ಥಾಣೆ ಬಂಟ್ಸ್ ಎಸೋಸಿಯೇಶನ್:ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ

ಮುಂಬಯಿ: ಥಾಣೆ ಬಂಟ್ಸ್ ಎಸೋಸಿಯೇಶನ್ ಇದರ 15ನೇ ವಾರ್ಷಿಕ ಮಹಾಸಭೆಯು ಸೆ 21 ರಂದು ಥಾಣೆ ಪಶ್ಚಿಮದ ಮುಲುಂಡ್ ಚೆಕ್‌ನಾಕ ಸಮೀಪದ ಹೊಟೇಲ್ ವುಡ್‌ಲ್ಯಾಂಡ್ ರಿಟ್ರೀಟ್‌ನ ಸಭಾಗೃಹದಲ್ಲಿ ಥಾಣೆ ಬಂಟ್ಸ್ ಎಸೋಸಿಯೇಶನ್ ಇದರ ಅಧ್ಯಕ್ಷ ಕುಶಲ್ ಸಿ.ಭಂಡಾರಿ ಅವರ ಅಧ್ಯಕ್ಷತೆ ಯಲ್ಲಿ ಜರಗಿತು. ಈ ಸಂದರ್ಭದಲ್ಲಿ ನೆರವೇರಿದ ನೂತನ ಪದಾಧಿಕಾರಿ ಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಥಾಣೆ ಬಂಟ್ಸ್ ಎಸೋಸಿಯೇಶನ್ ಇದರ 2019-21 ರ ಸಾಲಿನ ನೂತನ ಅಧ್ಯ ಕ್ಷರಾಗಿ ವೇಣು ಗೋಪಾಲ್ ಎಲ್ ಶೆಟ್ಟಿಯವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಇದೇ ಸಂದರ್ಭದಲ್ಲಿ ಥಾಣೆ ಬಂಟ್ಸ್ ಎಸೋಸಿಯೇಶನ್‌ನ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಕುಶಲಾ ನವೀನ್ ಶೆಟ್ಟಿಯವರನ್ನು ಮತ್ತು ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ದೃಶ್ಯ ಎಸ್ ಶೆಟ್ಟಿಯ ವರನ್ನು ಸರ್ವಾನುಮತದಿಂದ ನೇಮಕಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!