ಪರೀಕ್ಷೆ- ಬಲಿದಾನಗಳ ಪ್ರತೀಕ ​: ಹಜ್ಜ್ ಮತ್ತು ಬಕ್ರೀದ್

ಹಜ್ಜ್  ಮತ್ತು  ಬಕ್ರೀದ್  ಇವೆರಡರಲ್ಲೂ  ಪ್ರವಾದಿ ಅಬ್ರಹಾಮರ​ ಜೀವನ​ ಮತ್ತು ಸಂದೇಶ​ವಿದೆ.  ಕುರಾನ್ ನಲ್ಲಿ ಹಲವೆಡೆ  ಇವರ​   ವೃತ್ತಾಂತ  ವಿವರಿಸಲ್ಪಟ್ಟಿದೆ.    ಆದಿಮಾನವ​  ಮತ್ತು  ಪ್ರವಾದಿಯೂ  ಆಗಿದ್ದ ​ ಆದಮರ​  ನಂತರ​ ನೋಹ​ ಮತ್ತು  ಅಬ್ರಹಾಮರು  ನಮ್ಮೆಲ್ಲರ​  ಸೃಷ್ಟಿಕರ್ತ​ನಿಂದಲೇ  ನೀಡಲ್ಪಟ್ಟ  ​ ಜೀವನ  ಪದ್ಧತಿಯನ್ನು ಅನುಸರಿಸುವಂತೆ  ಕರೆನೀಡುತ್ತಿದ್ದರು.  ಆ  ಮಾರ್ಗದಲ್ಲಿ  ಅನಿವಾರ್ಯವಾಗಿ  ಬರುವ​  ಸಂಕಷ್ಟಗಳನ್ನು ಸಹಿಸುತ್ತಲೇ   ಮತ್ತು  ಪರೀಕ್ಷೆಗಳನ್ನು  ಎದುರಿಸುತ್ತಲೇ   ಕರ್ತವ್ಯ​ ನಿರತರಾಗಿ ನಿರ್ಗಮಿಸಿದರು..

ಏಕೈಕ  ಸೃಷ್ಟಿಕರ್ತ​ ಮತ್ತು  ಒಡೆಯನ​  ನಿರ್ಣಯಗಳಲ್ಲಿ   ಯಾವುದೇ  ದೇವೇತರರನ್ನು   ಭಾಗಿಗೊಳಿಸುವುದು  ಅಕ್ಷಮ್ಯ​  ಅಪರಾಧವೆಂಬ ​ ಘೋಷಣೆ  ಆ  ಏಕೈಕ​  ದೇವನದ್ದಾಗಿದೆ.  ಈ  ಕರೆಯನ್ನು   ಘಂಟಾಘೋಷವಾಗಿ,  ಹೆಚ್ಚಿನ​ ಶಕ್ತಿಯೊಂದಿಗೆ    ಘೋಷಿಸುವುದೇ   ಇಬ್ರಾಹಿಮರ​  ವಿಶೇಶತೆಯಾಗಿತ್ತು.

ಅಪ್ಪ ಮೂರ್ತಿ ತಯಾರಕ, ಮಗಭಂಜಕ

ಅಬ್ರಹಾಮರು ಇರಾಕ್ ನ ಉರ್  ಪಟ್ಟಣದಲ್ಲಿ ಹುಟ್ಟಿದರು.  ಅವರ​  ತಂದೆಯವರು  ಮೂರ್ತಿಗಳನ್ನು  ತಯಾರಿಸುವ​  ಮತ್ತು  ಮಾರುವ ​ ಉದ್ಯೋಗ​  ಮಾತ್ರವಲ್ಲ, ಆ  ನೆಲೆಯಲ್ಲೇ  ನಮ್ರೂದ್  ರಾಜನ  ಆಸ್ಥಾನದಲ್ಲಿ ವಿಶೇಷ   ಸ್ಥಾನವನ್ನೂ  ಹೊಂದಿದ್ದರು.

