಚಚಿ೯ಸುವ ಸದ್ಬುಧ್ದಿ ಈ ನಮ್ಮ ಆಡಳಿತ ರೂಢ ಪಕ್ಷದವರಿಗಾಗಲಿ ವಿಪಕ್ಷದವರಿಗಾಗಲಿ ಖಂಡಿತವಾಗಿಯೂ ಇಲ್ಲ ಅನ್ನುವುದಂತು ನಿಜ.
.
ಆಡಳಿತ ರೂಢ ಎನ್‌ಡಿಎ ಬಣದವರಿಗೆ ಯಾರು ಮಾಡದ ಜಗತ್ತಿನ ಮಹಾನ್ ಸಾಧನೆಯನ್ನು ನಾವು ಮಾಡಿದ್ದೇವೆ ಅನ್ನುವ ಕಿರೀಟ ಹೊತ್ತು ಮುಂದಿನ ಚುನಾವಣೆಯನ್ನು ಎದುರಿಸುವ ರಣತಂತ್ರದಲ್ಲಿ ಅವರು ತೊಡಗಿದ್ದರೆ. ವಿಪಕ್ಷಗಳಿಗೆ ಈ ಹಿಂದೆ ನಾವು ಮಾಡಲು ಹೊರಟ ಮಹಿಳಾ ಮೀಸಲಾತಿಯನ್ನು ಬಿಜೆಪಿ ಬೆಂಬಲಿತ ಪಕ್ಷಗಳು ತರಲು ಮುಂದಾಗಿದ್ದಾವೆ ಈ ಕ್ರೆಡಿಟ್ ಅವರಿಗೆ ಸಲ್ಲುತ್ತದೆ ಎಂಬ ಭಯ ಕಾಡುವಂತಿದೆ.
ಸದಸ್ಯರ ಸಂಖ್ಯೆ ಹೆಚ್ಚಿಸುವುದು ಮತ್ತು ಮಹಿಳಾ ಮೀಸಲಾತಿಯನ್ನು ನೀಡುವ ಕೆಲಸಕ್ಕೆ ಈ ಎಲ್ಲಾ ಪಕ್ಷಗಳ ಮನಸ್ಸುಗಳು ಒಳಗಿನಿಂದಲೇ ಸ್ವಾಗತಿಸುತ್ತಿರುವುದಂತು ನಿಜ..ಯಾಕೆಂದರೆ ಇದರಿಂದಾಗಿ ಅವರ ಕುಟುಂಬದ ಎಲ್ಲಾ ಕುಡಿಗಳಿಗೆ ರಾಜಕೀಯ ಸ್ಥಾನ ಮಾನ ಆಥಿ೯ಕ ಸೌಕರ್ಯ ಅಂತಸ್ಥ ಪ್ರಾಪ್ತವಾಗುವ ಶುಭಗಳಿಗೆ ಬಂತಲ್ಲ ಅನ್ನುವ ಹೃದಯದ ಆನಂದವೇ ಬೇರೆ.
ಜನಸಾಮಾನ್ಯರ ನಾವು ರಾಜಕೀಯ ಮೀರಿ ಗಮನಹರಿಸಬೇಕಾದ ಬಹುಮುಖ್ಯ ಅಂಶಗಳೆಂದರೆ ಲೇೂಕ ಸಭಾ ಮತ್ತು ವಿಧಾನ ಸಭೆಗಳ ಸದಸ್ಯರ ಸಂಖ್ಯೆಯನ್ನು ಒಮ್ಮೆಲೆ ಈ ರೀತಿಯಲ್ಲಿ ಹೆಚ್ಚಿಸುವುದರಿಂದಾಗಿ ಈ ದೇಶದ ಆಥಿ೯ಕ ರಾಜಕೀಯ ಮತ್ತು ಆಡಳಿತ ವಲಯಗಳಲ್ಲಿ ಸುಧಾರಣೆ ಕಾಣಲು ಸಾಧ್ಯವೇ?.
