“ಅಣ್ಣಾಮಲೈ” ಅನ್ನುವ ರಾಜಕೀಯ ಪ್ರಯೇೂಗ ಶಾಲೆ…
ಅಣ್ಣಾ ಮಲೈ ಅನ್ನುವ ಹೆಸರು ಅವರ ತವರು ನಾಡು ತಮಿಳುನಾಡಿಗಿಂತ ಕನಾ೯ಟದಲ್ಲಿಯೇ ಹೆಚ್ಚು ಪ್ರಚಲಿತವಾಗಿದೆ. ಇದು ಕೂಡ ಅವರಿಗೆ ತಮಿಳುನಾಡಿನಲ್ಲಿ ಹಿನ್ನಡೆಗೆ ಕಾರಣ ಅನ್ನುವುದು ಅಷ್ಟೇ ಸತ್ಯ. ಅವರು ಕನಾ೯ಟಕದಲ್ಲಿ ಜಿಲ್ಲಾ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಯಾಗಿ ಸಾಕಷ್ಟು ಹೆಸರು ಗಳಿಸುವ ಉಚ್ಚರಾಯ ಸ್ಥಿತಿಯಲ್ಲಿ ಇರುವಾಗಲೇ ಅವರಿಗೊಂದು ರಾಜಕೀಯದ ಹುಚ್ಚು ಅಭಿಲಾಸೆ ಚಿಗುರೊಡೆಯಿತು.
ಏನು ಆಹ೯ತೆ ಇಲ್ಲದ ರಾಜಕೀಯ ವ್ಯಕ್ತಿಗಳ ಬಾಯಿಯಿಂದ ದಿನ ನಿತ್ಯ ಪಾಠ ಹೇಳಿಸಿಕೊಳ್ಳುವುದಕ್ಕಿಂತ ತಾನೇ ಪಾಠ ಹೇಳುವ ರಾಜಕೀಯ ಸ್ಥಾನಕ್ಕೆ ಏರಿದರೆ ಹೇಗೆ ಅನ್ನುವ ಮಹಾದಾಸೆ ಹುಟ್ಟಿಕೊಂಡಿರಬೇಕು. ಇದಕ್ಕೂ ಕನಾ೯ಟಕದ ಬಿಜೆಪಿಯ ಕೆಲ ರಾಜಕೀಯ ಧುರೀಣರು ಕಾರಣಕತ೯ರು ಅನ್ನುವುದನ್ನು ಬಿಜೆಪಿಯ ನಾಯಕರೇ ಸ್ವತಃ ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ ಕೇವಲ ತಮ್ಮ ಹತ್ತು ವರುಷಗಳ ಐ.ಪಿ.ಎಸ್.ಸೇವಾ ಹುದ್ದೆಯಿಂದ ಸ್ವಯಂ ನಿವೃತ್ತಿ ಘೇೂಷಿಸಿ ಬಿಜೆಪಿಯ ಕಡೆಗೆ ಒಲವು ತೇೂರಿಸುವುದರೊಂದಿಗೆ ಬಿಜೆಪಿಯ ರಾಷ್ಟ್ರ ನಾಯಕರ ಜೊತೆಗೂ ಹೆಚ್ಚಿನ ಒಡನಾಟ ಬೆಳೆಸಿಕೊಂಡು ಬಂದರು.
ಈ ಅಣ್ಣಾಮಲೈ ಅನ್ನುವ ಹೆಸರೆ ತಮಿಳುನಾಡಿನ ಮಣ್ಣಿನ ಹೆಸರು. ಮಾತ್ರವಲ್ಲ ಹೊಸ ರಕ್ತ ಹೊಸ ಶಕ್ತಿ ಹೊಸ ಚಿಂತನೆಗಳ ಯುವ ಶಕ್ತಿಯನ್ನೆ ಬಿಜೆಪಿಯ ಹೊಸ ಅಸ್ತ್ರವಾಗಿ ತಮಿಳುನಾಡಿನಲ್ಲಿ ಬಳಸಬಹುದು ಅನ್ನುವ ದೂರಾಲೇೂಚನೆಯೊಂದಿಗೆ ಅಣ್ಣಾಮಲೈ ಅವರನ್ನು ಒಮ್ಮೆಲೆ ತಮಿಳುನಾಡಿನ ರಾಜಕೀಯದ ಮುಂಚೂಣಿ ನಾಯಕತ್ವದ ಪೀಠಕ್ಕೆ ತಂದು ಕೂರಿಸಿ ಬಿಟ್ಟರು. ಅದಾಗಲೇ ತಮಿಳುನಾಡಿನಲ್ಲಿ ಬಲವಾಗಿ ಬೇರು ಬಿಟ್ಟಿರುವ ಡಿಎಂಕೆ ಮತ್ತು ಎಐಡಿಎಂಕೆಯ ಬೇರುಗಳನ್ನು ಅಲುಗಾಡಿಸ ಬೇಕಾದರೆ ಅಣ್ಣಾಮಲೈ ಅಂತಹ ವ್ಯಕ್ತಿಯೇ ಅನಿವಾರ್ಯ ಅನ್ನುವ ತೀಮಾ೯ನಕ್ಕೆ ಬಿಜೆಪಿಯ ವರಿಷ್ಠರು ಬಂದೇ ಬಿಟ್ಟರು.
