ಕೊರೋನಾ ವೈರಸ್ ಮುಂದೇನು?: ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಏನು ಹೇಳುತ್ತಾರೆ

ಎಷ್ಟು ಜನ ಗಮನಿಸಿದರು ಗೊತ್ತಿಲ್ಲ ಈಗ ವಿಶ್ವದಲ್ಲಿ ಅತ್ಯಂತ ಹೆಚ್ಚು ಸಾವು ಕರೋನಾ ವೈರಸ್ನಿಂದ ಉಂಟಾಗಿರುವುದು ಇಟಲಿ ದೇಶದಲ್ಲಿ ಚೈನಾದಲ್ಲಿ ಅಲ್ಲ ..ಒಂದೇ ದಿನದಲ್ಲಿ 475 ಸಾವುಗಳು ಇಟಲಿಯಲ್ಲಿ ಸಂಭವಿಸಿದೆ .. ಇದನ್ನು ಗಮನಿಸುವಾಗ ನಮಗೆ ಗೊತ್ತಾಗುವುದೇನೆಂದರೆ ಕೇವಲ ಮೂರು ವಾರಗಳ ಹಿಂದೆ ಬಹಳ ಕಡಿಮೆ ಜನ ಕರೋನಾ ವೈರಸ್ ಸೋಂಕಿನಿಂದ ಇಟಲಿಯಲ್ಲಿ ಬಳಲುತ್ತಿದ್ದರು ..

ಮೂರು ವಾರಗಳಲ್ಲಿ ಇದು ಬದಲಾಗಿದೆ .ಚೈನಾ ಮತ್ತು ಇಟಲಿಯಿಂದ ನಾವು ಕಲಿಯಬೇಕಾದದ್ದು ಏನೆಂದರೆ ಇದ್ದಕ್ಕಿದ್ದಂತೆ ಈ ಸೋಂಕು ಹರಡಲು ಪ್ರಾರಂಭವಾಗುತ್ತದೆ .ನಾವು ಅಂದುಕೊಂಡ ಹಾಗೆ ಕೇವಲ ವಿದೇಶದಿಂದ ಬಂದವರು ಮತ್ತು ಅವರ ಮನೆಯವರು ಮಾತ್ರ ಬಳಲುತ್ತಾರೆ ಎಂದುಕೊಳ್ಳುವುದು ಬೇಡ

ಡಾ . ಪಿ ವಿ ಭಂಡಾರಿ ಖ್ಯಾತ ಮನೋವೈದ್ಯರು , ಉಡುಪಿ

..ಸಮುದಾಯದಲ್ಲಿ ಈ ಸೋಂಕು ಹರಡಲು ಪ್ರಾರಂಭವಾದರೆ ಇಟಲಿಯಂತಹ ದೇಶದಲ್ಲಿ ಆರೋಗ್ಯ ಕ್ಷೇತ್ರ ತುಂಬಾ ಮುಂದುವರಿದಿರುವಾಗ ಅವರಿಂದಲೇ ಈ ಸೋಂಕಿನಿಂದ ವೈದ್ಯಕೀಯ ಸಮಸ್ಯೆ ಅನುಭವಿಸುವವರನ್ನು ನೋಡಿಕೊಳ್ಳಲು ಆಗಲಿಲ್ಲ.

ಇನ್ನು ಭಾರತದಂತಹ ದೇಶದಲ್ಲಿ ಈ ಸೋಂಕಿನ ನಡೆ ಹೇಗಾಗಬಹುದು ?..ಹಾಗಿದ್ದರೆ ಸಮುದಾಯದಲ್ಲಿ ಸೋಂಕು ತಡೆಯಲು ನಾವೇನು ಮಾಡಬಹುದು ?ಸಮುದಾಯದಲ್ಲಿ ಸೋಂಕು ಹರಡಿದರೆ ಸರ್ಕಾರಗಳು ಹಾಗೂ ಸಮುದಾಯದ ಜವಾಬ್ದಾರಿಗಳೇನು ?ನನಗೆ ತೋಚಿದ ಕೆಲವು ವಿಷಯಗಳನ್ನು ಬರೆದಿದ್ದೇನೆ .


