ಊರ್ಮನಿ ಅಂಗಡಿ

ಈಗ ಆನ್ಲೈನ್ ಶಾಪಿಂಗ್ ಭರಾಟೆ ಹೆಚ್ಚಿದೆ. ಯುವಜನರು ಆನ್ಲೈನ್ ಮೂಲಕವೇ ತಮಗೆ ಬೇಕಾದ್ದನ್ನು ಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. 

ಅದೇ ಆನ್ಲೈನ್ ಮೂಲಕ ತನ್ನೂರಿನ ತಿಂಡಿಗಳು, ಸ್ಥಳೀಯ ಸಂಸ್ಕೃತಿ ಬಿಂಬಿಸುವ ವಸ್ತುಗಳು ದೊರೆಯುವಂತಾಗಿದ್ದರೆ ಅನ್ನುವ ಕನಸು ಎಷ್ಟೋ ಜನರಲ್ಲಿರುತ್ತದೆ. ಇಂತಾ ಕನಸನ್ನ ನನಸು ಮಾಡಲೆಂದೇ ಹುಟ್ಟಿಕೊಂಡಿದ್ದು – oormaniangadi.com ಎಂಬ ಕುಂದಾಪುರ ಮೂಲದ ಆನ್ಲೈನ್ ಶಾಪಿಂಗ್ ತಾಣ. 

ಈಗಾಗಲೇ ಕರ್ನಾಟಕ ಕರಾವಳಿ ಪ್ರದೇಶ ದಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ , ವೆಬ್ ಡೆವಲಪ್ಮೆಂಟ್ , ಆಪ್ ಡೆವಲಪ್ಮೆಂಟ್ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿರುವ ಫೋರ್ಥ್ ಫೋಕಸ್ ಗ್ರೂಪ್ ತಂಡದ ಇನ್ನೊಂದು ಕೊಡುಗೆಯೇ ಈ “ಊರ್ಮನಿ ಅಂಗಡಿ”ಆರಂಭಗೊಂಡ ತಿಂಗಳೊಳಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆಯೇ ಸಿಕ್ಕಿದೆ.

ನ್ಯಾಯಯುತ ಬೆಲೆಯೊಂದಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ತಲುಪಿಸುವ ಮೂಲಕ ಗ್ರಾಹಕರಿಂದ ವ್ಯಾಪಕ ಪ್ರಶಂಸೆಯನ್ನು ಪಡೆಯುತ್ತಿದೆ. ಭಾರತದೊಳಗೆ ಎಲ್ಲಾ ಪ್ರದೇಶಕ್ಕೂ 5 – 6 ದಿನಗಳೊಳಗೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ತೆ ಹೊಂದಿದ್ದು ಪ್ರಸ್ತುತ 22,000 ಕ್ಕೂ ಹೆಚ್ಚು ಪಿನ್ ಕೋಡ್ ಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ . 

ವಿಶೇಷವೆಂದರೆ Rs. 1000.00 ಮೇಲಿನ ಖರೀದಿಗೆ ಯಾವುದೇ ವಿತರಣಾ ಶುಲ್ಕವಿಲ್ಲದೆ ಉಚಿತ ಹೋಂ ಡೆಲಿವೆರಿಯನ್ನು ನೀಡುತ್ತಿದೆ ಕುಂದಾಪುರದ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಶರ್ಟ್‌ಗಳು, ಮೊಬೈಲ್ ಕವರ್‌ಗಳು, ಸ್ಥಳೀಯ ಲೇಖಕರ ಪುಸ್ಥಕಗಳು, ಸ್ಥಳೀಯ ಆಹಾರ ಪದಾರ್ಥಗಳಾದ ಹಪ್ಪಳ, ಸಂಡಿಗೆ, ವಣ ಮೀನು, ಚಟ್ಲಿ, ಸಾರು ಮತ್ತು ಸಾಂಬಾರ್ ಪುಡಿ, ಕೋರಿ ರೊಟ್ಟಿ, ಕುಂದಾಪುರ ಚಿಕನ್ ಮಸಾಲಾ, ಬಾರ್ಕುರ್ ಬೆಲ್ಲ, ಕೊಚ್ಚಕ್ಕಿ , ಗಾಣದ ತೆಂಗಿನ ಎಣ್ಣೆ, ವ್ಯಾಕ್ಯುಮ್ ಫ್ರೈಡ್ ಗೋಡಂಬಿಗಳು, ಇನ್ನಿತರೇ ವ್ಯಾಕ್ಯುಮ್ಮ್ ಫ್ರೈಡ್ ತಿಂಡಿ ತಿನಿಸುಗಳು, ಮಿಡಿ ಉಪ್ಪಿನಕಾಯಿ, ಹಲ್ವಾ ಗಳನ್ನೂ ಸೇರಿ ಒಟ್ಟು 1500 ಕ್ಕೂ ಹೆಚ್ಚು ವಸ್ತುಗಳ್ಳನ್ನು ಊರ್ಮನಿ ಅಂಗಡಿ ಅಲ್ಲಿ ಖರೀದಿಸಬಹುದಾಗಿದೆ.