ಇದರ ಮೊದಲ ಪ್ರಯೇೂಗಾಥ೯ವಾಗಿ ವಿಧಾನ ಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಕೊಯಂಮುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಹೆಸರಿನಲ್ಲಿ ನಿಂತು ಪ್ರಥಮ ಚುಂಬನದಲ್ಲಿಯೇ ದಂತ ಭಗ್ನ ಅನ್ನುವ ರಾಜಕೀಯ ಅನುಭವ ಅಣ್ಣಾಮಲೈ ಯವರ ಪಾಲಿಗೆ ಆಯಿತು. ಆದರೂ ಪರವಾಗಿಲ್ಲ ಬಿಜೆಪಿಗೆ ತಮಿಳುನಾಡಿನಲ್ಲಿ ಜೀವ ತುಂಬುವ ಭರವಸೆಯೊಂದಿಗೆ ಬಿಜೆಪಿಯಲ್ಲಿ ಮುಂದುವರಿದರು. ಹಲವು ಸಂದರ್ಭದಲ್ಲಿ ಅವರಿಗೆ ಪಕ್ಷದೊಳಗೆ ಮನಸ್ಸು ನೇೂಯುವ ಅನುಭವವೂ ಆಯಿತು. ಆದರೂ ಇದನ್ನೆಲ್ಲಾ ಸಹಿಸಿಕೊಂಡ ಅಣ್ಣಾಮಲೈಗೆ ಅತೀ ಹೆಚ್ಚಿನ ಕೆಟ್ಟ ಕಹಿಅನುಭವಾಗಿದ್ದು ಇತ್ತೀಚಿನ ವಿಧಾನ ಸಭಾ ಚುನಾವಣಾ ಕಾಲದಲ್ಲಿ ಬಿಜೆಪಿ ಎ.ಐ.ಡಿ.ಎಂ.ಕೆ ಜೊತೆ ಹೊಂದಾಣಿಕೆ ಮಾಡಿಕೊಂಡು ಅಣ್ಣಾಮಲೈ ಯವರ ಕನಸುಗಳನ್ನು ನುಚ್ಚುನೂರು ಮಾಡಿದ ರಾಜಕೀಯ ಬೆಳವಣಿಗೆ ಅನ್ನುವುದು ಕಟ್ಟು ಸತ್ಯ. ಈ ಎಲ್ಲಾ ಸಂದರ್ಭದಲ್ಲಿ ರಾಜಕೀಯದಿಂದ ಮನನೊಂದು ಅಣ್ಣಾಮಲೈ ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟುವ ಹೊಸ ಹುರುಪಿನೊಂದಿಗೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪ್ರಯೇೂಗಕ್ಕೆ ಅಡಿಗಲ್ಲು ಹಾಕಿಯೇ ಬಿಟ್ಟರು.
ಹಾಗಾದರೆ ಈ ಸ್ಪೂರ್ತಿಯ ಚಿಲುಮೆಯಿಂದ ಎದ್ದು ಬಂದಿರುವ ಅಣ್ಣಾಮಲೈ ಯವರ ರಾಜಕೀಯ ಪ್ರಯೇೂಗ ಮುಂದೆ ಯಶಸ್ವಿ ಕಾಣ ಬಹುದೆ ಅನ್ನುವ ಯಕ್ಷ ಪ್ರಶ್ನೆ ನಮ್ಮ ಮುಂದಿದೆ.
- ತಮಿಳುನಾಡಿನಲ್ಲಿ ಬಿಜೆಪಿಗೆ ಸ್ವ ಸಾಮಾಥ್ಯ೯ದಿಂದ ತಲೆ ಎತ್ತುವುದು ಸದ್ಯಕ್ಕೆ ಕಷ್ಟ ಸಾಧ್ಯ ಅನ್ನುವ ಒಂದು ಸಂದೇಶವನ್ನು ಅಣ್ಣಾಮಲೈ ಯವರು ರಾಜಿನಾಮೆ ನೀಡುವ ಮೂಲಕ ಬಿಜೆಪಿಯನ್ನು ಎಚ್ಚರಿಸಿದಂತಿದೆ.