ಸೋಂಕು ಹರಡದಿರಲು ನಾವೇನು ಮಾಡಬಹುದು ?
a) ವಿದೇಶದಿಂದ ಬಂದವರು ಮುಂದಿನ 28 ದಿನಗಳು ಮನೆಯಿಂದ ಹೊರಗೆ ಬರಬೇಡಿ .ಮನೆಯಲ್ಲಿರುವಾಗ ಕೆಮ್ಮು ಕಫ ನೆಗಡಿ ಶೀತ ಉಂಟಾದಲ್ಲಿ ಕೂಡಲೇ ನಿಮ್ಮ ಈ ಚಿಹ್ನೆಗಳನ್ನು ನಿಮ್ಮ ಕುಟುಂಬ ವೈದ್ಯರಿಗೆ ಫೋನ್ ಮಾಡಿ ಚರ್ಚಿಸಿ ,ಆಸ್ಪತ್ರೆಗೆ ಹೋಗಬೇಡಿ .ವೈದ್ಯರು ತಿಳಿಸಿದ ಮಾತ್ರೆಗಳಿಂದ ಇದು ಕಡಿಮೆಯಾಗದಿದ್ದಲ್ಲಿ ಸರ್ಕಾರಿ ಆಸ್ಪತ್ರೆಗೆ ಈ ಸಮಸ್ಯೆಗಳ ಬಗ್ಗೆ ತಿಳಿಸಿ . ವಿದೇಶದಿಂದ ಬಂದವರು ಅನೇಕರು ಸಂಶಯದಿಂದ ನಮಗೆ ಕೊವಿಡ್ 19 ಟೆಸ್ಟ್ ಮಾಡಿ ಅಂತ ಕೇಳಿಕೊಳ್ಳುತ್ತಿದ್ದಾರೆ ..ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳನ್ನು ಸಂದರ್ಶಿಸುತ್ತಿದ್ದಾರೆ .ಈ ರೀತಿ ಅವರು ಮಾಡುವುದರಿಂದ ಈ ಖಾಸಗಿ ಆಸ್ಪತ್ರೆಯಲ್ಲಿ ಇರುವ ಜನರಿಗೆಲ್ಲ ಈ ಸೋಂಕು ಹರಡುವ ಸಾಧ್ಯತೆ ಇದೆ .ಇವಾಗಿನ ಮಟ್ಟಿಗೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಈ ಸೋಂಕಿಗೆ ಪರೀಕ್ಷೆಗಳು ಮಾಡುವುದಿಲ್ಲ .ಈ ಸೋಂಕು ಪತ್ತೆ ಹಚ್ಚಬೇಕಾದರೆ ಸರ್ಕಾರಿ ವೈದ್ಯರು ನಿರ್ಧರಿಸಿ ಈ ಸೋಂಕು ಪರೀಕ್ಷಿಸಲು ನಿರ್ದಿಷ್ಟ ಕೇಂದ್ರಗಳಿಗೆ ನಿಮ್ಮ ಗಂಟಲಿನ swab ತೆಗೆದು ಕಳಿಸುತ್ತಾರೆ .ಅನಗತ್ಯವಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಅಲ್ಲಿ ಸೋಂಕು ಹರಡುವಂತೆ ಮಾಡಬೇಡಿ .ವಿದೇಶದಿಂದ ಬಂದವರು ತಮ್ಮ ಬೇರೆ ಕಾಯಿಲೆಗಳಿಗೂ routine check ups ಗಳಿಗೂ ಕೂಡ ಹೋಗಬೇಡಿ .ಹಲವು ಅತ್ಯಂತ ಸುಶಿಕ್ಷಿತರು ತಮಗೆ ಯಾವುದೇ ಜ್ವರ ಕೆಮ್ಮು ನೆಗಡಿ ಇಲ್ಲ ಆದ್ದರಿಂದ ನಾವು ವಿದೇಶಕ್ಕೆ ಹೋಗಿ ಬಂದಿದ್ದರೂ ಹೊರಗೆ ಓಡಾಡಬಹುದು ಎಂದು ಬೇಜವಾಬ್ದಾರಿಯಿಂದ ಓಡಾಡುತ್ತಿದ್ದಾರೆ ಇದನ್ನು ನಿಲ್ಲಿಸಬೇಕು .
b) ವಿದೇಶದಿಂದ ಬಂದಿದ್ದರೆ ಸತತವಾಗಿ ಕೆಮ್ಮು ನೆಗಡಿ ಜ್ವರ ಇದ್ದು ಸರ್ಕಾರಿ ಅಥವಾ ನಿಮ್ಮ ತಜ್ಞ ವೈದ್ಯರು ತಿಳಿಸಿದರೆ ಸರ್ಕಾರ ನಿಗದಿಪಡಿಸಿರುವಂತೆ isolation wards ಗಳಿಗೆ ಹೋಗಿ ಸೇರಿಕೊಳ್ಳಿ .ನೀವು ನಿಮ್ಮ ಮನೆಯವರಿಂದ ದೂರ ಇರುವುದು ಈ ಸಂದರ್ಭದಲ್ಲಿ ಅತಿ ಅಗತ್ಯ .ಅಲ್ಲಿ ನಿಮ್ಮ ಚಿಹ್ನೆಗಳನ್ನು ತಪಾಸಣೆ ಮಾಡಿ ಮುಂದೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ .
c) ಇನ್ನು ಜನ ಸಾಮಾನ್ಯರು ಸೋಂಕು ಹರಡದಂತೆ ಮಾಡಲು ಏನು ಮಾಡಬೇಕು ..ಇನ್ನೂವರೆಗೆ ಸಮುದಾಯದಲ್ಲಿ ಈ ಸೋಂಕು ಹರಡಿಲ್ಲ ನಿಜ ..ಆದರೆ ಯಾರೂ ನಮಗೆ ಆ ಸೋಂಕನ್ನು ಕೊಡಬಹುದು ಗೊತ್ತಿಲ್ಲ ..ಆದ್ದರಿಂದ ಈಗ ದೇಶದ ಪ್ರಧಾನಿಯಿಂದ ಹಿಡಿದು ಎಲ್ಲರೂ ಹೇಳುತ್ತಿರುವ social distancing ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇದನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ .ಸಮುದಾಯದಲ್ಲಿ ಬಸ್ಸಿಗೆ ಕಾಯುವಾಗದಿಂದ ಹಿಡಿದು ನಿಮ್ಮ ಮನೆಗೆ ಅಂಗಡಿಯಲ್ಲಿ ಸಾಮಾನು ತರಲು ಹೋಗುವಾಗ ಕೂಡ 1 ಮೀಟರ್ ಅಂತರ ಕಾಪಾಡಿಕೊಳ್ಳಿ .ಯಾವುದೇ ಸಭೆ ಸಮಾರಂಭ ಖಾಸಗಿ ಪಾರ್ಟಿಗಳಿಗೆ ಹೋಗಬೇಡಿ .ಆದಷ್ಟು ಸಾರ್ವಜನಿಕ ವಾಹನಗಳನ್ನು ಬಳಸಬೇಡಿ ..ಬಳಸುವುದಿದ್ದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ .

