“ಪೊಗರು” ಚಿತ್ರ ಪ್ರಮೋಶನಲ್ ಸಾಂಗ್ ವೈರಲ್

ಅದ್ಧೂರಿ , ಬಹದ್ಧೂರ್ , ಭರ್ಜರಿ ಚಿತ್ರಗಳ ಸಾಲು ಸಾಲು ಯಶಸ್ಸಿನ ಬಳಿಕ ಧ್ರುರ್ವಾ ಸರ್ಜಾ ನಟನೆಯ ಮತ್ತೊಂದು ಭರ್ಜರಿ ಸಿನಿಮಾ ಸೆಟ್ಟೇರಲು ರೆಡಿಯಾಗುತ್ತಿರು ಸಿನಿಮಾ ಪೊಗರು. ನಂದ ಕಿಶೋರ್ ನಿರ್ದೇಶನದ ಬಹುನಿರೀಕ್ಷೀತ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ , ಟೀಸರ್, ಮೇಕಿಂಗ್ ಮೂಲಕವೇ ಸದ್ದು ಮಾಡುತ್ತಿದ್ದ ಸಿನಿಮಾ ಯಾವಾಗ ರಿಲೀಸ್ ಅನ್ನೋದಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ.

ಧ್ರುರ್ವಾ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಧ್ರುವಾ ಸರ್ಜಾ ಪೊಗರಿನಲ್ಲೂ ಚಿಂದಿ ಉಡಾಯಿಸೋದ್ರಲ್ಲಿ ನೋ ಡವಟ್. ಅಂದಹಾಗೇ ಮೊದಲ ಹಂತದ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇನ್ನೂ ೨ನೇ ಹಂತದ ಶೂಟಿಂಗ್ ಕೂಡ ಮುಗಿಯುವ ಹಂತ ತಲುಪಿದೆ. ಆದ್ರೆ ಪೊಗರು ಯಾವಾಗ ತೆರೆಮೇಲೆ ಬರಲಿದೆ ಅನ್ನೋದೇ ಪ್ರೇಕ್ಷಕರ ಕುತೂಹಲ .

ಪೊಗರನ್ನು ಟೀಸರ್ ಮೂಲಕವೇ ಎನ್‌ಜಾಯ್ ಮಾಡುತ್ತೀರುವ ಜನ ಈಗ ಪೊಗರು ಚಿತ್ರದ ಪ್ರಮೋಷನಲ್ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.೨.೬ ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿರುವ ಪೊಗರು ಆಲ್ ದಿ ಬೆಸ್ಟ್ ಹಾಡನ್ನ ಮೂವಿ ರಿಲೀಸ್ ಆಗೋ ತನಕ ಎನ್‌ಜಾಯ್ ಮಾಡಿ. ಪೊಗರು ರಿಲೀಸ್ ಆಗೋದನ್ನ ಕಾದು ನೋಡಬೇಕು.

Leave a Reply

Your email address will not be published. Required fields are marked *

error: Content is protected !!