ಯಾವುದರ  ಪರಿವೆಯನ್ನೂ  ಮಾಡದೆ   ಅಬ್ರಹಾಮರು   ದೇವೇತರರ   ಆರಾಧನೆಯ,   ಅನುಸರಣೆಯ​  ವಿರುದ್ಧ  ಏಕೈಕ ​ ದೇವನ  ಆರಾಧನೆಯ​   ಕರೆಯನ್ನೂ  ಮೊಳಗಿಸಿದರು,   ಕೂಡಲೇ  ಇದರ​   ಪ್ರತಿಕ್ರಿಯೆ  ಮನೆ, ಸಮಾಜ​  ಮತ್ತು  ಸರ್ವಾಧಿಕಾರಿ  ನಮ್ರೂದ​ನಿಂದ​ ಆಯ್ತು.

ಒಮ್ಮೆ  ಹಲವಾರು  ಮೂರ್ತಿಗಳಿರುವ  ​ ಆರಾಧನಾಲಯದೊಳೊಕ್ಕೆ   ಬಾಲಕ  ಅಬ್ರಹಾಮ   ಹೊಕ್ಕಿ,   ಅಲ್ಲಿರುವ  ​ ಮೂರ್ತಿಗಳೆಲ್ಲವನ್ನು  ಕೊಡಲಿಯಿಂದ  ​ ತುಂಡುತುಂಡಾಗಿಸಿ,    ಕೊಡಲಿಯನ್ನು    ದೊಡ್ಡ​   ಮೂರ್ತಿಯ  ​ ಕೈ ಯಲ್ಲಿರುಸುತ್ತಾನೆ. ಈ ಕೆಲಸವು   ಅಬ್ರಹಾಮ  ಅಲ್ಲದೆ   ಬೇರೆ  ಯಾರದೂ  ಆಗಲಿಕ್ಕೆ  ಸಾಧ್ಯವಿಲ್ಲವೆಂದರಿತ​  ಗ್ರಾಮಸ್ಥರು   ಆತನನ್ನು  ಹಿಡಿದು  ತರುತ್ತಾರೆ.   ಇದು ಯಾರು   ಮಾಡಿದ್ದೆಂದು   ಆತನನ್ನು   ಕೇಳಿದಾಗ​   ಅಬ್ರಹಾಮ   ಕೊಡಲಿ   ಹಿಡಿದು  ಕೊಂಡಿರುವ​   ದೊಡ್ಡ   ಮೂರ್ತಿಯನ್ನೇ  ಕೇಳಿರಿಯೆನ್ನುತ್ತಾರೆ. .  ಅದು  ಮಾತನಾಡುವುದಿಲ್ಲವೆಂದಾಗ   ಹಾಗಾದರೆ  ಅದನ್ನೇಕೆ   ಪೂಜಿಸುತ್ತೀರೆಂದು  ಮರು ಪ್ರಶ್ನೆ ಹಾಕುತ್ತಾರೆ.  ಅಲ್ಲಿರುವವರು ಹಿಡಿದು ದಂಡಿಸುತ್ತಾರೆ.

ಧಗಧಗಿಸುವ ಅಗ್ನಿಕುಂಡಕ್ಕೆಸೆಯಲಾಗುತ್ತದೆ.

ಅವರು  ತನ್ನ​  ಕಾರ್ಯದಲ್ಲಿ   ಮುಂದುವರಿಯುತ್ತಲೇ  ಹೋದರು.  ಅದೇ ಪ್ರಮಾಣದಲ್ಲಿ   ಪರೀಕ್ಷೆಗಳೂ  ಹೆಚ್ಚುತ್ತಲೇ   ಬಂದುವು.   ಅದ್ಭುತವಾದ​   ಪರೀಕ್ಷೆಗಳ  ಮತ್ತು  ತ್ಯಾಗಗಳ​  ಒಂದು  ಸರಣಿಯೇ  ಪ್ರವಾದಿ ಇಬ್ರಾಹೀಮರ​  ಜೀವನದಲ್ಲಿ  ಸಿಗುವ​   ​ಅದ್ವಿತೀಯ ​ ಉದಾಹರಣೆ.