ಇದು ಉಡುಪಿ ಅಂತಹ ಜಾಗಗಳಲ್ಲಿ ಹೇಳುವುದು ಸುಲಭ ನೆರವೇರಿಸುವುದು ಕಷ್ಟ ಆದ್ದರಿಂದಲೇ ಆದಷ್ಟು ಅತಿ ಅಗತ್ಯವಿಲ್ಲದೆ ಇದ್ದಲ್ಲಿ ಹೊರಗೆ ಹೋಗಬೇಡಿ .ಜನತಾ ಕರ್ಫ್ಯೂ ಎಂದು ಪ್ರಧಾನಿಯವರು ಹೇಳಿರುವುದು ಇದೇ ವಿಷಯದಲ್ಲಿ .ಈ ಕಾಯಿಲೆ ಹರಡುತ್ತಿರುವುದನ್ನು ಗಮನಿಸಿದರೆ ಈ ಜನತಾ ಕರ್ಫ್ಯೂ ಮುಂದಿನ ಎರಡು ವಾರಗಳಿಗೆ ಬೇಕಾಗಬಹುದು ..ಆಗ ಮಾತ್ರ ಏನಾದರೂ ಉಪಯೋಗ ಉಂಟಾಗಬಹುದು .ಸಣ್ಣ ಹಳ್ಳಿಗಳಲ್ಲಿ ಸಂತೆ ಮಾರುಕಟ್ಟೆಯನ್ನು ಗಮನಿಸಿದೆ .ಸ್ವಲ್ಪವೂ ಹೆದರಿಕೆ ಇಲ್ಲದೇ ಮೊದಲಿನಂತೆ ನಡೆಯುತ್ತಿದೆ .

