ಮಗು ಬಿಕ್ಕಳಿಸುವುದನ್ನು ತಡೆಯಲು ಏನು ಮಾಡಬೇಕು?

ಹಾಲು ಕುಡಿಯುತ್ತಿದ್ದಾಗ ಮಗು ತೇಗಿದರೆ ಹಾಲುಣಿಸುವುದು ನಿಲ್ಲಿಸಿ ಮಗುವಿಗೆ ತೇಗಲು ಬಿಡಿ. ಇದರಿಂದ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್‌ ಹೊರಹಾಕಲು ಸಹಾಯವಾಗುತ್ತೆ.

ಚಿಕ್ಕ ಮಕ್ಕಳಲ್ಲಿ ಬಿಕ್ಕಳಿಕೆ ಕಂಡು ಬರುವುದು ಸಹಜ. ಕೆಲವು ಮಕ್ಕಳಂತೂ ಬಿಕ್ಕಳಿ-ಬಿಕ್ಕಳಿಸಿ ನಿದ್ದೆ ಹೋಗುತ್ತವೆ.
ಮಗುವಿಗೆ ಆಗಾಗ ಬಿಕ್ಕಳಿಕೆ ಬರುತ್ತಿದ್ದರೆ ಭಯಪಡುವ ಅಗತ್ಯಯಿಲ್ಲ. ಈ ಸರಳ ಟಿಪ್ಸ್ ಪಾಲಿಸಿದರೆ ಸಾಕು, ಮಗುವಿನ ಬಿಕ್ಕಳಿಕೆ ನಿಲ್ಲುವುದು:

  1. ಹಾಲು ಕುಡಿಯುತ್ತಿದ್ದಾಗ ಮಗು ತೇಗಿದರೆ ಹಾಲುಣಿಸುವುದು ನಿಲ್ಲಿಸಿ ಮಗುವಿಗೆ ತೇಗಲು ಬಿಡಿ. ಇದರಿಂದ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್‌ ಹೊರಹಾಕಲು ಸಹಾಯವಾಗುತ್ತೆ.
  2. ಮಗುವಿಗೆ ಬಿಕ್ಕಳಿಕೆ ಬಂದಾಗ ಮಗುವನ್ನು ಎತ್ತಿಕೊಂಡು ಅದರ ಬೆನ್ನು ಬೆಲ್ಲನೆ ಸವರಿ. ತಲೆ ಅಥವಾ ಬೆನ್ನಿಗೆ ಜೋರಾಗಿ ತಟ್ಟಬೇಡಿ.
  3. ಮಗು ಬಿಕ್ಕಳಿಸುವಾಗ ಪೆಸಿಫಿಯರ್‌ ನೀಡಬಹುದು.
  4. ಮಗುವಿಗೆ ಬಾಟಲಿ ಹಾಲು ಕುಡಿಸಿದರೆ ಹೆಚ್ಚು ಗಾಳಿ ಒಳ ಹೋಗುವುದರಿಂದ ಬಿಕ್ಕಳಿಕೆ ಉಂಟಾಗುವುದು. ಎದೆ ಹಾಲುಣಿಸುವಾಗಲೂ ಸರಿಯಾದ ಭಂಗಿಯಲ್ಲಿ ಕೂತು ಉಣಿಸಿ.
  5. ಮಗು ತುಂಬಾ ಬಿಕ್ಕಳಿಸುತ್ತಿದ್ದರೆ ಕೂಡಲೇ ಮಕ್ಕಳ ತಜ್ಞರ ಸಲಹೆ ಪಡೆಯಿರಿ.

Leave a Reply

Your email address will not be published. Required fields are marked *

error: Content is protected !!