ನಮ್ರೂದ್   ಸ್ವೇಚ್ಛಾಧಿಪತಿಯು   ಬೃಹತ್ತಾದ  ​  ಅಗ್ನಿಕುಂಡವನ್ನು    ಹೊತ್ತಿಸುವ​    ತಯಾರಿಗಾಗಿ   ತನ್ನ​  ಜನರಿಗೆ  ಆಜ್ಞೆ  ನೀಡುತ್ತಾನೆ. ಏಕ ದೇವತ್ವದ​ ಕರೆಯಿಂದ​  ಇಬ್ರಾಹಿಮರನ್ನು  ಹೆದರಿಸುವ​   ತಂತ್ರ​ಗಳ   ಮೂಲಕ​  ತಡೆಯುವ​ ಪ್ರಯತ್ನ  ಮಾಡಲಾಗುತ್ತದೆ.   ತನ್ನ​  ಪ್ರಾಣಕ್ಕಿಂತಲೂ  ​  ಏಕೈಕ   ದೇವನ  ​  ಸಂಪ್ರೀತಿ   ಮುಖ್ಯವೆಂಬುದು   ಇಬ್ರಾಹಿಮರ  ​  ನಂಬಿಕೆಯಾಗಿತ್ತು.   ತನ್ನ   ಕರ್ತವ್ಯವನ್ನು  ​ ಮುಂದುವರಿಸುತ್ತಿರುತ್ತಾರೆ.      ಇಬ್ರಾಹಿಮರನ್ನು   ಧಗಿಸುತ್ತಿರುವ​   ಅಗ್ನಿಕುಂಡಕ್ಕೆಸೆಯಲಾಗುತ್ತದೆ.  ದೇವಾಜ್ಞೆಯಂತೆ   ಬೆಂಕಿ ಆಶ್ಚರ್ಯಕರವಾಗಿ  ತಣ್ಣಗಾಗುತ್ತದೆ.  ಇಬ್ರಾಹಿಮರು   ರಕ್ಶಿಸಲ್ಪಡುತ್ತಾರೆ.  ಒಂದು   ಅಗ್ನಿ ಪರೀಕ್ಷೆಯಿಂದ ​ ಯಶಸ್ವಿಯಾಗಿ  ಹೊರಬರುತ್ತಾರೆ.

ಗಡೀಪಾರು

ಈಗ​  ಎರಡನೇ  ಪರೀಕ್ಷೆ;  ಮನೆ, ಸಮಾಜ​  ಮತ್ತು   ದೇಶದಿಂದಲೇ   ಹೊರಹಾಕಲಾಗುತ್ತದೆ.  ಅಸಾಮಾನ್ಯ  ಸಹನಾ ​  ಶಕ್ತಿಯ​  ಮೂಲಕ  ದೇಶ ಪ್ರದೇಶ  ಅಲೆಯುತ್ತಾರೆ. ಈ  ಮದ್ಯೆ  ಹಾಜಿರಾರನ್ನು  ಮದುವೆಯಾಗುತ್ತಾರೆ. ಜೀವನ ಸಾಗುತ್ತಿರುತ್ತದೆ,   ತನ್ನ  ಮಿಶನಿನಲ್ಲಿ  ತಲ್ಲೀನನಾಗುತ್ತಲೇ   ವಯಸ್ಸಾಗುತ್ತದೆ.   ಮಕ್ಕಳಿಲ್ಲದ  ಕೊರಗು,    ನಿರಂತರ​   ವಿವಿಧ​   ರೀತಿಯ   ಪರೀಕ್ಷೆಗಳು,  ತನ್ನ  ಕಾರ್ಯದಲ್ಲಿ  ಸಹಕಾರಕ್ಕಾಗಿ   ಮತ್ತು  ಮುಂದುವರಿಸಲಿಕ್ಕಾಗಿ   ಓರ್ವ​   ಮಗನ   ಕೊರತೆಯೆಂದು   ಮನಗಾಣುತ್ತಾರೆ..   ​ ಪ್ರಾರ್ಥನೆಯನ್ನು  ಆಲಿಸಿ    ದೇವನು   ಅವರ   ಮುದಿ ವಯಸ್ಸಿನಲ್ಲಿ   ಓರ್ವ​  ಮಗ​   ದಯಪಾಲಿಸುತ್ತಾನೆ.

