ಕೊರೋನಾ: ಹೊಸ ಬದುಕು ರೂಪಿಸಲು ಅಪೂವ೯ ಅವಕಾಶ

ಲೇಖಕರು- ರಾಘವೇಂದ್ರ ಪ್ರಭು,ಕವಾ೯ಲು


ಕೊರೋನಾದಿಂದ ಎಲ್ಲಾ ಜನರ ಮನಸ್ಥಿತಿಯಲ್ಲಿ ತುಂಬಾ ಬದಲಾವಣೆಯಾಗುತ್ತಿದೆ.ಈ ವೈರಸ್ ಪರೋಕ್ಷವಾಗಿ ಜನರ ಸಂಬಂಧ ಮತ್ತು ಬದುಕಿನ ಗುಣಮಟ್ಟವನ್ನು ಬದಲಾಯಿಸುತ್ತಿದೆ. ಆದರೆ ನಾವು ಈ ಬದಲಾವಣೆ ಒಪ್ಪಿಕೊಳ್ಳಲು ತಯಾರಾಗಿಲ್ಲ. ಬದುಕು ಎಂದಿನಂತೆ ಸಹಜ ಸ್ಥಿತಿಗೆ ಬರುತ್ತದೆ ನಾವು ಯಾಕೆ ಬದಲಾವಣೆಯಾಗಬೇಕು ಎನ್ನುವ ಪ್ರಶ್ನೆ, ಹಲವರದ್ದಾಗಿದೆ.ಇದನ್ನು ನಾವು ಗುಣಾತ್ಮಕ ಸ್ಥಿತಿಗತಿಗಿಂತಲೂ ಬದಲಾವಣೆಗೆ ಒಗ್ಗಿಕೊಳ್ಳಲು ಸಿದ್ದವಾಗದ ಹೆದರಿಕೆ ಎಂದು ಹೇಳಬಹುದು.ಮಾನವ ಜನಾಂಗ ಸಹಸ್ರಾರು ವಷ೯ಗಳಿಂದ ಎಲ್ಲಾ ಸಂಕಷ್ಟಗಳು ಎದುರಿಸಿಯೂ ವಿಕಸನಗೊಂಡು ಬಲಗೊಳ್ಳಲು ಅದಕ್ಕೆ ಕಾರಣ ನಮ್ಮ ಲಕ್ ಅಲ್ಲ ಬದಲಾಗಿ ಬದಲಾವಣೆಗೆ ತ್ವರಿತವಾಗಿ ಒಗ್ಗಿಕೊಳ್ಳುವ ಗುಣ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಈ ವಷ೯ ಜನರ ಬಿಡುವಿಲ್ಲದ ಜಂಜಾಟಕ್ಕೆ ಬ್ರೇಕ್ ಬಿದ್ದಿದೆ.ಜನರ ಅಸೆ ಆಕಾಂಕ್ಷೆಗಳ ಈಡೇರಿಕೆಗೆ ತೊಂದರೆಯಾದರೂ ಹಲವಾರು ವಷ೯ಗಳಿಂದ ಸವಿ೯ಸ್ ಇಲ್ಲದೆ ತೊಂದರೆಗಳ ಮಧ್ಯೆ ಸಿಲುಕಿದ ಬದುಕಿಗೆ ಹೊಸ ಚೈತನ್ಯ ತುಂಬಿ ರಿಪೇರಿ ಮಾಡಲು ಹೊಸ ಅವಕಾಶ ಈ ಕೊರೋನಾ ಅವಧಿ ನಮಗೆ ಕೊಟ್ಟಿದೆ.ಹಲವಾರು ಜನರಿಗೆ ಅದರಲ್ಲಿಯೂ ಉದ್ಯೋಗಿಗಳಿಗೆ, ಹೊಸ ಉದ್ಯಮಿಗಳಿಗೆ ಈಗ ನಿಸ್ಸಂದೇಹವಾಗಿ ಅತ್ಯಂತ ಬಿಕ್ಕಟ್ಟಿನ ಸಮಯವಾದರೂ ಈ ಹಿನ್ನಲೆಯಲ್ಲಿ ಸಾಗಿ ಬಂದ ಹಾದಿಯ ಅವಲೋಕನ ನಡೆಸಿ ಹೊಸ ರೂಪುರೇಶೆ ಮತ್ತು ನಾವು ಮುಂದೆ ಯಾವ ರೀತಿಯಲ್ಲಿರಬೇಕು ಎಂದು ಯೋಜನೆ ರೂಪಿಸಲು ಅಪೂವ೯ ಅವಕಾಶ. ಈ ಕೊರೋನಾ ನಮಗೆ ನೀಡಿದೆ ಇದನ್ನು ಸಮಥ೯ವಾಗಿ ಎಲ್ಲರೂ ಬಳಸಿದರೆ ಮುಂದೆ ಉತ್ತಮ ಜೀವನ ಸಾಗಿಸಲು ಸಹಾಯವಾಗುತ್ತದೆ.

