ಶಂಕರಮಠದಲ್ಲಿ ರೇಮೊ ಚಿತ್ರದ ಸ್ಕ್ರಿಪ್ಟ್ ಪೂಜೆ

ಬೆಂಗಳೂರು : ಜೈ ಆದಿತ್ಯ ಫಿಲಂಸ್ ಲಾಂಛನದಲ್ಲಿ ಸಿ.ಆರ್.ಮನೋಹರ್ ನಿರ್ಮಿಸುತ್ತಿರುವ, ಪವನ್ ಒಡೆಯರ್ ನಿರ್ದೇಶನದ “ರೇಮೊ” ಚಿತ್ರದ ಸ್ಕ್ರಿಪ್ಟ್ ಪೂಜೆ ಬೆಂಗಳೂರಿನ ಶಂಕರಪುರದಲ್ಲಿರವ ಶಂಕರಮಠದಲ್ಲಿ ನೆರವೇರಿತು. ಮುಖ್ಯಅತಿಥಿಗಳಾಗಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್,ಗೀತಾ ಶಿವರಾಜಕುಮಾರ್ ಆಗಮಿಸಿದ್ದರು.

ಜನುಮದ ಗೆಳತಿ, ವಜ್ರಕಾಯ ಹಾಗೂ ವಿಲನ್ ಸೇರಿದಂತೆ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಪಕ ಸಿ.ಆರ್.ಮನೋಹರ್ ನಿರ್ಮಿಸುತ್ತಿರುವ ೧೩ನೇ ಚಿತ್ರ “ರೇಮೊ”. ಇಶಾನ್ ರೇಮೊ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಆಶಿಕಾ ರಂಗನಾಥ್ ತೆರೆ ಹಂಚಿಕೊಂಡಿದ್ದಾರೆ. ಖ್ಯಾತ ನಟ ಶರತ್ ಕುಮಾರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಬೆಂಗಳೂರು, ಮೈಸೂರು, ಹೈದರಾಬಾದ್, ಲಂಡನ್, ಸಿಂಗಾಪುರ ಮುಂತಾದ ಕಡೆಗಳಲ್ಲಿ ೭೫ ದಿನಗಳ ಚಿತ್ರೀಕರಣದ ಯೋಜನೆಯಿದ್ದು, ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಎಸ್.ವೈದಿ ಅವರ ಛಾಯಾಗ್ರಹಣದಲ್ಲಿ ಚಿತ್ರ ಮೂಡಿಬರಲಿದೆ.ಈ ಸಂಧರ್ಭ ಚಿತ್ರತಂಡ ಕೂಡ ಪೂಜಾ ಸಮಯದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!