ಇದಾಗಲೇ ಇದ್ದ 543 ಲೇೂಕಸಭಾ ಸದಸ್ಯರು ಮತ್ತು ರಾಜ್ಯಗಳಲ್ಲಿ ಇದ್ದ ವಿಧಾನ ಸಭಾ ಸದಸ್ಯರ ಉಪಟಳ ಮತ್ತು ಭಾರ ತಾಳಲಾರದೆ ದೇಶ ನಲುಗಿ ಹೇೂಗಿದೆ.ಇದಾಗಲೇ ಇವರನ್ನು ದೇಶದ ಬಿಳಿ ಆನೆಗಳ ಪಟ್ಟಿಗೆ ಸೇರಿಸಿ ಬಿಟ್ಟಿದ್ದೇವೆ.ಹಾಗಿರುವಾಗ ಇವರ ಸಂಖ್ಯೆ ಇನ್ನಷ್ಟು ದುಪ್ಪಟ್ಟು ಮಾಡುವುದರಿಂದಾಗಿ ದೇಶಕ್ಕೆ ಆಥಿ೯ಕ ಹೊರೆ ಮಾತ್ರವಲ್ಲ ಸಂಸದೀಯ ಶಿಸ್ತು ಇನ್ನಷ್ಟು ಹದಗೆಡ ಬಹುದು ಅನ್ನುವ ಭಯ ನಮ್ಮನ್ನು ಕಾಡುವಂತಾಗಿದೆ ಅನ್ನುವುದು ನೂರಕ್ಕೆ ನುಾರು ಸತ್ಯ.ಈಗ ಅದೇಷ್ಟೊ ಮಂದಿ ರಾಜಕೀಯದಲ್ಲಿ ತೊಡಗಿಸಿ ಮಹಿಳೆಯರು ಪುರುಷರು ನಮಗೂ ಮೀರಿ ಮೀರಿ ಮಿಂಚುವ ಸೀರೆ, ಬಿಳಿ ಅಂಗಿ, ಬಿಳಿ ಪೈಜಾಮು ಧರಿಸಿ ಸರಕಾರಿ ಪುಕ್ಕಟೆ ಕಾರಿನಲ್ಲಿ ಸಂಚರಿಸುವ ಸಕಲ ಸೌಲಭ್ಯಗಳನ್ನು ಪಡೆಯುವ ಕಾಲ ಬಂತಲ್ಲ ಅನ್ನುವ ಕನಸಿನಲ್ಲಿ ನಾರಿಶಕ್ತಿ ಧ್ವಜ ಹಿಡಿದು ತೆಲುವುದರಲ್ಲಿಯೇ ತಲ್ಲೀನರಾಗಿರುವುದು ವೇದ್ಯವಾಗುತ್ತಿದೆ.
*ಒಂದಂತು ಸತ್ಯ ನೀವೇಷ್ಟೆ ಸದಸ್ಯರ ಸಂಖ್ಯೆ ಹೆಚ್ಚಿಸಿ ಮಹಿಳಾ ಮೀಸಲಾತಿ ವೃದ್ಧಿಸಿ ಅಂತೂ ಕೊನೆಗೂ ಲಾಭ ಪಡೆದು ಕೊಳ್ಳುವವರು ಇದಾಗಲೇ ರಾಜಕೀಯದಲ್ಲಿ ತಳವೂರಿದ ಧನವಂತ ರಾಜಕಾರಣಿಗಳ ಕುಟುಂಬವಗ೯ ಜಾತಿಲೆಕ್ಕಾಚಾರದಲ್ಲಿ ಪ್ರಬಲರಿರುವರು ಬಿಟ್ಟರೆ ಬಡ ಮಧ್ಯಮ ವಗ೯ದ ವರಿಗೆ ಬರೇ ನಾರಿ ಶಕ್ತಿ ಧ್ವಜದೊಂದಿಗೆ ತಮ್ಮ ಪಕ್ಷಗಳ ಧ್ವಜ ಹಿಡಿದು ಬೀದಿ ಸುತ್ತಿ ಇಂತರಿಗೆ ಮತ ನೀಡಿ ನಾವುಗಳೇ ವಿಜಯಿಗಳು ಅನ್ನುವುದನ್ನುಬಿಟ್ಟರೆ ಪ್ರಜಾದೇಗುಲ ಪ್ರವೇಶ ಮಾಡುವ ನಿಮ್ಮ ಬಹುಕಾಲದ ಕನಸು ಬಹು ದೂರ ಅನ್ನುವುದನ್ನು ಮರೆಯ ಬೇಡಿ.
