ಭಗವದ್ಗೀತೆಯ ಶ್ಲೋಕಾರ್ಥ-೨೭

ಪ್ರಥಮೋಧ್ಯಾಯ:

ಅರ್ಜುನ ವಿಷಾದಯೋಗ

ಸಂಜಯ ಉವಾಚ

ಶ್ಲೋಕ..೨೭

ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ|
ತಾನ್ಸಮೀಕ್ಷ್ಯ ನ ಕೌಂತೇಯ: ಸರ್ವಾನ್ಬಂಧೂನವಸ್ಥಿತಾನ್ ||

ಕೃಷ್ಣ ಅರ್ಜುನನ ಆದೇಶದಂತೆ ಎರಡೂ ಸೇನೆಯ ನಡುವೆ ರಥವನ್ನು ತಂದು ನಿಲ್ಲಿಸಿದಾಗ , ಅರ್ಜುನ ಎರಡೂ ಕಡೆಯಲ್ಲಿ ನಿಂತಿರುವ ತನ್ನ ಬಂಧು ಬಾಂಧವರನ್ನು ನೋಡಿದನು. ತನ್ನದೇ ಮಾವಂದಿರು , .ಕೃತವರ್ಮನಂತ ಹಿತೈಷಿಗಳನ್ನೂ ನೋಡಿದಾಗ ಅವನ ಮನದಲ್ಲಿ ಬಂಧು ಬಾಂಧವರ ಮೇಲಿನ ವ್ಯಾಮೋಹ ಜಾಗೃತವಾಯಿತು .. ಅದುವರೆಗೂ ಬಹಳ ಉತ್ಸಾಹದಿಂದ ಯುದ್ಧೋನ್ಮಾದದಿಂದ , ಅಹಂಕಾರದ ಮಾತನಾಡಿದ ಅರ್ಜುನನ ಮನಸ್ಥಿತಿ ಮುಂದಿನ ಕ್ಷಣಗಳಲ್ಲಿ ಏನಾಗುತ್ತದೆ ಎಂದು ನಾಳೆ ನೋಡೋಣ 🙏

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!