ಜನರಿಗೆ ಈ ಕಾಯಿಲೆಯ ಗಾಂಭೀರ್ಯತೆ ಇನ್ನೂ ಅರ್ಥ ಆದಹಾಗೆ ಇಲ್ಲ .ಆದ್ದರಿಂದ ಸ್ವಲ್ಪ ಯೋಚಿಸಿ ಅತಿ ಅಗತ್ಯತೆ ಇಲ್ಲದೇ ಇದ್ದರೆ ಮನೆಯಿಂದ ಹೊರಗೆ ಹೋಗಬೇಡಿ .ಮಕ್ಕಳಿಗೆ ರಜೆ ಇದೆ ಆದರೆ ಮಕ್ಕಳು ಕೂಡ ಆಟ ಆಡುವುದು ಬೇಡ .ಹೊರಾಂಗಣದ ಆಟವಾಗಲೀ ಒಳಾಂಗಣದ ಆಟವಾಗಲಿ social distancing ಮಕ್ಕಳಿಗೆ ಕಷ್ಟವಾಗುತ್ತದೆ . ಈಗ ಈ ಕಾಯಿಲೆ ಹರಡದಂತೆ ಮಾಡಲು ನಮ್ಮನ್ನು ನಾವು ಇತರರಿಂದ ಬೇರ್ಪಡಿಸುವುದು (Isolation) ಮತ್ತು ಸಾಮಾಜಿಕ ಆಂತರ್ಯ (social distancing)ಇವು ಪ್ರಥಮ ಹೆಜ್ಜೆಗಳು .
d) ಈ ಕಾಯಿಲೆ ನಮಗೆ ಬಾರದಂತೆ ತಡೆಯಲು ನಮ್ಮ ವೈಯಕ್ತಿಕ ಸ್ವಚ್ಛತೆಯತ್ತ ಗಮನ ಬಿಡುವ .ನಾವು ಸ್ವಚ್ಛವಾಗಿ ಇರಬೇಕೆಂದರೆ ಪ್ರಮುಖವಾಗಿ ನೆನಪಿಗೆ ಬರುವುದು ಕೈಯ ಸ್ವಚ್ಛತೆ .ಬೇರೆಯವರಿಂದ ಏನಾದರೂ ವಸ್ತುವನ್ನು ಕೈಗೆ ತೆಗೆದುಕೊಂಡರೆ ಅಥವಾ ನಾವು ನಮ್ಮ ಕೈಯಿಂದ ಸುತ್ತಮುತ್ತಲಿನ ವಸ್ತುಗಳನ್ನಾದರೂ ಮುಟ್ಟಿದರೆ ಸದ್ಯದ ಮಟ್ಟಿಗೆ ಕೈಗೆ ಸೋಪ್ ಹಾಕಿ ಚೆನ್ನಾಗಿ ತೊಳೆಯಬೇಕು .ಆಫೀಸುಗಳಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರೆ 70 % ಆಲ್ಕೋಹಾಲ್ ಇರುವ sanitisers ಗಳಿಂದ ಕೈ ಒರೆಸಿಕೊಳ್ಳಬೇಕು . ಈ ಮುಂಜಾಗ್ರತಾ ಕ್ರಮ ಏಕೆಂದರೆ ಸೋಂಕಿತ ವ್ಯಕ್ತಿಗಳ ಎಂಜಿಲು ಹನಿ (droplets)ಮುಖಾಂತರವೇ ಈ ಸೋಂಕು ಹರಡುತ್ತದೆ ಎಂದು ತಿಳಿದು ಬಂದಿದೆ .ನಾವು ಮಾತನಾಡುವ ಗಳಿಂದ ಹಿಡಿದು ಕೆಮ್ಮುವಾಗ ಸೀನುವಾಗ ಈ ಹನಿ ಸುತ್ತಮುತ್ತಲು ಬೀಳುತ್ತದೆ .ಅದು ನಾವು ಮುಟ್ಟುವ ವಸ್ತುಗಳ ಮುಖಾಂತರ ನಮಗೆ ಹರಡುತ್ತದೆ .ನಮ್ಮ ಕೈಗಳಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಬಾಯಿ ಮೂಗು ಕಣ್ಣು ಒರಿಸುವಾಗ ಈ ಸೋಂಕು ನಮಗೆ ಹಬ್ಬಿ ಬಿಡುತ್ತದೆ .ಆದ್ದರಿಂದ ಪದೇ ಪದೇ ಕೈ ತೊಳೆಯಿರಿ .


