ಭಗವದ್ಗೀತೆಯ ಶ್ಲೋಕ..೨೧

ಭಗವದ್ಗೀತೆಯ ಶ್ಲೋಕಾರ್ಥ

ಪ್ರಥಮೋಧ್ಯಾಯ:

ಅರ್ಜುನ ವಿಷಾದಯೋಗ

ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ|
ಅರ್ಜುನ ಉವಾಚ
ಸೇನೆಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ ||

ಕೌರವರ ಸೇನೆ ಯುದ್ಧಕ್ಕೆ ಸಜ್ಜಾದುದನ್ನು ನೋಡಿ , ಅರ್ಜುನ ಕೃಷ್ಣನನ್ನು ಕುರಿತು ಹೇಳುತ್ತಾನೆ…”ಹೇ ಹೃಷೀಕೇಶ , ನನ್ನ ರಥವನ್ನು ಎರಡೂ ಸೇನೆಗಳ ಮಧ್ಯದಲ್ಲಿ ನಿಲ್ಲಿಸು ” . ಈ ಶ್ಲೋಕದಲ್ಲಿ ಅರ್ಜುನನ ಮಾತಿನಲ್ಲಿ ಅಹಂಕಾರದ ಭಾವವಿರುವುದನ್ನು ಗಮನಿಸಬಹುದು . ಕೃಷ್ಣನ ಬಳಿ ,ನಮ್ಮ ರಥವನ್ನು ಎರಡು ಸೇನೆಯ ನಡುವೆ ನಿಲ್ಲಿಸು ಎಂದು ಪ್ರಾರ್ಥನೆ ಮಾಡುವ ಬದಲು ,”ನನ್ನ ರಥ” ಎಂದು ಹೇಳುತ್ತಿದ್ದಾನೆ ..ಅಂದು ಕೃಷ್ಣನ ಬಳಿ ಹೋಗಿ , ನೀನೊಬ್ಬ ನಮ್ಮ ಪಕ್ಷದಲ್ಲಿ ಇದ್ದರೆ ಸಾಕೆಂದು ಭಿನ್ನವಿಸಿದವನು ,ಇಂದು ಅವನು ಭಗವಂತ ಎಂಬುದನ್ನೂ ಮರೆತು ಆಜ್ಞೆ ಮಾಡುತ್ತಿದ್ದಾನೆ . ಆದರೂ ಅಚ್ಯುತ ಅಂದರೆ ಸ್ವಯಂ ಚ್ಯುತಿ ಇಲ್ಲದವ ,ಭಕ್ತರ ಚ್ಯುತಿ ದೂರ ಮಾಡುವವನೆಂದು ಕೃಷ್ಣನನ್ನು ಸಂಬೋಧಿಸಿ , ಅಂತರಂಗದಲ್ಲಿ ರಂಗನ ಪ್ರತಿ ಭಕ್ತಿ ಭಾವ ಇರಿಸಿದವನಾಗಿದ್ದಾನೆ . ಅಹಂಕಾರ ಎಂತಹ ಮಹಾತ್ಮರ ಮನಸ್ಸನ್ನೂ ಒಂದು ಸಲ ಬಾಧಿಸಿ ಬುದ್ಧಿಯನ್ನು ಮಂಕುಗೊಳಿಸುವುದು ಎಂಬುದಕ್ಕೆ ಅರ್ಜುನನೇ ಸಾಕ್ಷಿ . ಈ ಅಹಂಕಾರದಲ್ಲಿ ಅರ್ಜುನ ಕೃಷ್ಣನ ಬಳಿ ಏನು ಹೇಳಿದನೆಂದು ನಾಳೆ ನೋಡೋಣ 🙏🙏

✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!