ಮಡದಿ ಮತ್ತು ಹಸುಳೆಯನ್ನು ಮರುಭೂಮಿಯಲ್ಲಿ ಬಿಡಬೇಕೆಂಬಆಜ್ಞೆ

ಅದೇ   ಇನ್ನೊಂದು   ಪರೀಕ್ಷೆಗೆ    ಕಾರಣವಾಗುತ್ತದೆ.   ಎಳೆಕೂಸು   ಮತ್ತು   ಮಡದಿಯನ್ನು   ಮರುಭೂಮಿಯಲ್ಲಿ   ಬಿಟ್ಟು   ಬರುವಂತೆ  ದೇವಾಜ್ಞೆಯಾಗುತ್ತದೆ.   ಪ್ರವಾದಿಯವರು   ಮರು  ಯೋಚಿಸದೆ   ಶಿರಸಾ   ಪಾಲಿಸುತ್ತಾರೆ.  ಏಕಾಏಕಿ ಈ ​ ವರ್ತನೆಯನ್ನು  ಕಂಡು  ಮಡದಿ  ಇದೇನು   ದೇವಾಜ್ಞೆಯೇ  ಎಂದು   ಕೇಳುತ್ತಾರೆ.  ಹೌದೆಂದು   ತಲೆಯಾಡಿಸಿದಾಗ​  ಸುಮ್ಮನಾಗುತ್ತಾರೆ.   ಬೇಡಿ  ಮುದಿ ವಯಸ್ಸಿನಲ್ಲಿ  ಪಡೆದ​,  ತನಗೆ   ಶಕ್ತಿ,  ಆಸರೆ    ಆಯಿತೆಂದುಕೊಂಡು   ಹಲ   ಆಕಾಂಕ್ಷೆಗಳಿಂದ    ಪುಳಕಿತರಾಗುವಾಗಲೇ   ಈ  ಪರೀಕ್ಷೆಯೂ   ಕಠಿಣವೇ  ಆಗಿತ್ತು.

ಹಾಜಿರಾರಲ್ಲಿದ್ದ   ಖರ್ಜೂರ  ಮತ್ತು  ನೀರು  ​  ಕೆಲವೇ  ದಿನಗಳಲ್ಲಿ  ಮುಗಿಯುತ್ತದೆ.   ಮಗುವಿಗೆ ಬಾಯಾರಿಕೆಯಾಗಿರುತ್ತದೆ. ತಾಯಿ ಹೃದಯ​   ತಲ್ಲಣಗೊಳ್ಳುತ್ತದೆ.  ಆಚೀಚೆ   ಓಡಾಡುತ್ತಿರುತ್ತಾರೆ.  ಒಮ್ಮೆ   ಸಫಾ   ಇನ್ನೊಮ್ಮೆ  ಮರ್ವಾವೆಂಬ  ​ ಬೆಟ್ಟಗಳ  ​ ಮಧ್ಯೆ   ಓಡಾಡುತ್ತಾ, ಏರುತ್ತಾ   ಯಾವುದಾದರೂ   ವ್ಯಾಪಾರತಂಡ  ​ ಕಾಣುವುದೋ    ನೋಡುತ್ತಾರೆ.  ನಿರಾಶರಾಗಿ   ಮಗುವಿನ​    ಕಡೆಗೆ    ಮರಳಿದಾಗ​  ಒಂದು   ಅದ್ಭುತ​  ಕಾದಿರುತ್ತದೆ. ಮಗು  ಕಾಲುಗಳ ಅಪ್ಪಳಿಸಿದ​   ಸ್ಥಳದಲ್ಲೇ ನೀರಿನ​  ಚಿಲುಮೆಯೊಂದನ್ನು   ಕಂಡು  ಸಂತೋಷವೂ ಅಶ್ಚರ್ಯವೂಗೊಳ್ಳುತ್ತಾರೆ.   ಬೇಕಾದಷ್ಟು   ನೀರನ್ನು   ಸಂಗ್ರಹಿಸಿ    ಝಮ್  ಝಮ್ (ನಿಲ್ಲಿಸು) ಎಂದು  ಬಿಡುತ್ತಾರೆ.

ಮಗನ ನರಬಲಿಯಪರೀಕ್ಷೆ 

ಪರೀಕ್ಷೆ  ಮುಗಿಯಲಿಲ್ಲ​.  ಮುಂದೆ  ಇದಕ್ಕಿಂತ​  ಹಿರಿದಾದ  ಪರೀಕ್ಷೆ.  ಬೆಳೆದ​   ಮಗ​  ಇಸ್ಮಾಯಿಲರನ್ನು ಬಲಿ ಕೊಡಬೇಕೆಂಬ  ಆಜ್ಞೆ  ​ ಆಗುತ್ತದೆ.  ದೇವಾಜ್ಞೆಯಿಂದ​   ಎಂದೂ   ಹಿಂಜರಿಯದ   ಇಬ್ರಾಹಿಮರು  ವಿಷಯವನ್ನು   ಕೂಡಲೇ   ಮಗನಿಗೆ   ತಿಳಿಸುತ್ತಾರೆ.  ಉಕ್ಕಿನ ಮನುಷ್ಯ ನಂತಹ​  ಇಬ್ರಾಹೀಮರ​ ​  ತರಬೇತಿಯಲ್ಲಿ   ಪಳಗಿದ  ತಂದೆಗೆ   ತಕ್ಕ ​  ಮಗ​,  ದೇವಾಜ್ಞೆಯಾಗಿದ್ದರೆ  ಸದಾ  ಸಿದ್ಧನೆನ್ನುತ್ತಾರೆ.

