ಭಗವದ್ಗೀತೆಯ ಶ್ಲೋಕಾರ್ಥ: ಅರ್ಜುನ ವಿಷಾದಯೋಗ- ಶ್ಲೋಕ..೧೧

ಪ್ರಥಮೋಧ್ಯಾಯ: ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾ:| ಭೀಷ್ಮ ಮೇವಾಭಿರಕ್ಷಂತು ಭವಂತ: ಸರ್ವ ಏವ ಹಿ||

ಸಂಜಯ ಉವಾಚ

vದುರ್ಯೋಧನ ತನ್ನ ಮನದಲ್ಲಿ ಇರುವ ಭಾವ ವಿಕಾರವನ್ನು ಗುರುಗಳ ಬಳಿ ನಯವಾಗಿಯೇ ಹೇಳಿ , ತನ್ನ ತಾಮಸ ಗುಣ ತೋರುತ್ತಿದ್ದಾನೆ..ತನ್ನ ಪರವಾಗಿ ಹೋರಾಡಲು ಬಂದರೂ ಸಹ , ನೀವೆಲ್ಲರೂ ಪಾಂಡವರ ಹಿತ ಬಯಸುವವರು ಎಂದು ಚುಚ್ಚಿ ಮಾತನಾಡುತ್ತಿದ್ದಾನೆ …ಅವನ ಮಾತುಗಳೇ ಅವನ ಗೊಂದಲವನ್ನು ತೋರ್ಪಡಿಸುತ್ತಿವೆ …ಹಾಗೇ ತಾನು ರಾಜನೆಂಬ ಅಹಂಕಾರದಿಂದ ಗುರುಗಳಿಗೇ ಆಜ್ಞೆ ಮಾಡುತ್ತಿದ್ದಾನೆ .. ದ್ರೋಣಾಚಾರ್ಯರು ಯುದ್ಧ ವಿಶಾರದರು..ಅವರೇ ಕೌರವ ಮತ್ತು ಪಾಂಡವರಿಬ್ಬರಿಗೂ ಶಸ್ತ್ರಾಭ್ಯಾಸ ಮಾಡಿಸಿದವರು ..ಯುದ್ಧ ನೀತಿ ತಿಳಿಸಿಕೊಟ್ಟವರು….ಇಂದು ದುರ್ಯೋಧನ ಅವರಿಗೇ ಯುದ್ಧದ ನಿಯಮ ಹಾಗೂ ಹೇಗೆ ತಯಾರಾಗಬೇಕು ಎಂಬುದನ್ನು ಹೇಳುತ್ತಿದ್ದಾನೆ …ಗುರುಗಳಿಗೆ ಆದೇಶಿಸುವಂತೆ ನುಡಿಯುತ್ತಾನೆ ..”..ನೀವೆಲ್ಲರೂ ನಿಮ್ಮ ನಿಮ್ಮ ಆಯಕಟ್ಟಿನ ಸೂಕ್ಷ್ಮ ಸ್ಥಳಗಳಲ್ಲಿ, ನಿಮಗೆ ಗೊತ್ತುಪಡಿಸಿದ ಜಾಗದಲ್ಲಿ ನಿಂತು ಭೀಷ್ಮಾಚಾರ್ಯರನ್ನೇ ರಕ್ಷಣೆ ಮಾಡಿ. ಏಕೆಂದರೆ ಅವರೇ ನಮ್ಮ ಸೈನ್ಯದ ನಾಯಕರು ..ಅವರನ್ನು ರಕ್ಷಣೆ ಮಾಡಿದರೆ ಅವರು ನಮಗೆ ಜಯವನ್ನು ತಂದು ಕೊಡುವರು…ಹಾಗೇ ಶತ್ರುಗಳು ಒಳಗೆ ನುಸುಳಿ ಬಂದು ವ್ಯೂಹವನ್ನು ಬೇಧಿಸದಂತೆ ಕಣ್ಗಾವಲು ಮಾಡಿ “..ಎಂದು ಹೇಳುವನು .

ಸುನೀತಾ ಉಡುಪ- ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!