ಕೊರೋನಾ ಮಹಾಮಾರಿ ಬಗ್ಗೆ ಸಂಶಯವಿದೆಯೇ ? ಈ ಸ್ಟೋರಿ ಓದಿ…

ಸ್ನೇಹಿತರೆ ನಾನು ಸುಮಾರು 50ರ ಆಸುಪಾಸಿನ ವ್ಯವಹಾರಸ್ಥ… ನನಗೆ ಕೆಲವು ವಾರಗಳ ಹಿಂದೆ ಒಂದು ದಿನ ರಾತ್ರಿ ಸ್ವಲ್ಪ ಜ್ವರ ಮೈಕೈ ನೋವು ಚಳಿ ಬಂದಂತಾಗಿತ್ತು. ನಾನು ನನ್ನ ಒಬ್ಬ ಪರಿಚಯಸ್ಥ ಮತ್ತು ದೂರದ ಸಂಬಂಧಿ ವೈದ್ಯರ ಹತ್ತಿರ ಈ ವಿಚಾರವನ್ನು ಮಾರನೆಯ ದಿನ ಬೆಳಿಗ್ಗೆ ಹೇಳಿಕೊಂಡಾಗ, ಇದು ಕೊರೋನಾದ ಲಕ್ಷಣ ಇರುವ ಸಾಧ್ಯತೆ ಇದ್ದು, ನೀವು ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಹೇಳಿದರು.

ನಾನು ಹಾಗೆ ಮಾಡಿದಾಗ ನನಗೆ ಕೊರೋನ ಇರುವುದು ದೃಢಪಟ್ಟಿತು..
ಅವರು ಕೆಲವೊಂದು ಮಾತ್ರೆಗಳನ್ನು ನನಗೆ ಸಲಹೆ ಮಾಡಿದರು ಮತ್ತು ನಾನು ಮನೆಯಲ್ಲಿಯೇ ಐಸೋಲೇಶನ್ ಆಗುವುದೆಂದು ನಿರ್ಧರಿಸಿ ನಮ್ಮ ಮನೆಯಲ್ಲಿ ಉಳಿದುಕೊಂಡೆ. ನನಗೆ ಒಂದೆರಡು ದಿನಗಳಲ್ಲಿ ರೋಗಲಕ್ಷಣಗಳು ಕಡಿಮೆಯಾಗಿ ನಾನು ಮುಂಚಿನಂತೆ  ಆದೆ .. ಆದರೆ ನಾನು ನನ್ನ ಮನೆಯ ರೂಮಿನಲ್ಲಿಯೇ ಬಂಧಿಯಾದೆ…

ಸುಮಾರು 7 ದಿನಗಳ ನಂತರ ನಮ್ಮ ಮನೆಯವರ ಕೋರೋಣ ಪರೀಕ್ಷೆ ಮಾಡಿದಾಗ ನನ್ನ ಇಬ್ಬರು ಮಕ್ಕಳಿಗೆ ಕರೋನ ಇರುವುದು ದೃಢಪಟ್ಟಿತ್ತು. ಆದರೆ ಅವರಿಗೆ ಯಾವುದೇ ರೋಗಲಕ್ಷಣಗಳು ಇರಲಿಲ್ಲ.. ಇನ್ನೂ  ಹದಿನಾಲ್ಕು ದಿನಗಳಷ್ಟು ಕಾಲ ಮತ್ತೆ ಮನೆಯಲ್ಲೇ  ಬಂಧಿಯಾಗಿರಬೇಕು,  ಎಂಬುದನ್ನು ನೆನೆಸಿಕೊಂಡು ನನ್ನ ಮನಸ್ಸಿಗೆ ಆಘಾತವಾಯಿತು.  ಇಷ್ಟೊಂದು ದಿವಸ ಮನೆಯಲ್ಲೇ ಇದ್ದರೆ ನನ್ನ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು  ನನಗೆ ಅನಿಸಿತು…

