ಭಗವದ್ಗೀತೆಯ ಶ್ಲೋಕಾರ್ಥ ಪ್ರಥಮೋಧ್ಯಾಯ: ಅರ್ಜುನ ವಿಷಾದಯೋಗ
ಶ್ಲೋಕ..13 ತತ: ಶಂಖಾಶ್ಚ ಭೇರ್ಯಶ್ಚ ಪಣವಾನಕಾ ಗೋಮುಖಾ: |
ಸಹಸೈವಾಭ್ಯಹನ್ಯಂತ ಸ ಶಬ್ದಸ್ತು ಮುಲೋsಭವತ್||
ದುರ್ಯೋಧನನ ಮನಸ್ಸಿನ ಖುಷಿಗಾಗಿ, ಕುರುಕುಲ ವೃದ್ಧರು, ಜ್ಞಾನ ವೃದ್ಧರೂ, ಕೌರವ ಸೇನೆಯ ಮುಖ್ಯಸ್ಥರೂ ಆದ ಭೀಷ್ಮಾಚಾರ್ಯರು ಶಂಖನಾದವನ್ನು ಮಾಡಿದರು. ದುಷ್ಟ ಶಕ್ತಿಗಳನ್ನು ಹೊಡೆದೋಡಿಸಲು ಹಾಗೂ ದೇವತೆಗಳ ಪ್ರೀತಿಗಾಗಿ ಮಾಡುವ ಶಂಖನಾದದಿಂದ ಯುದ್ಧಕ್ಕೆ ತಮ್ಮ ಸೇನೆ ಸಜ್ಜಾಗಿದೆ ಎಂದು ತಿಳಿಸಲು ಸಿಂಹನಾದ ಮಾಡಿದರು ..ಅವರ ಶಂಖನಾದ ಆಗುತ್ತಿದ್ದಂತೆ, ಕೌರವ ಸೇನೆಯಲ್ಲಿ ಶಂಖಗಳು, ತಮಟೆಗಳು, ಡೋಲು ನಗಾರಿ ಕೊಂಬು ಕಹಳೆಗಳು ಎಲ್ಲವೂ ಒಮ್ಮೆಲೇ ಬಾರಿಸಲ್ಪಟ್ಟವು.. ನಂತರ ದುರ್ಯೋಧನ ಅಥವಾ ಅವನ ತಮ್ಮಂದಿರು ಶಂಖನಾದ ಮಾಡದೇ , ಇಡೀ ಸೇನೆಯ ಸೇನಾಪತಿಗಳು ಮತ್ತು ಸೈನಿಕರು ಶಂಖನಾದ ಮಾಡಿದರು..ಹಾಗೇ ವೀರರಸವನ್ನು ಪುಟಿದೇಳಿಸುವ ಸಲುವಾಗಿ ಈ ರೀತಿಯ ವಾದ್ಯ ನುಡಿಸಲಾಯಿತು . ಆದರೂ ಒಂದು ರೀತಿಯಲ್ಲಿ ವ್ಯವಸ್ಥಿತವಾಗಿ ಸೇನೆ ಸಜ್ಜುಗೊಳ್ಳದೇ, ಗೌಜು ಗದ್ದಲದಿಂದ ಕೂಡಿದಂತಿತ್ತು ..ಇದರಿಂದ ದುರ್ಯೋಧನ ತನ್ನ ಸೇನೆಯನ್ನು ಸರಿಯಾಗಿ ರೂಪಿಸಿರಲಿಲ್ಲ ಎಂಬುದು ಸ್ಪಷ್ಟವಾಗುತ್ತಿತ್ತು.. ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದರೂ , ಅಧರ್ಮದ ಬೆನ್ನೇರಿ ಹೊರಟರೆ ವಿನಾಶ ಖಚಿತ..ಇವರ ಶಂಖನಾದಕ್ಕೆ ಪಾಂಡವರ ಸೇನೆಯಲ್ಲಿ ಯಾರ್ಯಾರು ಶಂಖನಾದ ಮಾಡಿದರು..ನಾಳೆ ನೋಡೋಣ 🙏
ಧನ್ಯವಾದಗಳು 🙏
✍️ ಸುನೀತಾ ಉಡುಪ
ಜನ್ನಾಡಿ..ಬಿದ್ಕಲ್ ಕಟ್ಟೆ