ಜಗತ್ತಿನ ಹಲವಾರು ದೇಶಗಳು ಸೇರಿದಂತೆ ನಮ್ಮ ವಿವಿಧ ರಾಜ್ಯಗಳಲ್ಲಿ ಜನರು ತಮ್ಮ ಬದುಕಿನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ ಸರಕು ಸರಂಜಾಮುಗಳೊಂದಿಗೆ ನಗರ ಬಿಟ್ಟು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ.ಇವರು ನಗರಗಳಿಗೆ ಹೆದರಿ ಹೋಗುತ್ತಿದ್ದಾರೆ ಎಂದರೆ ತಪ್ಪಾಗ ಬಹುದು ಅವರು ಹಳ್ಳಿಗೆ ಹೋದಾಗ ತಮ್ಮ ಹೊಸ ಜೀವನ ರೂಪಿಸಲು ಬೇಕಾದ ಯೋಜನೆ ರೂಪಿಸಲು ಪ್ರಾರಂಭಿಸಿದ್ದಾರೆ.ಭಾರತದಲ್ಲಿ ಇಷ್ಟು ವಷ೯ಗಳಲ್ಲಿ ನಡೆಯದ ಕೃಷಿ ಕ್ರಾಂತಿ ಈ ವಷ೯ ನಡೆಯುತ್ತಿದೆ. ಪಾಳು ಬಿದ್ದ ಹಲವಾರು ಗದ್ದೆಗಳು ಕೃಷಿಯ ಹೊಸ ಉಡುಗೆಯಲ್ಲಿ ಕಂಗೊಳ್ಳಿಸುತ್ತಿದೆ.ಹಳ್ಳಿಗಳಲ್ಲಿ ನವೀನ ಮಾದರಿಯ ಉದ್ಯಮಗಳು ಪ್ರಾರಂಭವಾಗಿವೆ. ನಿಧಾನವಾಗಿ ಉದ್ಯೋಗ ಸೃಷ್ಠಿಯ ಹೊಸ ಪವ೯ ಪ್ರಾರಂಭವಾಗಿದೆ. Back to Basic ಎಂಬಂತೆ ಮೂಲ ತತ್ವಕ್ಕೆ ನಾವು ಬರಲಾರಂಭಿಸಿದ್ದೆವೆ.

ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಬಳಕೆ ಕಡಿಮೆಯಾಗುತ್ತಿವೆ. ಆತ್ಮ ನಿಭ೯ರ ದೇಶವಾಗಲು ನಾವು ಸಾಗುತ್ತಿದ್ದೇವೆ.ಆದರೆ ಕೆಲವರು ಒತ್ತಡಗಳಿಗೆ ಒಳಗಾಗಿ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಎಲ್ಲಿ ನಮ್ಮ ಇಮೇಜ್ ಕಡಿಮೆಯಾಗಬಹುದು ಎಂಬ ಕಾರಣದಿಂದ ಹತಾಶೆಯ ಮನೋಭಾವನೆ ಕಾಡಲಾರಂಭಿಸಿದೆ. ಎಲ್ಲಿ ನಾವು ಬೇರೆಯವರ ಎದುರು ಇಮೇಜ್ ಕಡಿಮೆಯಾಗಿ ಅವರಲ್ಲಿ ನಗೆಪಾಟಳಿಗೆ ಒಳಗಾಗುತ್ತವೆಯೋ ಎಂಬ ಹತಾಶೆ ಬೇಗುದಿಯಿಂದ ಸಾಲ ಮಾಡಿದರೂ ಪರವಾಗಿಲ್ಲ ನಮ್ಮ ಜೀವನ ಮೊದಲಿನ ರೀತಿಯಲ್ಲಿ ಇರಬೇಕು ಯಾವುದೇ ಬದಲಾವಣಿ ಯಾಗಬಾರದು ಎಂದು ಸಾಲ ಮಾಡಿ ನಿಜವಾದ ರೀತಿಯಲ್ಲಿ ನಗೆಪಾಟಿ ಒಳಗಾಗುತ್ತಿರುವುದು ದುರಂತದ ವಿಷಯ. 

ಸಾಮಾಜಿಕ ಸ್ಟೇಟಸ್‌ಗೆ ಹೆದರಿ ಈ ರೀತಿ ಮಾಡುವುದು ಸರಿಯಲ್ಲ ಯಾರದೋ ಎದುರು ನನ್ನ ಇಮೇಜ್ ಕಾಪಾಡಲು ಈ ರೀತಿ ಮಾಡುವುದು ಬಿಟ್ಟು ನಾವು ಬಿದ್ದಾಗ ನೆಗಾಡುವವರನ್ನು ಬಿಟ್ಟು ಬಿದ್ದಾಗ ಕೈ ಎತ್ತಿ ನಡೆಸುವವರ ಬಗ್ಗೆ ನಾವು ಚಿಂತನೆ ಮಾಡೋಣ .ಈಗ ನಮ್ಮ ಸ್ಟೇಟಸ್ ಮುಖ್ಯವಲ್ಲ ಬೇರೆಯವರನ್ನು ಒಲೈಸಲು ಸಾಲ ಮಾಡಿ ಅದನ್ನು ಕಟ್ಟಲು ಸಾಧ್ಯವಾಗದೆ ಒತ್ತಡಕ್ಕೆ ಒಳಗಾಗಿ ಮಾನಸಿಕ ದುಗುಡವನ್ನು ಮೈಗೆ ಎಳೆಯುವುದು ಸರಿಯಲ್ಲ. ಈ ರೀತಿಯಲ್ಲಿ ನಡೆಯದೆ ಹೊಸ ಬದುಕಿಗೆ ಪರಿವತ೯ನೆಗೊಳ್ಳವ ಸಂದಭ೯ ಆಗುವ ಬದಲಾವಣೆಗೆ ನಾವು ಸಿದ್ದರಿರಬೇಕು . 