ಮಗನನ್ನು  ಮಲಗಿಸುತ್ತಾರೆ.   ಪುತೃವಾತ್ಸಲ್ಯ  ​ ತಡೆಯಾಗದಿರಲಿಯೆಂದು  ತನ್ನ​   ಕಣ್ಣಿಗೆ  ಬಟ್ಟೆ   ಕಟ್ಟಿಕೊಳ್ಳುತ್ತಾರೆ.  ಹರಿತವಾದ​   ಕತ್ತಿಯನ್ನು  ಕರುಳ ಕುಡಿಯ​   ಕತ್ತಿನ ಮೇಲೆ   ಚಲಿಸಿಯೇ   ಬಿಡುತ್ತಾರೆ.   ದೇವನು   ನಿಸ್ವಾರ್ಥದ​  ತನ್ನ   ದಾಸನ​  ಆಜ್ಞಾ  ಪಾಲನೆಯನ್ನು   ಸ್ವೀಕರಿಸಿಯೇ   ಬಿಡುತ್ತಾನೆ.  ಮಗನ ಬದಲಿಗೆ  ಕತ್ತು   ಕೊಯ್ಯಲ್ಪಟ್ಟ​   ಟಗರು  ಬಿದ್ದು ಕೊಂಡಿತ್ತು . ಇಸ್ಮಾಯಿಲರು   ಜೀವಂತ ​   ಎದ್ದು  ಮುಗುಳ್ನಗುತ್ತಾ  ನಿಂತಿದ್ದರು.    ಇಲ್ಲೂ   ಪರೀಕ್ಷೆಯಲ್ಲಿ  ಇಬ್ರಾಹೀಮ    ಮತ್ತು ಇಸ್ಮಾಯೀಲ   ಇಬ್ಬರೂ    ವಿಜಯಿಗಳು.

ಹಜ್ಜ್

ಹಜ್ಜ್ ನ  ಸಕಲ  ವಿಧಿಗಳು ಇಬ್ರಾಹೀಮರ​ ಇದೇ  ಚರಿತ್ರೆಯನ್ನು  ನೆನಪಿಸುವುದು.  ಸಂಪತ್ತು,   ಆರೋಗ್ಯ​  ಎಲ್ಲದರಲ್ಲೂ ಅರ್ಹನಾಗಿರುವ​  ವಯಸ್ಕ​  ಜೀವನದಲ್ಲೊಮ್ಮೆ   ಹಜ್ಜ್  ಯಾತ್ರೆ    ಕೈಗೊಳ್ಳಬೇಕು.  ವಿಶ್ವದೆಲ್ಲೆಡೆಯಿಂದ   ಲಕ್ಷೋಪಲಕ್ಷ  ಮುಸ್ಲಿಮರು   ವರ್ಷಕ್ಕೊಮ್ಮೆ   ಮಕ್ಕಾನಗರದಲ್ಲಿ  ಹೇಗೆ  ಒಟ್ಟುಗೂಡುತ್ತಾರೆಂದರೆ   ಒಂದೇ   ರೀತಿಯ  ಎರಡು  ತುಂಡು  ​  ಶ್ವೇತ​  ಬಟ್ಟೆ  ದೇಹಕ್ಕೆ   ಸುತ್ತಿ   ಕೊಂಡು   ಆತ   ಯಾವುದೇ   ದೇಶದ​   ಆಡಳಿತಗಾರನೋ,   ಸೇವಕ​ನೋ ತಿಳಿಯಲಿಕ್ಕಾಗದು.   ಎಲ್ಲರೂ  ಒಂದೇ   ರೀತಿಯ​   ವಿಧಿಗಳನ್ನು   ಅಲ್ಲಿ   ನೆರವೇರಿಸಬೇಕು.   ಸಮಾನತೆಗೆ   ಇಸ್ಲಾಮ್    ಕೊಡುವ​   ಪ್ರಾಮುಖ್ಯತೆ   ಇಲ್ಲಿ   ಎದ್ದು   ಕಾಣುತ್ತದೆ.