ಇದು ಸರ್ಕಾರ ಮತ್ತು ವೈದ್ಯರುಗಳು ಹಣ ಮಾಡುವುದಕ್ಕೋಸ್ಕರ ಮಾಡುತ್ತಿರುವ ಕಿತಾಪತಿ ಅಂತ ನಾನು ತಿಳಿದೆ..
ನನಗೆ ಪರೀಕ್ಷೆ ಮಾಡಲು ಹೇಳಿದ ನನ್ನ ಪರಿಚಯಸ್ಥ ನಂಬಿಕಸ್ಥ ವೈದ್ಯರಿಗೆ ಫೋನ್ ಮಾಡಿ ಸ್ವಲ್ಪ ಒರಟಾಗಿ ಮಾತಾಡಿದೆ. ಸುಮ್ಮನೆ ನನಗೆ ನೀವು ಪರೀಕ್ಷೆ ಮಾಡಿಸಿ ನನ್ನನ್ನು ಮನೆಯಲ್ಲಿ ಬಂಧಿಸಿದ್ದೀರಿ… ನನ್ನ ಸ್ನೇಹಿತರೆಲ್ಲ ಹೇಳುವಂತೆ ಟೆಸ್ಟನ್ನು ಮಾಡಿಸುವಂತಹ ಅವಶ್ಯಕತೆ ಇರಲಿಲ್ಲ, ಇದೆಲ್ಲಾ ಸರ್ಕಾರ ಮತ್ತು ಅಧಿಕಾರಿಗಳು ಹಣ ಮಾಡುವುದಕ್ಕೋಸ್ಕರ ಸುಮ್ಮಸುಮ್ಮನೆ ರಿಪೋರ್ಟ್ ಕೊಡುವಂತಹದ್ದು ಅಂತ ವೈದ್ಯರಿಗೆ ತಿಳಿಸಿದೆ… ಆಗ ವೈದ್ಯರು ನೋಡಿ, ನೀವು ಈಗ ಗುಣಮುಖರಾಗಿದ್ದೀರಲ್ಲ , ಆದರೆ ಅದೆಷ್ಟೋ ಜನ ತೀವ್ರತರನಾದ ಕೊರೋನಕ್ಕೆ ಒಳಗಾಗಿ ಸಂಕಟವನ್ನು ಪಟ್ಟಿದ್ದಾರೆ..

ಅದೆಷ್ಟೋ ಜೀವಗಳು ಕಳೆದುಹೋಗಿವೆ..
ನಿಮ್ಮ ಪುಣ್ಯ ನೀವು ಗುಣಮುಖರಾಗಿದ್ದಕ್ಕಾಗಿ ಸಂತೋಷಪಡಿ ಅಂತ ತಿಳಿಸಿದರು… ಆದರೂ ನನಗೆ ಕೋಪವನ್ನು ತಡೆದುಕೊಳ್ಳಲಾಗುತ್ತಿರಲಿಲ್ಲ… ಇನ್ನೂ ಒಂದು ಮಾತನ್ನು ಹೇಳಿದರು ನಿಮ್ಮನ್ನು ಮನೆಯಲ್ಲಿ ನಿಲ್ಲುವುದಕ್ಕೆ ಹೇಳಿದ್ದರಿಂದ ನಿಮ್ಮ ಸ್ನೇಹಿತರು, ನಿಮ್ಮ ತಂದೆ, ನಿಮ್ಮ ಬಂಧುಬಳಗದವರಿಗೆ ನೀವು ಆ ರೋಗವನ್ನು ಹರಡಿಸುವುದು ತಪ್ಪಿತಲ್ಲ*. ಸಮಾಜಕ್ಕೆ ಇದು ನೀವು ಮಾಡುವಂತಹ ಒಂದು ಒಳ್ಳೆಯ ಕೆಲಸ ಅಂತ ಹೇಳಿದರು.. *ಅಲ್ಲದೆ ನಿಮ್ಮ ತಂದೆಗೆ (ಅವರು ಇರುವುದು ಬೇರೆ ಮನೆಯಲ್ಲಿ) ಎಲ್ಲಾದರೂ ಈ ಕಾಯಿಲೆ ಬಂದರೆ  ಅವರು ಇದನ್ನು ತಡೆದುಕೊಳ್ಳಲಾರರು ಎಂದು ತಿಳಿಸಿದರು.

