ಮಗು ಬಿಕ್ಕಳಿಸುವುದನ್ನು ತಡೆಯಲು ಏನು ಮಾಡಬೇಕು?
ಹಾಲು ಕುಡಿಯುತ್ತಿದ್ದಾಗ ಮಗು ತೇಗಿದರೆ ಹಾಲುಣಿಸುವುದು ನಿಲ್ಲಿಸಿ ಮಗುವಿಗೆ ತೇಗಲು ಬಿಡಿ. ಇದರಿಂದ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್ ಹೊರಹಾಕಲು ಸಹಾಯವಾಗುತ್ತೆ.
ಚಿಕ್ಕ ಮಕ್ಕಳಲ್ಲಿ ಬಿಕ್ಕಳಿಕೆ ಕಂಡು ಬರುವುದು ಸಹಜ. ಕೆಲವು ಮಕ್ಕಳಂತೂ ಬಿಕ್ಕಳಿ-ಬಿಕ್ಕಳಿಸಿ ನಿದ್ದೆ ಹೋಗುತ್ತವೆ.
ಮಗುವಿಗೆ ಆಗಾಗ ಬಿಕ್ಕಳಿಕೆ ಬರುತ್ತಿದ್ದರೆ ಭಯಪಡುವ ಅಗತ್ಯಯಿಲ್ಲ. ಈ ಸರಳ ಟಿಪ್ಸ್ ಪಾಲಿಸಿದರೆ ಸಾಕು, ಮಗುವಿನ ಬಿಕ್ಕಳಿಕೆ ನಿಲ್ಲುವುದು:
- ಹಾಲು ಕುಡಿಯುತ್ತಿದ್ದಾಗ ಮಗು ತೇಗಿದರೆ ಹಾಲುಣಿಸುವುದು ನಿಲ್ಲಿಸಿ ಮಗುವಿಗೆ ತೇಗಲು ಬಿಡಿ. ಇದರಿಂದ ಹೊಟ್ಟೆಯಲ್ಲಿರುವ ಬೇಡದ ಗ್ಯಾಸ್ ಹೊರಹಾಕಲು ಸಹಾಯವಾಗುತ್ತೆ.
- ಮಗುವಿಗೆ ಬಿಕ್ಕಳಿಕೆ ಬಂದಾಗ ಮಗುವನ್ನು ಎತ್ತಿಕೊಂಡು ಅದರ ಬೆನ್ನು ಬೆಲ್ಲನೆ ಸವರಿ. ತಲೆ ಅಥವಾ ಬೆನ್ನಿಗೆ ಜೋರಾಗಿ ತಟ್ಟಬೇಡಿ.
- ಮಗು ಬಿಕ್ಕಳಿಸುವಾಗ ಪೆಸಿಫಿಯರ್ ನೀಡಬಹುದು.
- ಮಗುವಿಗೆ ಬಾಟಲಿ ಹಾಲು ಕುಡಿಸಿದರೆ ಹೆಚ್ಚು ಗಾಳಿ ಒಳ ಹೋಗುವುದರಿಂದ ಬಿಕ್ಕಳಿಕೆ ಉಂಟಾಗುವುದು. ಎದೆ ಹಾಲುಣಿಸುವಾಗಲೂ ಸರಿಯಾದ ಭಂಗಿಯಲ್ಲಿ ಕೂತು ಉಣಿಸಿ.
- ಮಗು ತುಂಬಾ ಬಿಕ್ಕಳಿಸುತ್ತಿದ್ದರೆ ಕೂಡಲೇ ಮಕ್ಕಳ ತಜ್ಞರ ಸಲಹೆ ಪಡೆಯಿರಿ.