ಸೋರುತಿಹುದು ಮನೆಯ ಮಾಳಿಗೆ.. ಅಜ್ಞಾನದಿಂದ

ಬಾಲ್ಯದ ನೆನಪುಗಳೇ ಹಾಗೆ..ಅಲ್ಲಿ ಒಂದಷ್ಟು ತುಂಟಾಟ,ಮುಗ್ಧತೆ ಎಲ್ಲವೂ ಸಹಜ.ನಾವು ನಮ್ಮದೇ ಆದ ಒಂದು ವಾಸ್ತವಿಕ ಲೋಕದಲ್ಲಿ ಯಾವುದರ ಅರಿವಿಲ್ಲದೆ ಬದುಕುತ್ತಿರುತ್ತೇವೆ.ಆದರೆ ನಾವು ಬಾಲ್ಯದಲ್ಲಿ ಕಲಿಯುವ ಪ್ರತಿಯೊಂದು ವಿಚಾರವೂ ನಮ್ಮ
ಮುಂದಿನ ಜೀವನದ ಭವಿಷ್ಯವನ್ನು ರೂಪಿಸುತ್ತದೆ.

ನಮ್ಮ ಜೀವನ ಒಂದು ಸೀಸದ ಕಡ್ಡಿಯ ತರ..ಬರೆದಷ್ಟು ಖಾಲಿಯಾಗುತ್ತದೆ.ಇಲ್ಲಿ ನಾವು ಎಷ್ಟು ಬರೆದಿದ್ದೇವೆ ಅನ್ನೊದಕ್ಕಿಂತ ಎಷ್ಟು ಸುಂದರವಾದ ಪದಗಳನ್ನು ಬರೆದಿದ್ದೇವೆ ಅನ್ನೋದು ಬಹಳಷ್ಟು ಮುಖ್ಯ.

ಬಿಡದೆ ಸುರಿಯುವ ಮಳೆ,ಮರೆತರೂ ಪದೇ ಪದೇ ಕಾಡುವಂತಹ ನೆನಪು.ಇದರ ನಡುವೆ ಏನೋ ಯೋಚಿಸುತ್ತಿರುವಾಗ ನಾವೇಕೆ ಮಳೆಯಂತೆ ಸ್ವಚ್ಛಂದವಾಗಿ ಶುದ್ದ ಮನಸ್ಸಿನಲ್ಲಿ ಇರಬಾರದು ಅಂದೆನಿಸಿತು.ದಿನಂಪ್ರತಿ ಜಂಜಾಟಗಳ ನಡುವೆ ಬದುಕುತ್ತಿರುವ ನಾವು ನೆಮ್ಮದಿಯ ಹುಡುಕಾಟದಲ್ಲಿ ಕಳೆದು ಹೋಗಿದ್ದೇವೆ.ನಾವು ಯಾವುದೋ ಒಂದು ಸಿಟ್ಟಿಗೆ,ಯಾರದೋ ಮೇಲಿನ ಕೋಪವನ್ನು ಇನ್ನೊಂದು ಜೀವದ ಮೇಲೆ ಇಂತಹ ಕ್ರೂರ ಮನಸ್ಥಿತಿಲ್ಲಿ ವರ್ತಿಸುವುದು ಸರಿಯಲ್ಲ.ಮೊನ್ನೆ ತಾನೇ ನಡೆದಂತ ಒಂದು ಸಣ್ಣ ಘಟನೆ ಬಹಳಷ್ಟು ನೋವು ತಂದಿತು.ಯಾವುದೇ ಅರಿವಿಲ್ಲದೆ ರಸ್ತೆ ದಾಟುತ್ತಿದ್ದ ನಾಯಿ ರಭಸದಿಂದ ಬಂದಂತ ಕಾರಿನಡಿ ಸಿಲುಕಿ ಪ್ರಾಣ ಬಿಟ್ಟಿತ್ತು.ಅದರ ನರಳಾಟ ಅಸಹಾಯಕತೆ ನೋಡಿ ಅಲ್ಲಿದ್ದ ಒಂದು ನಾಯಿ ಅದರ ಪಕ್ಕ ಬಂದು ಕೂತಿತ್ತು.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈಗ ಮಳೆಗಾಲ,ಒಂದೆಡೆ ಕೆಲಸದ ತರಾತುರಿ ಇನ್ನೊಂದೆಡೆ ಮಳೆ ಬೇರೆ..ಸರಿಯಾದ ಸಮಯಕ್ಕೆ ಆಫೀಸಿಗೆ ತಲುಪುವ ತಲೆಬಿಸಿ.ಆದರೆ ಇದರ ನಡುವೆ ನಾವು ದಿನಂಪ್ರತಿ ರಸ್ತೆಯ ಪಕ್ಕದಲ್ಲಿ ಸಣ್ಣ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುವುದನ್ನು ನಾವು ಗಮನಿಸುತ್ತೇವೆ..ಅವುಗಳಿಗೇನೂ ಸಂಚಾರಿ ನಿಯಮಗಳ ಬಗ್ಗೆ ಅರಿವಿರುವುದಿಲ್ಲ.ನೀರಿನಲ್ಲಿ ಆಡುತ್ತಾ ತಮ್ಮದೇ ಆದ ಲೋಕದಲ್ಲಿ ಹೋಗುತ್ತಿರುತ್ತಾರೆ.ಪ್ರಬುದ್ಧರಾದ ನಾವು ಇಲ್ಲಿ ಸ್ವಲ್ಪ ಎಚ್ಚರವಹಿಸಬೇಕಾಗುತ್ತದೆ..ಸರಿಯಾದ ಸಮಯಕ್ಕೆ ಆಫೀಸಿಗೆ ತಲುಪುವ ಬರದಲ್ಲಿ ಮಕ್ಕಳ ಮೇಲೆ ನಿಗಾ ಇರಲಿ..ರಸ್ತೆಯ ಬದಿಯಲ್ಲಿ ಶಾಲಾ ಮಕ್ಕಳನ್ನು ಕಂಡರೆ ಜಾಗ್ರತೆವಹಿಸುವುದು ಉತ್ತಮ.ನಾವೂ ಕೂಡ ಬಾಲ್ಯವನ್ನು ದಾಟಿ ಬಂದವರು.ಮುಂದಿನ ಪೀಳಿಗೆಗೆ ನಾವು ಮಾದರಿಯಾಗಬೇಕು.ಇಂದು ಆ ಮೂಕ ಪ್ರಾಣಿಗಾದ ಸ್ಥಿತಿ ಮುಂದೆ ನಮಗಾಗಬಾರದು.ಪ್ರತಿಯೊಂದು ಜೀವಕ್ಕೂ ಬೆಲೆಯಿದೆ..

ರೂಪೇಶ್ ಜೆ.ಕೆ

Leave a Reply

Your email address will not be published. Required fields are marked *

error: Content is protected !!