ಸರ್ಕಾರ ಇನ್ನೂ ಏನು ಮಾಡಬೇಕು ?
1) ನಮ್ಮ ದೇಶದ ಜನಸಂಖ್ಯೆಯನ್ನು ನೋಡಿದರೆ ಇನ್ನೂ ಹೆಚ್ಚು ಜನರಿಗೆ ಈ ಸೋಂಕಿನ ಬಗ್ಗೆ ಟೆಸ್ಟ್ ಮಾಡಬೇಕಾಗುತ್ತದೆ .ಈಗ ಮಟ್ಟಿಗೆ ವಿದೇಶಕ್ಕೆ ಹೋಗಿ ಬಂದವರು ,ಅವರ ಸಂಬಂಧಿಗಳು ,ಕಫ ಕೆಮ್ಮು ನೆಗಡಿ ಇದ್ದು ಬಹಳಷ್ಟು ದಿನ ಅದು ಮುಂದುವರಿಯುತ್ತ ಇರುವವರು ಇಂಥವರಿಗೆ ಮಾತ್ರ ಟೆಸ್ಟ್ಗಳನ್ನು ಮಾಡುತ್ತಿದ್ದಾರೆ .ಈ ಟೆಸ್ಟ್ಗಳು ದೇಶಾದ್ಯಂತ ಕೆಲವೇ ಕೆಲವು ಕೇಂದ್ರಗಳಲ್ಲಿ ನಡೆಯುತ್ತಿವೆ .ಅವೆಲ್ಲವೂ ಸರ್ಕಾರ ನಿಗದಿಪಡಿಸಿದ ಕೇಂದ್ರಗಳು .ಟೆಸ್ಟಿಂಗ್ ಜಾಸ್ತಿ ಮಾಡಬೇಕಾದರೆ ಖಾಸಗಿ ಸಂಸ್ಥೆಗಳಿಗೂ ಇದನ್ನು ಕೊಡಬೇಕಾಗಬಹುದು .ಖಾಸಗಿ ಸಂಸ್ಥೆಗಳಿಗೆ ಇದನ್ನು ಕೊಡುವಾಗ ಅವರು ಮಾಡುವ ಟೆಸ್ಟ್ಗಳು ಸರಿಯಾದ ಗುಣಮಟ್ಟದ್ದು (high sensitivity and high specificity)ಎಂಬುದು ದೃಢೀಕರಣ ಬೇಕು .


