ಪ್ರಥಮೋಧ್ಯಾಯ: ಅರ್ಜುನ ವಿಷಾದಯೋಗಶ್ಲೋಕ..೧೮

ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ|
ಸೌಭದ್ರಶ್ಚ ಮಹಾಬಾಹು: ಶಂಖಾನ್ ದಧ್ಮು: ಪೃಥಕ್ಪೃಥಕ್||

ಪಾಂಡವರ ಸೇನೆಯಿಂದ ಕೃಷ್ಣ ಶಂಖನಾದ ಮಾಡಿದ ಮೇಲೆ ಒಬ್ಬರ ನಂತರ ಒಬ್ಬರಂತೆ ಒಟ್ಟು ಹದಿನೆಂಟು ಮಂದಿ ಶಂಖನಾದ ಮಾಡಿದರು .. ದ್ರೌಪದಿಯ ತಂದೆ ದ್ರುಪದ ಹಿರಿಯನಾದರೂ , ತಾನೂ ಸ್ವ ಇಚ್ಛೆಯಿಂದ ಪಾಂಡವರ ಜಯಕ್ಕಾಗಿ ಶಂಖನಾದ ಮಾಡಿದನು ..ಹಾಗೇ ದ್ರೌಪದಿಯ ಐದು ಮಂದಿ ಪುತ್ರರು, ಮಹಾ ಪರಾಕ್ರಮಿಯಾದ ಸುಭದ್ರೆಯ ಮಗ ಅಭಿಮನ್ಯು ಸಹ ಕಿರಿಯರಾದರೂ ತಾವೂ ಯುದ್ಧೋನ್ಮಾದದಿಂದ ಶಂಖನಾದ ಮಾಡಿದರು .. ಇಲ್ಲಿ ನಾವು ಗಮನಿಸುವ ಅಂಶ ಪಾಂಡವರ ಸೇನೆಯಲ್ಲಿ ಶಿಸ್ತುಬದ್ಧವಾಗಿ ಶಂಖನಾದ ಮಾಡಿ ತಮ್ಮ ಒಗ್ಗಟ್ಟನ್ನು ತೋರಿದ್ದರೆ, ಕೌರವರ ಸೇನೆಯಲ್ಲಿ ಗದ್ದಲವೇ ಹೆಚ್ಚು..ಹಾಗಾಗಿ ಚಿಕ್ಕ ಸೇನೆ ಆದರೂ ಕೌರವರ ದೊಡ್ಡ ಸೇನೆಯ ವಿರುದ್ಧ ಜಯ ಸಾಧಿಸಲು ಸಮರ್ಥವಾಗಿತ್ತು..ಹದಿನೆಂಟು ಜನರು ಪಾಂಡವರ ಕಡೆಯಿಂದ ಶಂಖನಾದ ಮಾಡಿದ್ದರು ..ಏಕೆಂದರೆ ಹದಿನೆಂಟು ಜಯದ ಸಂಕೇತ ..ಹಾಗೇ ಇಲ್ಲಾ ನಾ ಶ್ಲೋಕದ ಸಂಖ್ಯೆ ಯೂ ಹದಿನೆಂಟು ಎಂಬುದು ವಿಶೇಷ.

ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!