ಭಗವದ್ಗೀತೆಯ ಶ್ಲೋಕಾರ್ಥ- ೨೬
ಸಂಜಯ ಉವಾಚ…
ತತ್ರಾ ಪಶ್ಯತ್ ಸ್ಥಿತಾನ್ ಪಾರ್ಥ: ಪಿತೃನಥ ಪಿತಾಮಹನ್ |
ಆಚಾರ್ಯಾನ್ಮಾತುಲಾನ್ ಭ್ರಾತೃನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ||
ಅರ್ಜುನನ ಆದೇಶದಂತೆ ಕೃಷ್ಣ ರಥವನ್ನು ತಂದು ಎರಡೂ ಸೇನೆಯ ಮಧ್ಯೆ ಇರುವ ಭೀಷ್ಮ ದ್ರೋಣರ ಎದುರು ನಿಲ್ಲಿಸಿದಾಗ , ಅರ್ಜುನ ನೋಡುತ್ತಾನೆ ..ಎದುರಿಗೆ ಇರುವವರೆಲ್ಲರೂ ತನ್ನವರೇ , ತನ್ನ ಬಂಧು ಬಾಂಧವರೇ ಆಗಿರುವರು..ತನ್ನ ಪಿತೃಗಳನ್ನೂ , ಪಿತಾಮಹರನ್ನು, ,ಆಚಾರ್ಯರನ್ನೂ , ಸೋದರ ಮಾವಂದಿರನ್ನೂ, ಸೋದರರನ್ನು , ಪುತ್ರರನ್ನೂ ,ಪೌತ್ರರನ್ನೂ , ಮಿತ್ರರನ್ನೂ ನೋಡಿದನು.. ಅರ್ಜುನ ತನ್ನ ಎಲ್ಲಾ ರೀತಿಯ ಸಂಬಂಧಿಕರನ್ನೂ ನೋಡುವನು ..ತನ್ನ ಪಿತೃಗಳಿಗೆ ಸಮಕಾಲೀನರಾದ ಭೂರಿಶ್ರವರಂಥ ವ್ಯಕ್ತಿಗಳನ್ನೂ , ಭೀಷ್ಮ ಮತ್ತು ಸೋಮದತ್ತರಂಥಹ ಪಿತಾಮಹ ರನ್ನೂ , ದ್ರೋಣರು ಮತ್ತು ಕೃಪಾಚಾರ್ಯರಂತಹ ವಿದ್ಯೆ ಕಲಿಸಿದ ಗುರುಗಳನ್ನು , ಶಲ್ಯ -ಶಕುನಿಯಂತಹ ಸೋದರ ಮಾವಂದಿರನ್ನೂ , ದುರ್ಯೋಧನರಂಥಹ ಸೋದರರನ್ನೂ , ಲಕ್ಷ್ಮಣನಂಥಹ ಪುತ್ರರನ್ನೂ , ಅಶ್ವತ್ಥಾಮ ನಂತಹ ಮಿತ್ರನನ್ನೂ ನೋಡಿದನು ..ಇನ್ನು ಯಾರು ಯಾರನ್ನೆಲ್ಲಾ ನೋಡಿದನು ಎಂದು ನಾಳೆ ನೋಡೋಣ 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ ..೨೬