- ಪ್ರಸ್ತುತ ಭಾರತದ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯ ಶೈಲಿ ಗುಣಮಟ್ಟ ಹೆಚ್ಚಿಸುವುದಕ್ಕೆಜನಪ್ರತಿನಿಗಳ ಸಂಖ್ಯೆ ಜಾಸ್ತಿ ಮಾಡುವುದಾಗಲಿ ಮಹಿಳಾ ಮೀಸಲಾತಿ ನೀಡುವುದಾಗಲಿ ಇದು ನಮ್ಮಮೊದಲ ಪ್ರಾಶಸ್ತ್ಯವಲ್ಲ ಬದಲಾಗಿ ನಮ್ಮ ಜನಪ್ರತಿನಿಗಳ ಶಿಕ್ಷಣ ಆಹ೯ತೆ ಆಡಳಿತಾತ್ಮಕ ನೈತಿಕ ಗುಣಮಟ್ಟ ಹೇಗಿದೆ ಅನ್ನುವುದನ್ನುಮೊದಲು ಅಧ್ಯಯನ ನಡೆಸಿ ಇದನ್ನು ಹೇಗೆ ಸುಧಾರಿಸ ಬಹುದು ಅನ್ನುವುದರ ಕಡೆ ಲೇೂಕ ಸಭೆಯಲ್ಲಿ ಮೊದಲ ಚಚೆ೯ಯಾಗ ಬೇಕಾಗಿತ್ತು.ಅದೇಷ್ಟೊ ಮಂದಿ ಲೇೂಕ ಸಭಾ ಸದಸ್ಯರ ಮತ್ತು ವಿವಿಧ ರಾಜ್ಯಗಳ ವಿಧಾನ ಸಭಾ ಸದಸ್ಯರ ಇತಿಹಾಸವನ್ನು ನೇೂಡಿದರೆ ಎಂತವರನ್ನು ಬೆಚ್ಚಿಬೀಳಿಸುವಂತಿದೆ.ಅದೇಷ್ಟೊ ಮಂದಿ ಕ್ರಿಮಿನಲ್ ಅಪರಾಧದ ಹಿನ್ನೆಲೆಯಲ್ಲಿದ್ದಾರೆ ಕೆಲವರಂತೂ ಜೈಲಿನಲ್ಲಿ ಕೈದಿಗಳಾಗಿ ಕಂಬಿ ಎಣಿಸುತ್ತಿದ್ದಾರೆ..ಸಾಕಷ್ಟು ಮಂದಿ ಸದಸ್ಯರ ಮೇಲೆ ಭ್ರಷ್ಟಾಚಾರದ ಕೇಸುಗಳು ತನಿಖಾ ಹಂತದಲ್ಲಿ ಇದ್ದಾರೆ.ಇಂತಹ ಅನಹ೯ತೆಯ ಸದಸ್ಯರನ್ನು ಪ್ರಜಾ ದೇಗುಲಕ್ಕೆ ತುಂಬಿಸಿಕೊಳ್ಳುವ ಕಾರಣಕ್ಕಾಗಿಯೇ ವಿಶೇಷ ಲೇೂಕಸಭಾ ಅಧಿವೇಶನ ಕರೆಯ ಬೇಕಾಗಿತ್ತಾ? ಅನ್ನುವುದು ಜನಸಾಮಾನ್ಯರ ಮನದಾಳದ ಮಾತು.