2) ಸರ್ಕಾರ ಚೀನಾ ದೇಶದಲ್ಲಿ ಮಾಡಿದಂತೆ ಸದ್ಯದ ಮಟ್ಟಿಗೆ ಆಸ್ಪತ್ರೆಗಳಿಂದ ದೂರ ಆಸ್ಪತ್ರೆಯ ಸೌಕರ್ಯಗಳು oxygen lines,ventilators ಇರುವಂತಹ ಸ್ಥಳಗಳನ್ನು temporary hospitals ಗಳನ್ನು ಮಾಡಲೇಬೇಕು .ಈ ಸೋಂಕು ಹರಡಿದಲ್ಲಿ ಜನಸಾಮಾನ್ಯರಲ್ಲಿ ಹಲವಾರು ಉಸಿರಾಟದ ವೈದ್ಯಕೀಯ ಪರಿಸ್ಥಿತಿಗಳು ಉಂಟಾಗುತ್ತವೆ ಇವುಗಳ ಚಿಕಿತ್ಸೆಗೆ ಅವರುಗಳು ಈಗ ಇರುವ ಆಸ್ಪತ್ರೆಗಳಿಗೆ ಹೋದಲ್ಲಿ ಈ ಆಸ್ಪತ್ರೆಗಳಲ್ಲಿ ಕೂಡ ಸೋಂಕು ಹರಡುತ್ತದೆ .ಈ ಬಗ್ಗೆ ಸರ್ಕಾರ ಈಗಲೇ ಯೋಚನೆ ಮಾಡಬೇಕು .ಹಾಗೆಯೇ ಈ temporary ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರುಗಳಿಗೆ ದಾದಿಯರಿಗೆ ಹೌಸ್ ಕೀಪಿಂಗ್ ಸ್ಟಾಫ್ ಗಳಿಗೆ personal protection equipements ಇವುಗಳನ್ನು ಸರ್ಕಾರ ಒದಗಿಸಬೇಕು .ಉಸಿರಾಟದ ತೊಂದರೆ ಅಧಿಕ ವಾಗುವಾಗ ventilators ಎಂಬ ಆಧುನಿಕ ವೈದ್ಯಕೀಯ ಉಪಕರಣದ ಅಗತ್ಯತೆ ಕೂಡ ಬರುತ್ತದೆ .ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕೂಡ ಇವು ಅಗತ್ಯಕ್ಕೆ ಬೇಕಾದಷ್ಟು ಇರುವುದಿಲ್ಲ .ಇದರ ಖರೀದಿಯ ಬಗ್ಗೆ ಸರ್ಕಾರ ಯೋಚನೆ ಮಾಡಲೇಬೇಕು . ಈಗ ಇರುವ ಆಸ್ಪತ್ರೆಗಳಿಗೆ ಬರುವ ರೋಗಿಗಳಲ್ಲಿ ಕೂಡ ಈ ಸೋಂಕು ಈಗಾಗಲೇ ಇರಬಹುದು .ಆದ್ದರಿಂದ ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣದ ಬಗ್ಗೆ ಹೆಚ್ಚಿನ ಒತ್ತು ನೀಡುವುದು ಸೂಕ್ತ .ಇಟಲಿಯಲ್ಲಿ ಈಗಾಗಲೇ ಬಹಳಷ್ಟು ವೈದ್ಯರು ದಾದಿಯರು ಹೌಸ್ ಕೀಪಿಂಗ್ ಸ್ಟಾಫ್ ಗಳು ಈ ಸೋಂಕಿನಿಂದ ಬಳಲುತ್ತಿದ್ದಾರೆ .ಭಾರತದಲ್ಲಿಯೂ ಇದು ಆಗುವ ಸಂಭವವಿದೆ .ಒಂದೇ ಸಮನೆ ಹಿರಿಯರು ಶುಗರ್ ಕಾಯಿಲೆ ಹೃದಯದ ಕಾಯಿಲೆ ಉಸಿರಾಟದ ತೊಂದರೆಯಿರುವವರು ಈ ಸೋಂಕು ದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಹೋಗಿ ಆಸ್ಪತ್ರೆಗಳಲ್ಲಿ ಒಂದೇ ಸಮನೆ ಸೇರಿಕೊಳ್ಳುವ ಸಾಧ್ಯತೆಗಳು ಇವೆ .ಈ ಬಗ್ಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಈಗಲೇ ಯೋಚನೆ ಮಾಡಬೇಕು .

3) ಸರ್ಕಾರ ಈ ಸೋಂಕನ್ನು ನಿವಾರಿಸಲು ಹಲವಾರು ಆಡಳಿತಾತ್ಮಕ ನಿರ್ಣಯಗಳನ್ನು ಕೂಡ ತೆಗೆದುಕೊಳ್ಳಬೇಕಾಗುತ್ತದೆ .ಉದಾಹರಣೆಗೆ ಸೆಕ್ಷನ್ 144, ವಿದೇಶದಿಂದ ಬಂದು ಸರಕಾರಿ ನಿಯಮ ಉಲ್ಲಂಘಿಸಿ ಓಡಾಡುತ್ತಿರುವವರಿಗೆ ಶಿಕ್ಷೆ ಮುಂತಾದವುಗಳನ್ನು ಮಾಡಲೇಬೇಕು .