ಕಾಬಾ  ಬಳಿಯಲ್ಲೇ  ಇರುವ​  ಎಂದೂ  ಕಡಿಮೆಯಾಗದೆ  ಸದಾ  ಹರಿಯುತ್ತಲೇ   ಇರುವ ​ ಮರುಭೂಮಿಯ  ಬುಗ್ಗೆಯೇ   ಝಮಝಮ್ ನ  ಬಾವಿ.  ಇದರ​  ನೀರನ್ನು   ಲೋಕದ ​ ಮೂಲೆ  ಮೂಲೆಗೆ  ಮಕ್ಕಾ  ಯಾತ್ರಿಗಳು  ಕೊಂಡೊಯ್ಯುತ್ತಾರೆ.  ಇಬ್ರಾಹೀಮ  ಮತ್ತು  ಇಸ್ಮಾಯೀಲರು  ಕೂಡಿ  ಅಲ್ಲಾಹನ​   ಆಜ್ಞೆಯಂತೆ   ಭೂಮಂಡಲದ​   ಕೇಂದ್ರ​  ಭಾಗದಲ್ಲಿ  ನಿರ್ಮಿಸಿದ,  ಮುಸ್ಲಿಮರೆಲ್ಲರೂ  ನಮಾಝಿಗೆ  ಅಭಿಮುಖವಾಗಿಸುವ  ​ ಕಾಬಾ  ಭವನಕ್ಕೆ   ಪ್ರದಕ್ಷಿಣೆಯಿಂದ​   ಹಿಡಿದು, ಹಾಜಿರಾರು   ನೀರಿಗಾಗಿ   ಓಡಾಡಿದ​  ಸಫಾ  ಮರ್ವ ​ ಬೆಟ್ಟಗಳಿಗೆ  ಏರುವ  ಎಲ್ಲಾ ವಿಧಿಗಳೂ ಹಜ್ಜ್ ನ​ ​ ಭಾಗಗಳಾಗಿವೆ..

ಮುಹಮ್ಮದ್   ಪೈಗಂಬರರು  ನಿರ್ವಹಿಸಿದ​  ಹಜ್ಜ್  ಕ್ರಮದ​ಂತೆ  ಬಕ್ರೀದ್ ನ ​ ಮುನ್ನಾ  ದಿನ​  ಅರಫ  ಎಂಬ  ವಿಶಾಲ​ ಮೈದಾನದಲ್ಲಿ  ಹಾಜಿಗಳೆಲ್ಲರೂ  ಸೇರುವುದು  ಹಜ್ಜ್ನ​  ಪ್ರಮುಖ ​ ಮತ್ತು  ಕಡ್ಡಾಯ ​ ವಿಧಿಗಳಲ್ಲೊಂದು.   ಅಲ್ಲಿ  ಎರಡು  ಹೊತ್ತಿನ​ ಕಡ್ಡಾಯ​  ನಮಾಝ್  ಸಾಮೂಹಿಕವಾಗಿ ನಿರ್ವಹಿಸಿದ​ ಬಳಿಕ ಜನಸ್ತೋಮಕ್ಕೆ ಉದ್ಬೋದೆ  ನಡೆಸಲಾಗುತ್ತದೆ.  ಆ ನ​ಂತರ​  ಪ್ರತಿಯೊಬ್ಬರೂ   ವೈಕ್ತಿಕವಾಗಿ  ಹೃದಯಾಂತರಾಳದಿಂದ ತಮ್ಮ​  ಗತ ತಪ್ಪುಗಳ​ ಬಗ್ಗೆ ಪಶ್ಚಾತ್ತಾಪ​  ಪಟ್ಟು  ರೋದಿಸಿ  ಕ್ಷಮೆಯಾಚಿ  ಪ್ರಾರ್ಥಿಸಿದರೆ ದೇವನು ಪ್ರಾಥನೆಯನ್ನು ಸ್ವೀಕರಿಸಿ  ಪರಿಶುದ್ಧಗೊಳಿಸುತ್ತಾನೆಯೆಂದು  ಪ್ರವಾದಿ  ನುಡಿದಿರುತ್ತಾರೆ.  ವಿವಿಧ​  ವಿಧಿಗಳ  ಮೂಲಕ  ತನ್ನನ್ನು  ಸಂಸ್ಕರಿಸಿ,  ದೇವವಿಶ್ವಾಸ​  ಮತ್ತು  ದೇವ ಭಯ​  ವೃದ್ಧಿಸಿ ಹೊಸ​  ಜೀವನ ಆರಂಭಿಸುವ​  ಬದ್ಧತೆಯೊಂದಿಗೆ  ಹಾಜಿಗಳು  ಮರಳುತ್ತಾರೆ.

