ಪ್ರಥಮೋಧ್ಯಾಯ-ಅರ್ಜುನ ವಿಷಾದಯೋಗ-ಶ್ಲೋಕ..೧೯0

ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ |
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್||

ಪಾಂಡವರ ಸೇನೆಯಿಂದ ಕೃಷ್ಣನ ಶಂಖನಾದದ ನಂತರ ಹಿರಿಯರೂ ,ಕಿರಿಯರೂ ಎಲ್ಲಾ ಸೇರಿ,ಒಟ್ಟು ಹದಿನೆಂಟು ಮಂದಿ ಶಂಖನಾದ ಮಾಡಿ ಅಧಾರ್ಮಿಕರ ವಿರುದ್ಧ ತಮ್ಮ ಯುದ್ಧೋನ್ಮಾದ ತೋರಿದರು .. ಮತ್ತು ಆ ಭಯಂಕರವಾದ ಶಬ್ದವು ಆಕಾಶ ಪೃಥ್ವಿಯಲ್ಲಿ ಪ್ರತಿಧ್ವನಿಸಿ , ಧೃತರಾಷ್ಟ್ರನ ಮಕ್ಕಳಾದ ದುರ್ಯೋಧನಾದಿಗಳ ಹೃದಯವನ್ನು ಭೇದಿಸಿತು. ಪಾಂಡವರ ಸೇನೆಯ ಶಿಸ್ತು ಬದ್ಧವಾದ ವ್ಯೂಹ ರಚನೆ ಮತ್ತು ಎಲ್ಲರೂ ಶಂಖನಾದ ಮಾಡಿದಾಗ ಆಕಾಶ ಭೂಮಿಯಲ್ಲಿ ಮೊಳಗಿದ ಪ್ರತಿಧ್ವನಿಯು ಎದುರಾಳಿ ಪಕ್ಷದವರನ್ನು ಮಾನಸಿಕವಾಗಿ ಸೋಲಿಸಿತ್ತು… ಗೀತೆಯ ಆರಂಭದಲ್ಲಿ ಧೃತರಾಷ್ಟ್ರ ಸಂಜಯನ ಬಳಿ , “ನನ್ನ ಮಕ್ಕಳು ಮತ್ತು ಪಾಂಡವರು ಏನು ಮಾಡಿದರೆಂದು “ಕೇಳಿದ್ದನು.. ಅದಕ್ಕೆ ಬೇಕಂತಲೇ ಇಲ್ಲಿ ಸಂಜಯ ಅವನಿಗೆ ಧೃತರಾಷ್ಟ್ರನ ಮಕ್ಕಳ ಎದೆಯನ್ನು ಭೇದಿಸಿತು ಎನ್ನುತ್ತಿದ್ದಾನೆ … ಹದಿನೆಂಟು ಶಂಖನಾದ ಮಾಡಿದ್ದು ಅದು ಜಯದ ಸಂಕೇತ ..ವ್ಯಾಸರು ಹದಿನೆಂಟು ಸಂಖ್ಯೆಗೆ ಬಹಳ ಮಹತ್ವ ಕೊಟ್ಟಿದ್ದಾರೆ ..ಅವರು ರಚಿಸಿದ ಮಹಾಭಾರತದಲ್ಲಿ ಹದಿನೆಂಟು ಪರ್ವಗಳು, ಕುರುಕ್ಷೇತ್ರ ಯುದ್ದ ನಡೆದಿದ್ದು ಹದಿನೆಂಟು ದಿನ , ಭಾಗವಹಿಸಿದ ಸೈನ್ಯ ವೂ ಸಹ ಹದಿನೆಂಟು ಅಕ್ಷೋಹಿಣಿ, ಭಗವದ್ಗೀತೆಯಲ್ಲಿ ಇರುವ ಅಧ್ಯಾಯಗಳು ಹದಿನೆಂಟು , ವ್ಯಾಸರು ರಚಿಸಿದ ಪುರಾಣಗಳು ಹದಿನೆಂಟು … ಮಹಾಭಾರತ ಯುದ್ಧದ ನಂತರ ಬದುಕುಳಿದವರೂ ಹದಿನೆಂಟು ಮಂದಿ , .. ಹೀಗೆ ಹದಿನೆಂಟು ಸಂಖ್ಯೆ ಜಯವನ್ನು ಸೂಚಿಸುವುದರಿಂದ ಹದಿನೆಂಟರ ನಂಟಿದೆ ..

ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!