ತಸ್ಮಯ್ ಪ್ರೊಡಕ್ಷನ್ ರವರ ” ಕುಂದಾಪುರ ನಮ್ ಕುಂದಾಪ್ರ” ವಿಡಿಯೋ ಸಾಂಗ್ ಬಿಡುಗಡೆ

ಉಡುಪಿ : ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ತಸ್ಮಯ್ ಪ್ರೊಡಕ್ಷನ್ ಪ್ರಸ್ತುತಿಯಲ್ಲಿ ಮೂಡಿದ ಬಂದ ” ಕುಂದಾಪುರ ನಮ್ ಕುಂದಾಪ್ರ” ವಿಡಿಯೋ ಸಾಂಗ್ ಬಿಡುಗಡೆ ‌ಕಾರ್ಯಕ್ರಮವು ಆಜ್ರಿಹರ ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

 

ಆಜ್ರಿ ಶ್ರೀ ಕ್ಷೇತ್ರ ಶನೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಶೆಟ್ಟಿ ದೀಪ ಬೆಳಗಿಸಿ, ಹಲಸಿನ ಹಣ್ಣು ಕತ್ತರಿಸುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮ ಉದ್ಘಾಟಿಸಿದರು ತಸ್ಮಯ್ ಪ್ರೋಡಕ್ಷನ್ ಯು ಟ್ಯೂಬ್ ಚಾನೆಲ್ ಗೆ ಕುಂದಾಪ್ರ ಕನ್ನಡ ವಿಡಿಯೋ ಪೋಸ್ಟ್ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು ನಮ್ಮ ಕುಂದಾಪುರ ಭಾಷೆಯ ಸದ್ದು ದೇಶ ವಿದೇಶದಲ್ಲಿಯೂ ಮೊಳಗಿದೆ‌. ಇಲ್ಲಿನ ಪ್ರತಿಭೆಗಳು ಭಾಷೆಯ ಕೀರ್ತಿ ಹೆಚ್ಚಿಸುವಲ್ಲಿ ತಮ್ಮ ಕೊಡುಗೆ ನೀಡಿದೆ ಎಂದರು.

 

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕರ್ ನಾಯಕ್, ಚಿತ್ತಚಂಚಲ ಚಲನಚಿತ್ರ ಖ್ಯಾತಿಯ ಚಿತ್ರನಟ ನಿರ್ಮಾಪಕ ಕರುಣಾಕರ ಕುಂದರ್, ಕುಂದಾಪುರ ನಮ್ ಕುಂದಾಪ್ರ ಗೀತೆಯ ಸಂಗೀತ ನಿರ್ದೇಶಕ ಉತ್ತಮ ಸಾರಂಗ್, ಕತ್ತಲೆಕೋಣೆ ಚಿತ್ರದ ನಟ ಸುನೀಲ್ ಉಪ್ಪುಂದ, ಆಜ್ರಿ ಪಂಚಾಯತ್ ವಿಎ ಪರಶುರಾಮ್ ಉಪಸ್ಥಿತರಿದ್ದರು.
ಕತ್ತಲೆಕೋಣೆ ಖ್ಯಾತಿಯ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಪ್ರಸ್ತಾವಿಸಿದರು. ಪತ್ರಕರ್ತ, ಚಿತ್ರ ನಟ ಅಶ್ವಥ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರಾಘವ ಆಜ್ರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ವಿಶ್ವ ಕುಂದಾಪ್ರ ದಿನಾಚರಣೆಯ ಸವಿ ನೆನಪಿಗಾಗಿ ಗಿಡ ನೆಟ್ಟು‌ ನೀರೆಯಲಾಯಿತು. ಉಡುಪಿಯ ಕನ್ನಡ ವೆಬ್ ಸೈಟ್ ಉಡುಪಿ ಟೈಮ್ಸ್ ಈ ಹಾಡಿನ ಮೀಡಿಯಾ ಪಾರ್ಟ್ನರ್ ಆಗಿದೆ.

 

Leave a Reply

Your email address will not be published. Required fields are marked *

error: Content is protected !!