ಕೆಲವು ದಿನಗಳ ನಂತರ ನಮ್ಮ ತಂದೆಗೆ ಜ್ವರ ಮೈಕೈನೋವು ಶುರುವಾಯಿತು.. ಸುಮ್ಮನೆ ಪಾಸಿಟಿವ್ ರಿಪೋರ್ಟ್ ಕೊಡುತ್ತಾರೆ ಮತ್ತು ಮನೆಯಲ್ಲಿ ಕೂಡಿ ಹಾಕುತ್ತಾರೆ  ಅನ್ನುವ ನನ್ನ ಅನಿಸಿಕೆ ಇಂದ ಪ್ರಭಾವಿತರಾಗಿದ್ದ ಅವರು ಯಾವುದೇ ಆಸ್ಪತ್ರೆಗೆ ಹೋಗಿಲ್ಲ. ಆದರೆ ಮೂರು ದಿನಗಳ ನಂತರ ಸ್ವಲ್ಪ ಸುಸ್ತು ಜಾಸ್ತಿಯಾಗಿದ್ದರಿಂದ ಕೋರೋನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ವೈದ್ಯರನ್ನು ನೋಡಿದರು..
ಅವರು  ಕೂಡಲೇ ಕೊರೋನಾ ಪರೀಕ್ಷೆ ಮಾಡಿಸುವುದಕ್ಕೆ ತಿಳಿಸಿ ಆಸ್ಪತ್ರೆಯಲ್ಲಿ ಭರ್ತಿಯಾಗಿ ಬೇಕಾಗುತ್ತದೆ ಎಂದು ತಿಳಿಸಿದರು. ಆದರೆ ನನ್ನ ಪರಿಸ್ಥಿತಿಯಿಂದ ಪ್ರಭಾವಿತರಾಗಿದ್ದ ನನ್ನ ತಂದೆ ಮತ್ತೆ ಮೂರು ದಿನಗಳ ಕಾಲ ಮನೆಯಲ್ಲಿ ಉಳಿದರು. ಆಗ ಇದ್ದಕ್ಕಿದ್ದಂತೆ ಅವರಿಗೆ ಉಸಿರಿನ ತೊಂದರೆ ಜಾಸ್ತಿಯಾಗಿ ಪುನಹ ಅದೇ ವೈದ್ಯರನ್ನು ಸಂಪರ್ಕಿಸಿದಾಗ ಅವರು ನಾಳೆನೇ ಕೋರೋನ ಪರೀಕ್ಷೆ ಮಾಡಿಸಿ ಭರ್ತಿ ಮಾಡಬೇಕು. ಇವರಿಗೆ ಶ್ವಾಸಕೋಶದಲ್ಲಿ  ಕೊರೊನಾದಿಂದ ನ್ಯೂಮೋನಿಯ ಆಗಿದೆ. ಅಂತ ಹೇಳಿದರು… ಮಾರನೆಯ ದಿನ ಇವರ ಕೊರೋನಾ ಪರೀಕ್ಷೆ ಮಾಡಿಸಿದಾಗ ಕೊರೋನ ದೃಢಪಟ್ಟಿತು… ಆ ಕೂಡಲೇ ಇವರನ್ನು ಉಡುಪಿ ಜಿಲ್ಲೆಯ ಒಂದು ಕೊರೋನಾ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು… ಈಗ್ಗೆ ಭರ್ತಿ ಮಾಡಿ  ಹತ್ತು ದಿನಗಳು ಕಳೆದರು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ…
ಕೊರೋನಾ ಟೆಸ್ಟ್ ಮಾಡಿಸುವುದೇ ತಪ್ಪು ಅಂತ ತಿಳಿದಿದ್ದೆ.
ನನ್ನ ಮೂರ್ಖತನದಿಂದಾಗಿ ನನ್ನ ತಂದೆಯವರು ಇವತ್ತು ಜೀವನ್ಮರಣದ ಮಧ್ಯೆ ಹೋರಾಡುವಂತಾಗಿದೆ.  ನನ್ನ ಅಲ್ಪಬುದ್ಧಿಯಿಂದ  ಸ್ನೇಹಿತರ ಮಾತು ಕೇಳಿ ನನಗೆ ಪರೀಕ್ಷೆ ಮಾಡಿಸಲು ಸೂಚಿಸಿದ ವೈದ್ಯರನ್ನು ದೂಷಿಸಿದ ನಾನು ಈಗ ಅಪರಾಧಿ ಸ್ಥಾನದಲ್ಲಿದ್ದೇನೆ.

ಸ್ನೇಹಿತರೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸರಿಯಾಗಿ ಪಾಲಿಸಿ… ವೈದ್ಯರು ಸೂಚಿಸಿದರೆ ಖಂಡಿತವಾಗಿಯೂ ಕೊರೋನಾ ಪರೀಕ್ಷೆಯನ್ನು ಮಾಡಿಸಿ … ನನ್ನಂತೆ ನೀವು ನಿಮ್ಮ ಮತ್ತು ಇನ್ನೊಬ್ಬರ ಸಾವಿಗೆ ಕಾರಣರಾಗ ಬೇಡಿ..
ಜ್ವರ ಬಂದಾಗ ಕೊರೊನ ಪರೀಕ್ಷೆ ಮಾಡಿಸಿಕೊಳ್ಳುವುದು, ನಮಗೂ, ನಮ್ಮ ಮನೆಯವರಿಗೂ ಮತ್ತು ಸಮಾಜಕ್ಕೂ ನಾವು ಮಾಡುವ ಸೇವೆ ಅಂತಲೇ ತಿಳಿಯುವುದು ಒಳ್ಳೆಯದು… ಮತ್ತು  ಕೋರೋಣ ಬಂದವರು ಸುಮಾರು 15 ದಿನಗಳ ಕಾಲ ಮನೆಯಲ್ಲಿ ಉಳಿಯುವುದು, ಕಾಯಿಲೆಯನ್ನು ಇನ್ನೊಬ್ಬರಿಗೆ ಹರಡದಂತೆ ತಡೆಗಟ್ಟುವುದಕೋಸ್ಕರ…            
 *ಅಪರಾಧಿ ನಾನು*

Leave a Reply

Your email address will not be published. Required fields are marked *

error: Content is protected !!