ನಮ್ಮ ಬದುಕು ನಮ್ಮ ಕೈಯಲ್ಲಿದೆ: – ಯಾವ ರೀತಿಯ ನಿಧಾ೯ರ , ನಮ್ಮ ಬದುಕಿಗೆ ಅದೇ ರೀತಿ ನಮ್ಮನ್ನು ನಂಬಿರುವವರ ಬದುಕಿಗೆ ಒಳ್ಳೆಯದು ಮಾಡುತ್ತದೆ ಯೋ ಆ ನಿಧಾ೯ರ ಕೈಗೊಳ್ಳಲು ಹಿಂದೆ ಸರಿಯಬಾರದು. ನಾವು ಬದುಕುವುದು ನಮಗಾಗಿ ಬೇರೆಯವರು ಏನೆಂದಾರು ಎಂದು ಯೋಚಿಸುವ ಬದಲು ನಮ್ಮ ಆತ್ಮಕ್ಕೆ ತಕ್ಕಂತೆ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸೋಣ.ಇನ್ನೋಬ್ಬರಿಗಾಗಿ ನಾವು ಕಟ್ಟಿಕೊಂಡ ಭ್ರಮೆ ಕನಸುಗಳನ್ನು ತ್ಯಾಗ ಮಾಡದೆ ನಮಗಾಗಿ ನಾವು ಯೋಚಿಸೋಣ ಯೋಜನೆ ಹಾಕಿಕೊಳ್ಳಲು ತಯಾರಾಗೋಣ. ಬೇರೆಯವರ ಎದುರು ನಾವು ಸಂತೋಷವಾಗಿದ್ದೇವೆ ಎಂದು ನಂಬಿಸಲು ಪ್ರಯತ್ನ ಮಾಡದೆ ನಮಗೆ ನಾವು ಸಂತೋಷಗೊಳ್ಳಬೇಕಾಗಿದೆ. ಇದಕ್ಕಿಂತ ದೊಡ್ಡ ಇಮ್ಯುನಿಟಿ ಮತ್ತೊoದಿಲ್ಲ.

ಮತ್ತೊಬ್ಬರ ಖುಷಿಗಾಗಿ ನಮ್ಮ ಖುಷಿಯನ್ನು ಬಲಿ ಕೊಡದೆ ಮತ್ತೊಬ್ಬರಿಗೆ ನಾವು ನಗುವಾಗದಿದ್ದರೂ ಪರವಾಗಿಲ್ಲ ನಮಗಾಗಿ ನಾವು ನಗೋಣ. ನಮ್ಮ ನಕಲಿ ನಗುಮುಖ ಮತ್ತೊಬ್ಬರಿಗೆ ತೋರಿಸುವುದು ಬೇಡ ಆ ನಿಜವಾದ ನಗು ಮುಖ ನಮ್ಮ ಅಂತರಂಗದ ಹೊಸ ಭಾವನೆ ಬೆಳೆಸಲು  ಸಹಾಯವಾಗುತ್ತದೆ. ಕರೋನಾಕ್ಕಾಗಿ ಅಳದೆ ಅದನ್ನು ಅಭಿಮನ್ಯುವಿನಂತೆ ಎದುರಿಸಬೇಕು. ನಮ್ಮ ಆರೋಗ್ಯ ಸಕಾ೯ರ ಕೈಯಲಿಲ್ಲ ಅದು ನಮ್ಮ ಕೈಯಲ್ಲಿದೆ.ಹೊಸ ಪವ೯ತೆ ಎರಲು ತಯಾರು ಮಾಡಿಕೊಳ್ಳಿ ಏಳು ಬೀಳು ಸಹಜ ಇದರೊಂದಿಗೆ ಬದುಕಿದಾಗ ಮಾತ್ರ ನಮ್ಮ ಬದುಕಿಗೆ ಸಾರ್ಥಕ್ಯ ಬರುವುದು.ಕರೋನಾದೊಂದಿಗೆ”.ಕುಚ್ ತೋ ಕರನಾ ಹೈ “

   ಲೇಖಕರು- ರಾಘವೇಂದ್ರ ಪ್ರಭು,ಕವಾ೯ಲು

Leave a Reply

Your email address will not be published. Required fields are marked *

error: Content is protected !!