ಬಕ್ರೀದ್

ದೇವನು    ತನ್ನ   ದಾಸರಲ್ಲಿ   ಯಾರನ್ನು   ಹೆಚ್ಚು    ಇಷ್ಟಪಡುತ್ತಾನೋ   ಅವರನ್ನು     ಹೆಚ್ಚು   ತನ್ನ   ನಿಕಟಗೊಳಿಸುತ್ತಾನೆ  ಮತ್ತು   ಏಕೈಕ  ​ ಪ್ರಭು   ನೀಡಿದ​   ಜೀವನ   ಪದ್ಧತಿಯ  ​ ಸ್ಥಾಪನೆಯ  ​ ಕಾರ್ಯವನ್ನು ​   ಅವರಿಂದ​   ತೆಗೆದು ಕೊಳ್ಳುತ್ತಾನೆ.  ಅದಕ್ಕಾಗಿ  ವಿವಿಧ​   ರೀತಿಯ   ​ಒಂದಕ್ಕಿಂತ​   ಒಂದು   ಹಿರಿದಾದ​   ಪರೀಕ್ಷೆಗಳ  ಮೂಲಕ  ​ ಹದಗೊಳಿಸಿ   ಕೊಳ್ಳುತ್ತಾನೆ.   ಈ ರೀತಿ   ಇಬ್ರಾಹಿಮರು   ದೇವನ   ಅತ್ಯಂತ   ಪ್ರಿಯ   ಪ್ರವಾದಿ   ಎಣಿಸಿಕೊಳ್ಳುತ್ತಾರೆ    ಮತ್ತು   ಅವರ   ಸ್ಥಾನವನ್ನು   ಮೇಲಕ್ಕೇರಿಸುತ್ತಾನೆ.

ಹಜ್ಜ್ ​ನ​  ಪ್ರಮುಖ ​ ಕರ್ಮವಾಗಿ​​  ಅಲ್ಲಿ  ಒಂದೇ  ಹೊತ್ತು   ಎಲ್ಲ  ಹಜ್ಜ್  ಯಾತ್ರಿಗಳೂ  ಅರಫಾ  ಮೈದಾನದಲ್ಲಿ ಸೇರುವ​  ದಿನದಂದು  ಹಾಜಿಗಳ​ ಜೊತೆಗೆ ಸಾಮರಸ್ಯ​ ತೋರುವ​ ಸಲುವಾಗಿ ಲೋಕದೆಲ್ಲೆಡೆ ಇತರ​  ಮುಸ್ಲಿಮರು ಒಂದು ದಿನದ​  ಉಪವಾಸ ​ ಆಚರಿಸುತ್ತಾರೆ..  ಮರುದಿನ​  ಬಕ್ರೀದ್ ನಂದು  ನಡೆಯುವ​  ವಿಶೇಷ  ನಮಾಝ್  ನಂತರದ  ಉದ್ಭೋಧನೆಯಲ್ಲಿ  ಇಬ್ರಾಹೀಮರ​  ಜೀವನ​ವನ್ನು ನೆನಪಿಸಲಾಗುತ್ತದೆ.   ಅಂದಿನಿಂದ​   ಮೂರು   ದಿನಗಳಲ್ಲಿ    ನೀಡಲಾಗುವ​  ಪ್ರಾಣಿಬಲಿಗಳು   ಇದೇ   ಇಬ್ರಾಹಿಮರ​   ತ್ಯಾಗ​ ಬಲಿದಾನಗಳ​  ಸ್ಮರಣಾರ್ಥ​ ಮತ್ತು ಅನುಕರಣೀಯ​  ದೈವ​  ಸಮರ್ಪಣಾಭಾವವಾಗಿದೆ​.

