“ಝಾನ್ಸಿ” ಚಿತ್ರಕ್ಕಾಗಿ ಹಾಟ್ ಲುಕ್‌ನಲ್ಲಿ “ಲಕ್ಷ್ಮಿ ರಾಯ್”

ಕನ್ನಡತಿ ಲಕ್ಷ್ಮಿ ರಾಯ್ ನಟನೆಯ ಹೊಸ ಸಾಹಸಮಯ ಚಿತ್ರ ಝಾನ್ಸಿ'. ಖಡಕ್ ಪೊಲೀಸ್ ಅಧಿಕಾರಿಝಾನ್ಸಿ’ ಪಾತ್ರದಲ್ಲಿ ಲಕ್ಷ್ಮಿ ರಾಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾರ್ಷಲ್ ಆರ್ಟ್ ಸಹ ಕಲಿತಿದ್ದಾರೆ.

ಇತ್ತೀಚಿಗೆ ಮುಂಬೈನಲ್ಲಿ ಅದ್ಬುತ ಥ್ರಿಲ್ಲರ್ ಸನ್ನಿವೇಶವೊಂದನ್ನು ಈ ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳಲಾಗಿದೆ. ಸಕತ್ ಹಾಟ್ ಲುಕ್‌ನಲ್ಲಿ ಲಕ್ಷ್ಮೀ ರಾಯ್ ಕಾಣಿಸಿಕೊಡಿದ್ದಾರೆ. ಸ್ವಿಮ್ಮಿಂಗ್ ಪೂಲ್ ಆವರಣವೊಂದರಲ್ಲಿ ಮುಂಬೈ ಡಾನ್ ರವಿ ಕಾಳೆ ಅವರನ್ನು ಕಾಳಿಂಗ ಎಂಬ ವ್ಯಕ್ತಿ ಕೊಲ್ಲಲು ಸ್ಕೆಚ್ ಹಾಕಿರುತ್ತಾನೆ. ಎರಡು ದಿಕ್ಕುಗಳಿಂದ ಶೂಟ್ ಮಾಡಿ ಮುಗಿಸುವ ಸಂಚು ನಡೆದಿರುತ್ತದೆ. ಆ ಸಮಯಕ್ಕೆ ಆ ಸ್ಥಳಕ್ಕೆ ಝಾನ್ಸಿ ಎಂಟ್ರಿಯಾಗುತ್ತಾಳೆ.

ಝಾನ್ಸಿ ಚಿತ್ರಕ್ಕೆ ೩೫ ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲಿ ನಾಲ್ಕು ಸಾಹಸ ಸನ್ನಿವೇಶ ಹಾಗೂ ಒಂದು ಚೇಜ಼್ ಕೂಡಾ ಇದೆ.

ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ೫೦೦ ನೇ ಸಿನಿಮಾ ಇದು. ಹಾಗೆಯೇ ಸಂಗೀತ ನಿರ್ದೇಶಕ ಎಂ ಎನ್ ಕೃಪಾಕರ್ ಅವರ ೫೦ ನೇ ಸಂಗೀತ ನಿರ್ದೇಶನದ ಚಿತ್ರ ಕೂಡಾ ಇದಾಗಿದೆ.

ನಿರ್ದೇಶಕ ಪಿ ವಿ ಎಸ್ ಗುರುಪ್ರಸಾದ್ ಈ ಹಿಂದೆ ಮರ್ಯಾದ ರಾಮಣ್ಣ' ಚಿತ್ರವನ್ನು ನಿರ್ದೇಶನ ಮಾಡಿದ್ದವರು. ಈಝಾನ್ಸಿ’ ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಸಂಭಾಷಣೆ ರಚಿಸಿದ್ದಾರೆ.

ವೀರೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ `ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಅನ್ನೋದು ನಿರ್ದೇಶಕರ ಅಭಿಪ್ರಾಯ.

ಭವಾನಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮುಂಬಯಿ ಮೂಲದ ರಾಜೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಸವರಾಜ್ ಸಂಕಲನ ವಿರೇಶ್ ಕ್ಯಾಮೆರಾ ಕೈ ಚಳಕ ಜಾನ್ಸಿಯಲ್ಲಿ ನೋಡಬಹುದು.

Leave a Reply

Your email address will not be published. Required fields are marked *

error: Content is protected !!