ಭಗವದ್ಗೀತೆಯ ಶ್ಲೋಕಾರ್ಥ-೨೩

ಪ್ರಥಮೋಧ್ಯಾಯ:

ಅರ್ಜುನ ವಿಷಾದಯೋಗ

ಶ್ಲೋಕ..೨೩

ಯೋತ್ಸ್ಯ ಮಾನಾನವೇಕ್ಷೇಹಂ ಯ ಏತೇತ್ರ ಸಮಾಗತಾ: |
ಧಾರ್ತರಾಷ್ಟ್ರಸ್ಯ ದುರ್ಬುದ್ದೇರ್ಯುದ್ದೇ ಪ್ರಿಯಚಿಕೀರ್ಷವ:||

ಅರ್ಜುನನ ಮನಸ್ಸಿನಲ್ಲಿ ಭಾವಾವೇಶದ ಅಲೆಗಳು ಎದ್ದು, ಅವು ಅವನ ಮನಸ್ಸನ್ನು ವಿಕಾರಗೊಳಿಸುತ್ತಿವೆ .. ಹಾಗಾಗಿ ಕೃಷ್ಣನಿಗೇ ಆದೇಶ ಮಾಡುವ ಧ್ವನಿಯಲ್ಲಿ ತನ್ನ ರಥವನ್ನು ಎರಡು ಸೇನೆಯ ನಡುವೆ ನಿಲ್ಲಿಸಲು ಹೇಳಿ , ಧಾರ್ತ ರಾಷ್ಟ್ರನ ಮಕ್ಕಳಾದ ದುರ್ಯೋಧನ ನಂತಹ ದುಷ್ಟಬುದ್ಧಿ ಉಳ್ಳವನಿಗೂ ಸಹಾಯ ಮಾಡಲೆಂದು ಬಂದವರನ್ನು ತಾನು ನೋಡಬೇಕೆಂದು ಹೇಳುವನು . ಕೃಷ್ಣನ ಬಳಿ ಅರ್ಜುನ , ದುರ್ಯೋಧನ ದುರ್ಮಾರ್ಗದಲ್ಲಿ ಇರುವುದನ್ನು ಅರಿತೂ ಸಹ ಅಂತವನಿಗೆ ಸಹಾಯ ಮಾಡಿ ನಮ್ಮ ವಿರುದ್ಧ ಹೋರಾಡಲು ನಿಂತವರನ್ಪು ತಾನೊಮ್ಮೆ ನೋಡಬೇಕೆಂದು ಬಹಳ ಆತ್ಮವಿಶ್ವಾಸದಿಂದ ಹೇಳುತ್ತಿದ್ದಾನೆ . ತಮಗಾದ ಅವಮಾನ , ಮೋಸ , ಅನ್ಯಾಯಕ್ಕೆ ಪ್ರತೀಕಾರ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾನೆ ..ಆದರೆ ಭಗವಂತ ಎಂದಿಗೂ ತನ್ನ ನಿಜ ಭಕ್ತ ಅಹಂಕಾರ ವಶನಾಗಲು ಬಿಡುವುದಿಲ್ಲ.. ಅರ್ಜುನ ಕೃಷ್ಣನ ಸಂಬಂಧಿಯೂ , ಪ್ರಿಯ ಸಖನೂ, ಶ್ರೇಷ್ಠ ಶಿಷ್ಯನೂ ಹೌದು .. ಅರ್ಜುನ ಅಷ್ಟು ಶ್ರೇಷ್ಠನಾದ ನರನಾಗಿರುವುದರಿಂದಲೇ ನಾರಾಯಣ ಅವನನ್ನೇ ಗೀತೋಪದೇಶಕ್ಕೆ ಆಯ್ಕೆ ಮಾಡಿಕೊಂಡಿದ್ದಾನೆ …ಹೇಗೆ ಅರ್ಜುನನ ಮನಸ್ಸಿನ ಅಹಂಕಾರ ತೆಗೆದು ಅವನನ್ನು ಪರಿಶುದ್ಧ ಮಾಡಿ ಗೀತೆಯ ದಿವ್ಯಾಮೃತ ಹಂಚುವನೆಂದು ಮುಂದೆ ನೋಡೋಣ..🙏

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!