- ಹಾಗಾದರೆ ಸದನದಲ್ಲಿ ಯೇೂಗ್ಯರಿಲ್ಲವೇ ಖಂಡಿತವಾಗಿಯೂ ಇದ್ದಾರೆ.ಇತ್ತೀಚೆಗೆ ಲೇೂಕ ಸಭೆಗೆ ಆಯ್ಕೆ ಗೊಂಡ ಡಾ.ಸಿ.ಎನ್.ಮಂಜುನಾಥ್ ರಂತಹ ಸದ್ಗುಣಿ ಜ್ಞಾನ ಸಂಪನ್ನ..ಉತ್ತಮ ಗುಣ ನಡತೆಯುಳ್ಳ ಸಾವಿರ ಸದಸ್ಯರನ್ನಾದರೂ ಲೇೂಕ ಸಭೆಗೆ ತುಂಬಿಸಿ ಕೊಳ್ಳಿ…ಇದು ನಮ್ಮ ಸಂಸತ್ತಿಗೂ ಭೂಷಣ..ಈ ನಿಟ್ಟಿನಲ್ಲಿ ಹೆಚ್ಚು ಚಿಂತನ ಮಂಥನ ನಡೆಯ ಬೇಕಾಗಿದೆ.ಇದು ನಡೆಯುತ್ತಿಲ್ಲ..ಇದು ನಮ್ಮ ಸಂಸತ್ತಿನ ದುರಂತ.
- ಜನಪ್ರತಿನಿಧಿಗಳು ಅಂದರೆ ಬರೇ ಶಂಕು ಸ್ಥಾಪನೆ ಉದ್ಘಾಟನೆ ಕೇೂಲ ನೇಮೇೂತ್ಸವಕ್ಕೆ ಸರಕಾರಿ ಖಚಿ೯ನಲ್ಲಿ ಹೇೂಗಿ ಒಂದಿಷ್ಟು ಜನರಿಗೆ ನಮಸ್ಕರಿಸಿ ಬರುವುದೇ ಸಾಧನೆಯ ಹೆಜ್ಜೆ ಆಗಬಾರದು..ಸದನದಲ್ಲಿ ಯಾವರೀತಿಯಲ್ಲಿ ನಡವಳಿಕೆ ತೇೂರಿಸ ಬೇಕು ಸಭಾಧ್ಯಕ್ಷರ ಮಾತಿಗೆ ಯಾವರೀತಿಯಲ್ಲಿ ಗೌರವಿಸ ಬೇಕು ಸಂಸದೀಯ ನಡಾವಳಿಕೆ ಮತ್ತು ಸಂವಿಧಾನವನ್ನು ಸ್ವಲ್ಪ ಮಟ್ಟಿಗೆ ಅಥ೯ಮಾಡಿಕೊಂಡಿರುವ ಆಹ೯ತಾ ಘನವೆತ್ತ ಅಭ್ಯರ್ಥಿಗಳನ್ನೆ ಪ್ರತಿಯೊಂದು ಪಕ್ಷ ತಮ್ಮ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದಾಗ ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆ ಕಾಣಲು ಸಾಧ್ಯ..ಹೊರತು ಬರೇ ಸಂಖ್ಯೆಯನ್ನು ಹೆಚ್ಚಿಸುದರಿಂದಾಗಲಿ..ಮಹಿಳಾ ಮೀಸಲಾತಿ ದಯಪಾಲಿಸುವುದರಿಂದಾಗಲಿ…ನಮ್ಮ ರಾಜಕೀಯ ಆಡಳಿತ ಸುಧಾರಣೆ ಕಾಣಲು ಸಾಧ್ಯವಿಲ್ಲ ಅನ್ನುವುದು ಈ ದೇಶದ ಪ್ರಬುದ್ಧ ಮತದಾರರ ಖಚಿತವಾದ ಅಭಿಪ್ರಾಯ.
- :ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.