- ಕೇವಲ ಒಂದುವರೆ ವರುಷಗಳ ರಾಜಕೀಯ ಹೇೂರಾಟದ ಸಂಕಲ್ಪದಿಂದಲೇ ಟಿವಿಕೆ ಅನ್ನುವ ಪಕ್ಷ ಕೇವಲ ವಿಜಯ್ ಅವರ ಹೆಸರಿನಲ್ಲಿ ಪವಾಡ ಸೃಷ್ಟಿ ಮಾಡಿದೆ ಅಂದರೆ ಇದು ತನ್ನಿಂದ ಯಾಕೆ ಸಾಧ್ಯವಿಲ್ಲ ಅನ್ನುವ ಒಳಗಿನ ಧೈರ್ಯ ಅಣ್ಣಾಮಲೈ ಅವರನ್ನು ಮತ್ತೆ ರಾಜಕೀಯದಲ್ಲಿ ಹೊಸ ಸ್ಪೂರ್ತಿ ತುಂಬಿ ತಂದಿರಬೇಕು.
- ಒಂದಂತೂ ಸತ್ಯ ಈ ತಮಿಳುನಾಡಿನ ಮತದಾರರು ತುಂಬಾ ಪ್ರಾದೇಶಿಕ ಮನೇೂಭಾವದ ಜನರು ಅನ್ನುವುದನ್ನು ತಮಿಳುನಾಡು ರಾಜಕೀಯ ಇತಿಹಾಸವೇ ದಾಖಲಿಸಿ ಬಿಟ್ಟಿದೆ. ಅವರ ನೆಲ ಜಲ ಭಾಷೆ ಪ್ರಾದೇಶಿಕ ನಾಯಕತ್ವವನ್ನು ಗಟ್ಟಿ ಗೊಳಿಸಿ ಬಿಟ್ಟಿದೆ.ಇದರ ಜೊತೆಗೆ ಸಿನಿಮಾದ ಸಿನಿಕತನವೂ ಅಂಟಿಕೊಂಡ ಕಾರಣ ಸಿನಿಮಾ ಡೈಲಾಗ್ ತಮಿಳುನಾಡಿನ ರಾಜಕೀಯ ಭವಿಷ್ಯವನ್ನು ನಿಧ೯ರಿಸಿ ಬಿಡುತ್ತದೆ.ಹಾಗಾಗಿ ಈ ಮಧ್ಯದಲ್ಲಿ ಅಣ್ಣಾಮಲೈ ಅಂತಹ ಒಬ್ಬ ಸುಶಿಕ್ಷಿತ ವ್ಯಕ್ತಿಯನ್ನು ತಮಿಳುನಾಡಿನ ಜನ ಎಷ್ಟರ ಮಟ್ಟಿಗೆ ಒಪ್ಪಿಕೊಂಡಾರು ಅನ್ನುವುದು ನಮ್ಮ ಮುಂದಿರುವ ಇನ್ನೊಂದು ಅತೀ ದೊಡ್ಡ ಪ್ರಶ್ನೆ.
- ಕೇವಲ ಒಂದೇ ದಿನದಲ್ಲಿ ಹದಿನೈದು ಲಕ್ಷ ಮಂದಿಯಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿದ್ದಾರೆ. ಅನ್ನುವ ಸುದ್ದಿಯನ್ನು ಕೇಳಿದ್ದೇನೆ. ಇದರಲ್ಲಿ ತಮಿಳುನಾಡಿನ ಮಂದಿ ಎಷ್ಟು ಕನ್ನಡಿಗರು ಎಷ್ಟು ಅನ್ನುವುದು ಅಷ್ಟೇ ಮುಖ್ಯ.
- ಅಣ್ಣಾಮಲೈ ಅಂತಹ ರಾಷ್ಟ್ರವಾದಿ ಚಿಂತಕರು ತಮಿಳುನಾಡಿನಲ್ಲಿ ರಾಜಕೀಯವಾಗಿ ಗಟ್ಟಿಯಾಗಿ ಉಸಿರಾಡ ಬೇಕಾದರೆ ಅವರು ತಮ್ಮ ಉಸಿರನ್ನು ತಮಿಳುನಾಡಿಗೆ ಸೀಮಿತ ಪಡಿಸಿ ಉಸಿರಾಟ ಮಾಡ ಬೇಕಾದ ಪರಿಸ್ಥಿತಿ ನಿಮಾ೯ಣ ಮಾಡುವ ಅನಿವಾರ್ಯತೆ ಸೃಷ್ಟಿ ಮಾಡಿದರು ಆಶ್ಚರ್ಯ ಪಡಬೇಕಾಗಿಲ್ಲ. ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.





