ಬೈಲೂರು ಕೊರಂಗ್ರಪಾಡಿ ರಸ್ತೆಯ ಅಗಲೀಕರಣ: ಶಾಸಕ ರಘುಪತಿ ಭಟ್ ಪರಿಶೀಲನೆ
ಉಡುಪಿ : ನಗರಸಭಾ ವ್ಯಾಪ್ತಿಯ ಬೈಲೂರು ಕೊರಂಗ್ರಪಾಡಿ ರಸ್ತೆಯ ಅಗಲೀಕರಣದ ಬಗ್ಗೆ ಇಂದು ಶಾಸಕರಾದ ಕೆ. ರಘುಪತಿ ಭಟ್ ಸ್ಥಳೀಯ ನಗರಸಭಾ ಸದಸ್ಯರುಗಳ ಜೊತೆ ಪರಿಶೀಲಿಸಿದರು. ಮುಂದೆ ಈ ಭಾಗದ ಎಲ್ಲಾ ಜನರನ್ನು ಹಾಗೂ ನಗರಸಭಾ ಸದಸ್ಯರನ್ನು ಒಟ್ಟುಗೂಡಿಸಿ ಸಭೆ ನಡೆಸಿ, ರಸ್ತೆ ಕಾಮಗಾರಿ ಸಂದರ್ಭದಲ್ಲಿ ಆಗುವ ಸಮಸ್ಯೆಗಳನ್ನು ಪರಿಹರಿಸಿಲಾಗುವುದು ಎಂದರು.
ಈ ವೇಳೆ ಶಾಸಕರ ಜೊತೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸ್ಥಳೀಯ ನಗರಸಭಾ ಸದಸ್ಯ ವಿಜಯ ಪೂಜಾರಿ,ಕೃಷ್ಣರಾವ್ ಕೊಡಂಚ, ರಮೇಶ್ ಕಾಂಚನ್, ಅಮೃತಾ ಕೃಷ್ಣಮೂರ್ತಿ, ನಗರಸಭಾ ಇಂಜಿನಿಯರ್ ಗಣೇಶ್, ದುರ್ಗಾಪ್ರಸಾದ್ ಹಾಗೂ ಗುತ್ತಿಗೆದಾರ ಉಪಸ್ಥಿತರಿದ್ದರು.