ಭಗವದ್ಗೀತೆಯ ಶ್ಲೋಕಾರ್ಥ-೨೫
ಪ್ರಥಮೋಧ್ಯಾಯ:
ಅರ್ಜುನ ವಿಷಾದಯೋಗ
ಶ್ಲೋಕ..೨೫
ಭೀಷ್ಮ ದ್ರೋಣ ಪ್ರಮುಖತ: ಸರ್ವೇಷಾಂಚ ಮಹೀಕ್ಷಿತಾಮ್|
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ||
ತನ್ನ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸಲು ಅರ್ಜುನ ಕೃಷ್ಣನಿಗೆ ಆದೇಶಿಸಿದಾಗ, ಕೃಷ್ಣ ರಥವನ್ನು ತಂದು ದುರ್ಯೋಧನ, ದುಶ್ಶಾಸನರ ಎದುರು ನಿಲ್ಲಿಸಲಿಲ್ಲ..ಬದಲಿಗೆ ಭೀಷ್ಮ ದ್ರೋಣ ಮುಂತಾದ ಪ್ರಮುಖರು ಕಣ್ಣಿಗೆ ಬೀಳುವಂತೆ ಅವರ ಎದುರು ತಂದು ನಿಲ್ಲಿಸಿ, ಅರ್ಜುನನಿಗೆ ಹೇಳುತ್ತಾನೆ.. ,” ಹೇ ಪಾರ್ಥ, ನಿನ್ನ ವಿರುದ್ಧ ಹೋರಾಡಲು , ನಿನ್ನ ಎದುರು ನಿಂತಿರುವ ಕುರುಗಳನ್ನು ನೋಡು !! .ಕೃಷ್ಣನನ್ನು ಇಂದ್ರಿಯಗಳ ಒಡೆಯನಾದ ಹೃಷೀಕೇಶ ಎಂದು ಸಂಭೋದಿಸಿದ್ದು ಇದೇ ಕಾರಣಕ್ಕೆ.. ಮನಸ್ಸಿನಲ್ಲಿ ಉಂಟಾಗುವ ಭಾವಗಳೆಲ್ಲವೂ ಭಗವಂತ ಬಲ್ಲ .. ಅರ್ಜುನ ಈಗ ಅಹಂಕಾರ ವಶನಾಗಿ, ತಾನೇ ಎಲ್ಲರನ್ನೂ ಕೊಲ್ಲುವವ ಎಂದು ಗರ್ವದಿಂದ ಮಾತನಾಡುತ್ತಿದ್ದ ..ಆದರೆ ಮನಃಶಾಸ್ತ್ರಜ್ಞನಾದ ಕೃಷ್ಣ ಅರ್ಜುನನಿಗೆ ಬೇಕಾದ ಚಿಕಿತ್ಸೆ ನೀಡಲೆಂದೇ ಹೀಗೆ ಮಾಡಿದ್ದಾನೆ ..ಈ ಭಾವಾವೇಶದಲ್ಲಿದ್ದ ಅರ್ಜುನನ ಸ್ಥಿತಿ ಮುಂದೆ ಏನಾಗುವುದೆಂದು ನಾಳೆ ನೋಡೋಣ 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