ಪ್ರವಾದಿಗಳಪಿತನೆಂಬ ಸ್ಥಾನಪ್ರಾಪ್ತಿ

ತನ್ನ   ಸಂತತಿಯನ್ನು    ಸಜ್ಜನರನ್ನಾಗಿ ಮಾಡೆಂದು   ಒಮ್ಮೆ   ಇಬ್ರಾಹೀಮರು   ದೇವನಲ್ಲಿ  ಪ್ರಾರ್ಥಿಸಿರುತ್ತಾರೆ.    ತನ್ನ  ​ ಅತ್ಯಂತ​   ಪ್ರಿಯಪಾತ್ರ   ದಾಸನ  ​ ಪ್ರಾರ್ಥನೆಯನ್ನು   ಆಲಿಸಿ,   ಇಸ್ಮಾಯೀಲ​ರ​   ನಂತರ​   ಐಸಾಕ,   ಜೇಕಬ, ಜೋಸೆಫರಂತಹ​   ಅನೇಕ  ​ ಪ್ರವಾದಿಗಳನ್ನು   ಕೊಡುಗೆಯಾಗಿ   ಮಾತ್ರವಲ್ಲ  ​ ಅಂತಿಮ   ​ ಪ್ರವಾದಿ  ಮುಹಮ್ಮದರೂ   ಇಬ್ರಾಹೀಮರ​   ಸಂತತಿಯಲ್ಲೇ   ಆಗಿದ್ದರು.

ನಮಾಝ್, ಉಪವಾಸ​, ಝಕಾತ್ ಗಳಂತೇ   ಹಜ್ಜ್  ಕೂಡಾ  ಅಖಂಡ​  ಭೂಮಂಡಲದ​  ಮತ್ತು  ನಮ್ಮೆಲ್ಲರ​   ಒಡೆಯನ  ​  ಸಾಮೀಪ್ಯಗಳಿಸಿ,   ದೇವ ​   ವಿಶ್ವಾಸ​   ವೃದ್ಧಿಸಿಕೊಂಡು  ಅದರ​   ಪರಿಣಾಮವಾಗಿ   ಸಮಾಜ   ಮತ್ತು  ರಾಷ್ಟ್ರದ​   ನಿರ್ಮಾಣದಲ್ಲಿ   ಭಾಗಿಗಳಾಗಿ   ದೈವ  ಸಂಪ್ರೀತಿಗಳಿಸುವ​  ​ ದೇವನು  ಆದೇಶಿಸಿರುವ​   ಕಡ್ಡಾಯ   ಕರ್ಮಗಳಲ್ಲೊಂದಾಗಿದೆ. ​ ಈ ಶಿಕ್ಷಣಗಳೇ   ಎಲ್ಲಾ   ಪ್ರವಾದಿಗಳ   ಜೀವನಗಳ   ಮಾದರಿ.    ಪ್ರವಾದಿ  ಮುಹಮ್ಮದರು ಅಲ್ಪ​ ಕಾಲದಲ್ಲೇ   ಸ್ತಾಪಿಸಿದ​  ಸಾಮಾಜಿಕ​ ಕ್ರಾಂತಿ  ಚರಿತ್ರೆಯಲ್ಲೇ  ಬೇರಿಲ್ಲ​.

ಪರಿಶ್ರಮ  ಮತ್ತು   ತ್ಯಾಗಗಳಿಲ್ಲದೆ  ಸಾಧನೆ  ಅಸಾಧ್ಯ.  ಈ  ಗುಣಗಳಿಂದ​  ಶಾಂತಿ,  ಮಾವವೀಯ  ಮತ್ತು  ನ್ಯಾಯದ​ ​ ಸಮಾಜವನ್ನು  ನಿರ್ಮಿಸುವ​  ಕರ್ತವ್ಯ​  ನಮ್ಮದೆಂಬುದು  ಎಲ್ಲಾ   ಮಹಾಪುರುಷರ​  ಜೀವನದಲ್ಲಿ ಸಿಗುವ​​  ಪಾಠ​.

 

– ಆರೆಮ್ ಸಿದ್ದೀಕ್,  ಉಡುಪಿ.

Leave a Reply

Your email address will not be published. Required fields are marked *

error: Content is protected !!