ಪಂಚಮುಖಿ ಸಿನಿಮಾದ “ಕ್ಲೈಮ್ಯಾಕ್ಸ್” ಚಿತ್ರೀಕರಣದ ಪೂಜೆ
ಕುಂದಾಪುರ : ಕುಂದಾಪುರದ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಮುಖಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಪೂಜೆ ನಡೆಯಿತು.
ಬೆಂಗಳೂರು ಮೂಲದ ರಾಂಗ್ ಕಾಲ್ ಚಂದ್ರು ನಿರ್ದೇಶನದ ಪಂಚಮುಖಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ತೀರಣಕ್ಕೆ ಕಂಡ್ಲೂರು ಗ್ರಾಮಾಂತರ ಠಾಣೆಯ ಎಸ್ ಐ ಶ್ರೀಧರ್ ನಾಯಕ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂಧರ್ಭ ಮಾತನಾಡಿದ ಅವರು, ಕಲಾವಿದರನ್ನು ಗುರುತಿಸುವ ಮತ್ತು ಗೌರವಿಸುದ್ದೆಂದರೆ ನನಗೆ ತುಂಬಾ ಇಷ್ಟ ನಿಮ್ಮ ಕನಸಿನ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲಿ ಇನ್ನಷ್ಟು ಕಲಾವಿದರು ಈ ಭಾಗದಿಂದ ಹುಟ್ಟಿ ಚಿತ್ರರಂಗದಲ್ಲಿ ಹೊಸ ದಾಖಲೆ, ಭರವಸೆ ಹುಟ್ಟಿಸಲಿ ಎಂದರು. ಹಾಗೆಯೇ ಖಳನಾಯಕನಾಗಿ ರಿಯಾಲ್ಟಿಕ್ ಸ್ಟಾರ್ ಸಂದೇಶ್ ಶೆಟ್ಟಿ ಆಜ್ರಿ, ಕುಂದಾಪುರದ ಅವಳಿ ವಿಲನ್ ಓಂ ಗುರು ಚಂದ್ರಶೇಖರ ಬಸ್ರೂರು, ಸುನಿಲ್ ಉಪ್ಪಂದ,ಅಭಿನಯಿಸಿದ್ದಾರೆ.ಕ್ಯಾಮರಾ ಮ್ಯಾನ್ ಆಗಿ ಪ್ರವೀಣ್ ಪೂಜಾರಿ ಕೆಲಸಮಾಡಿದ್ದು.
ರಾಂಗ್ ಕಾಲ್ ಚಂದ್ರು ನಟ ಮತ್ತು ನಿರ್ದೇಶಕನ ಹೊಣೆ ಹೊತ್ತಿದ್ದಾರೆ. ಈಗಾಗ್ಲೇ ಹಾಡಗಳು ಸಿರಿ ಮ್ಯೂಸಿಕ್ನಲ್ಲಿ ಯಶಸ್ವಿಯಾಗಿ ಜನರ ಮೆಚ್ಚುಗೆ ಪಡೆದಿದೆ.