ಸಮುದಾಯದ ಜವಾಬ್ದಾರಿಗಳು
a)ಯಾವುದೇ ಪೂಜೆ ಪುರಸ್ಕಾರ ಮದುವೆ ಬರ್ತ್ಡೇ ಪಾರ್ಟಿ ಸಮಾರಂಭಗಳಿಗೆ ಹೋಗದೇ ಇರುವುದು

b)ಸಾಮಾಜಿಕ ಅಂತರವನ್ನು ಕಾಯ್ದಿರಿಸಿ ಕೊಳ್ಳುವುದರ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ತಲುಪುವಂತೆ ಮಾಡುವುದು

c) ಸುಳ್ಳು ಸುದ್ದಿ ಹರಡದೆ ಇರುವುದು ..ವಾಟ್ಸಾಪ್ ನಲ್ಲಿ ಫೇಸ್ ಬುಕ್ ನಲ್ಲಿ ಬಂದ ವಿಷಯಗಳನ್ನು ಸರಿಯಾಗಿ ನೋಡಿ ಫಾರ್ವರ್ಡ್ ಮಾಡುವುದು

d) ಸರ್ಕಾರ ತೆಗೆದುಕೊಂಡ ನಿರ್ಣಯಗಳನ್ನು ಗಮನಿಸಿ ಅದನ್ನು ಪಾಲಿಸುವುದು

e) ನಮ್ಮ ಕೈಲಾದಷ್ಟು ಸರ್ಕಾರಕ್ಕೆ ಈ ಪರಿಸ್ಥಿತಿ ನಿಭಾಯಿಸಲು ಹಣವನ್ನು ಕೊಡುವುದು .ಈ ನಿಟ್ಟಿನಲ್ಲಿ ನಮ್ಮ ದೇವಸ್ಥಾನಗಳು ಚರ್ಚ್ಗಳು ಮಸೀದಿಗಳು ಕೂಡ ಕಾರ್ಯಪ್ರವೃತ್ತರಾಗಬೇಕು ಎಂದು ಕೇಳಿಕೊಳ್ಳುತ್ತೇನೆ

f) ಅವೈಜ್ಞಾನಿಕ ಚಿಕಿತ್ಸೆಗಳ ಬಗ್ಗೆ ಎಚ್ಚರದಿಂದ ಇರುವುದು .ದೇವರ ಪೂಜೆ ,ಭಜನೆ ,ನಮಾಜ್ ಅಥವಾ ಚರ್ಚಿನ ಮಾಸ್ ಇವೆಲ್ಲ ಈ ಸಮಯದಲ್ಲಿ ಅವೈಜ್ಞಾನಿಕ ವಾಗಬಹುದು ..ಹಾಗೆಯೇ ಈ ಕಾಯಿಲೆಗೆ alcohol,ಸೂರ್ಯನ ಕಿರಣಗಳು ,ಅರಿಶಿಣ ,ಪಾರಿಜಾತದ ಎಲೆ ,ಮುಂತಾದವು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಈ ಕಾಯಿಲೆ ಬಾರದ ಹಾಗೆ ನೋಡುತ್ತವೆ ಮುಂತಾದ ವಿಷಯಗಳನ್ನು ನಂಬದೇ ನಮ್ಮ ಜಾಗೃತಿಗಳನ್ನು ಮುಂದುವರಿಸುವುದು .

ಡಾ.ಪಿ.ವಿ.ಭಂಡಾರಿ,ಮನೋವೈದ್ಯರು ಉಡುಪಿ

2 thoughts on “ಕೊರೋನಾ ವೈರಸ್ ಮುಂದೇನು?: ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಏನು ಹೇಳುತ್ತಾರೆ

  1. Thank you soo much doctor… very simple,very practical and very very useful advice and information…. Appreciate the doctor and medical fraternity for the service to mankind. Thank you

Leave a Reply

Your email address will not be published. Required fields are marked *

error: Content is protected !!