ಸಂಪೂರ್ಣ ಸುರಕ್ಷಿತ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇದ್ದು ಗ್ರಾಹಕರು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, UPI , ಗೂಗಲ್ ಪೆ, ಫೋನ್ ಫೆ ನಂತಹ ಯಾವುದೇ ವ್ಯವಸ್ಥೆ ಇಂದ ಆರ್ಡರ್ ಮಾಡಬಹುದಾಗಿದೆ.

ವೆಬ್ಸೈಟ್ ನ ಜೊತೆಗೆ ಆಂಡ್ರಾಯ್ಡ್ ಅಪ್ಲಿಕೇಶನ್ ಕೂಡ ಇದ್ದು ಈಗಾಗಲೇ ಸಾವಿರಾರು ಜನರು ಪ್ರತಿನಿತ್ಯ ಊರ್ ಮನಿ ಅಂಗಡಿಯ ಸೇವೆಯನ್ನು ಬಳಸಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸರಾಸರಿ  4 .9 ರೇಟಿಂಗ್ಸ್ ಹೊಂದಿದೆ .  

ಹೊಸಾ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದರಿಂದ  ಇನ್ನೂ ಹೆಚ್ಚಿನ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಹುಮ್ಮಸ್ಸಿನಲ್ಲಿದ್ದಾರೆ ಊರ್ಮನಿ ಅಂಗಡಿಯವರು. ಇಷ್ಟೇ ಅಲ್ಲದೇ, ಕುಂದಾಪುರ ವ್ಯಾಪ್ತಿಯ ಇತರ ಉತ್ಪಾದಕರು ಹಾಗೂ ಮಾರಾಟಗಾರರು ಕೂಡ ತಮ್ಮ ಉತ್ಪನ್ನಗಳನ್ನು ಈ ತಾಣದಲ್ಲಿ ನೊಂದಾಯಿಸಿಕೊಂಡು ಆನ್ಲೈನ್ ಮೂಲಕ ಜನರಿಗೆ ತಲುಪಿಸುವಂತಹ ಅವಕಾಶವನ್ನೂ ನೀಡಲಾಗಿದೆ.

ಕೈಬೆರಳ ತುದಿಯಲ್ಲಿ ನಿಮ್ಮೂರಿನ ಸ್ಥಳೀಯ ವಸ್ತುಗಳು ಸಿಕ್ಕುವಾಗ ತಡ ಯಾಕೆ ಈಗಲೇ oormaniangadi.com ಆನ್ಲೈನ್ ಶಾಪಿಂಗ್ ತಾಣಕ್ಕೆ  ಈಗಲೇ ಭೇಟಿಕೊಡಿ, ನಿಮ್ಮ ” ಊರ್ಮನಿ ಅಂಗಡಿ” ಯನ್ನು ಬಳಸಿ ಮತ್ತು ಬೆಳೆಸಿ.

Leave a Reply

Your email address will not be published. Required fields are marked *

error: Content is protected !!