ಪ್ರಥಮೋಧ್ಯಾಯ:ಅರ್ಜುನ ವಿಷಾದಯೋಗಶ್ಲೋಕ..೧೭

ಕಾಶ್ಯಶ್ಚ ಪರಮೇಷ್ವಾಸ: ಶಿಖಂಡೀ ಚ ಮಹಾರಥ:|
ದೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತ: ||

ಕೌರವರ ಕಡೆಯಿಂದ ಭೀಷ್ಮಾಚಾರ್ಯರು ಮಾತ್ರ ಶಂಖನಾದ ಮಾಡಿ , ಉಳಿದವರೆಲ್ಲರೂ ವೀರರಸ ಹೊಮ್ಮಿಸುವ ಕೊಂಬು ಕಹಳೆ ವಾದಿಸಿದರು..ಆದರೆ ಪಾಂಡವರ ಕಡೆಯಿಂದ ಕೃಷ್ಣ ಶಂಖನಾದ ಮಾಡಿದ ಮೇಲೆ ಕ್ರಮವಾಗಿ ಪಾಂಡವರೈದು ಮಂದಿ ಶಂಖನಾದ ಮಾಡಿ, ನಂತರ ಸೇನೆಯ ಮುಖ್ಯಸ್ಥರು ಶಂಖನಾದ ಮಾಡಿ ತಮ್ಮ ಯುದ್ಧೋನ್ಮಾದ ತೋರಿದರು.. ಅವರಲ್ಲಿ ವಯಸ್ಸಿನಲ್ಲಿ ಹಿರಿಯನಾದ ಕಾಶೀ ರಾಜ, ಮಹಾರಥನಾದ ಶಿಖಂಡಿ , ಸೇನಾಧಿಪತಿಯಾದ ಧೃಷ್ಟದ್ಯುಮ್ನ ಹಾಗೂ ವಿರಾಟರಾಜ , ಸೋಲರಿಯದ ಸಾತ್ಯಕಿಯೊಂದಿಗೆ ತಮ್ಮ ತಮ್ಮ ಶಂಖವನ್ನು ಊದಿ , ಪಾಂಡವರ ಸೇನೆಯ ಬಲವನ್ನು ತೋರಿಸಿದರು .. ಇಲ್ಲಿ ಕಾಶೀರಾಜ,ವಿರಾಟರಾಜರೆಲ್ಲರೂ ಬಹಳ ಹಿರಿಯರಾದರೂ ಪಾಂಡವರ ಮೇಲಿನ ಪ್ರೀತಿಯಿಂದ ಯುದ್ಧಕ್ಕೆ ಬಂದವರು ..ಹಾಗೇ ಶಿಖಂಡಿಯನ್ನು “ಮಹಾರಥ” ಎಂದು ಸಂಬೋಧಿಸಲಾಗಿದೆ . ಶಿಖಂಡಿ ಎಂದರೆ ನಪುಂಸಕ ..ಬಲಹೀನ ಎಂದು ತಿಳಿಯುವರು. ಆದರೆ ಹುಟ್ಟುವಾಗ ಹೆಣ್ಣಾಗಿ ,ನಂತರ ಗಂಡಾಗಿ ಪರಿವರ್ತನೆ ಆದವವು ಶಿಖಂಡಿ . ಹಾಗೇ ಶಿಖ ಅಂದರೆ ತಲೆಗೂದಲು .. ಕೂದಲನ್ನು ಮೊಟ್ಟೆಯ ಆಕಾರದಲ್ಲಿ ಹಿಂದಕ್ಕೆ ಬಾಚಿ ಕಟ್ಟಿದವನು ಶಿಖಂಡಿ..ಅವನು ಸಾಮರ್ಥ್ಯದಲ್ಲಿ ಎಲ್ಲರನ್ನೂ ಮೀರಿಸಿದವ, ಕುರುಕಲು ಪಿತಾಮಹ ಭೀಷ್ಮಾಚಾರ್ಯರ ಸಾವಿಗೆ ಕಾರಣನಾದವನು… ಇನ್ನು ದ್ರೌಪದಿಯ ಅಣ್ಣ ಧೃಷ್ಟದ್ಯುಮ್ನ ಸೇನಾಧಿಪತಿಯ ಸ್ಥಾನದಲ್ಲಿದ್ದು ಶಂಖನಾದ ಮಾಡಿ ಸೇನೆಯನ್ನು ಹುರಿದುಂಬಿಸಿದ .. ಹೀಗೆ ಇವರೆಲ್ಲ ಪಾಂಡವರಿಗೆ ಜಯ ಸಿಗಲೆಂದು ಶಂಖನಾದ ಮಾಡಿದರು.

ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!