ಭಗವದ್ಗೀತೆಯ ಶ್ಲೋಕಾರ್ಥ-೩೨


ಅರ್ಜುನ ವಿಷಾದಯೋಗ
ಶ್ಲೋಕ ..೩೨

ಅರ್ಜುನ ಉವಾಚ…

ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ |
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ||

ಅರ್ಜುನ ಮಮಕಾರದ ಕಾರಣ ತನ್ನವರನ್ನೇ ಕೊಂದು ಯಾವ ಶ್ರೇಯಸ್ಸು ಪಡೆಯಲಾಗುವುದಿಲ್ಲಾ ಎಂದು ಕೃಷ್ಣನ ಬಳಿ ಹೇಳಿ , ನಂತರ ಅಹಂಕಾರ ವಶನಾಗಿ, ತಾನೇ ಯುದ್ಧ ಮಾಡುವವನು , ತಾನೇ ಎಲ್ಲರನ್ನೂ ಕೊಲ್ಲುವವನೆಂದೂ ಭಾವಿಸಿ ಮಾತನಾಡುತ್ತಿದ್ದಾನೆ .” .ಹೇ ಕೃಷ್ಣಾ, ನಾನು ಬದುಕಿನಲ್ಲಿ ವಿಜಯವನ್ನು , ರಾಜ್ಯವನ್ನು ಅಥವಾ ಸುಖವನ್ನಾಗಲೀ ಬಯಸುವವನಲ್ಲಾ ..ಹೇ ಗೋವಿಂದ !! ನಾವು ಹೀಗೆ ನಮ್ಮವರನ್ನೇ ಕೊಂದು ಪಡೆದ ಈ ರಾಜ್ಯದಿಂದ ಏನು ಉಪಯೋಗವಿದೆ?? ಅಥವಾ ಈ ಭೋಗಗಳಿಂದ , ಅಂತಹ ಜೀವನದಿಂದ ಯಾವ ಲಾಭವಿದೆ?? ” ಎಂದು ಕೃಷ್ಣನ ಬಳಿ ಅರ್ಜುನ ಪ್ರಶ್ನಿಸುತ್ತಿದ್ದಾನೆ..ಮೊದಲು ತಾನು ದುರ್ಯೋಧನನ ಪಕ್ಷಕ್ಕೆ ನಿಂತವರನ್ನೆಲ್ಲಾ ಕೊಲ್ಲುವೆ ಎಂದು ಬಂದು ಅರ್ಜುನ , ಈಗ ಈ ರೀತಿ ವರ್ತಿಸುತ್ತಿದ್ದಾನೆ.. ತನ್ನವರು ಎಂಬ ಮೋಹ , ತಾನೇ ಎಲ್ಲವನ್ನೂ ಮಾಡುವೆನೆಂಬ ಭಾವ ಇದಕ್ಕೆ ಕಾರಣ ..ತನ್ನವರನ್ನು ಕೊಂದು ಬಂದ ಯಾವುದೇ ರೀತಿಯ ಭಾಗ್ಯ ತಮಗೆ ಬೇಡ ಎಂದು ಹೇಳುತ್ತಿದ್ದಾನೆ. 🙏

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!