ಆರೋಗ್ಯವರ್ಧಕ, ಸೌಂದರ್ಯವರ್ಧಕವಾಗಿ ಹಸಿ ಅರಶಿಣದ ಪ್ರಯೋಜನ..!

ಅರಶಿಣ ಭಾರತದ ಸಾಂಪ್ರದಾಯಿಕ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಭಾರತದ ಸಂಸ್ಕೃತಿಯಲ್ಲಿ ಅರಶಿಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅರಶಿಣ ದೇವರ ಕೆಲಸದಲ್ಲೂ ಪ್ರಮುಖ ಪಾತ್ರ ವಹಸುತ್ತದೆ. ದೇವರ ಪೂಜೆಗೆ, ಅಡುಗೆಗೆ ಬಳಸುವ ಈ ಅರಶಿಣದಲ್ಲಿ ಸಾಕಷ್ಟು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಆಗಿನ ಕಾಲದಲ್ಲಿ ದೇಹಕ್ಕೆ ಸ್ವಲ್ಪ ಗಾಯಗಳಾದರೂ ಕೂಡ ಥಟ್ ಅಂತಾ ಆ ಗಾಯದ ಮೇಲೆ ಅರಶಿಣವನ್ನು ಹಾಕುತ್ತಿದ್ದರು. ಇದರಿಂದ ರಕ್ತಸ್ರಾವ ನಿಂತು ಗಾಯ ಬೇಗ ವಾಸಿಯಾಗುತ್ತದೆ. ಈ ಅರಶಿಣ ಹಲವಾರು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇವುಗಳ ಆರೋಗ್ಯ ಪ್ರಯೋಜನದ ಕುರಿತು ತಿಳಿಯಲು ಮುಂದಿನ ಮಾಹಿತಿ ಓದಿ..

ಹಸಿ ಅರಿಶಿಣವು ರುಚಿಯಲ್ಲಿ ಕಹಿಯಾಗಿರುತ್ತದೆ. ಅದನ್ನು ತಿನ್ನಲು ತುಂಬಾ ಕಷ್ಟ. ನೀವು ನಿಯಮಿತವಾಗಿ ಅರಿಶಿಣ ಸೇವಿಸಿದರೆ, ಹಲವು ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ. ಸಕ್ಕರೆ ರೋಗಿಗಳಿಗೆ ಹಸಿ ಅರಿಶಿಣ ವರದಾನವಾಗಿದೆ. ನೀವು ಅರಿಶಿಣವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ವಾಸ್ತವವಾಗಿ ಅರಿಶಿಣದಲ್ಲಿ ಕಂಡುಬರುವ ಲಿಪೊಪೊಲಿಸ್ಯಾಕರೈಡ್ ಎಂಬ ಅಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಹಸಿ ಅರಿಶಿಣವನ್ನು ಹಚ್ಚುವುದರಿಂದ ಮುಖದ ಹೊಳಪು ಮರಳಿ ಬರುತ್ತದೆ. ಪ್ರತಿದಿನ ಹಸಿ ಅರಿಶಿಣವನ್ನು ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ತ್ವಚೆಯ ಮೇಲಿನ ಕಲೆಗಳು ನಿವಾರಣೆಯಾಗಿ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ. ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ಮನೆಯಲ್ಲಿ ಹಸಿ ಅರಿಶಿಣ ಸಹಕಾರಿ.
ಒಂದು ಚಮಚ ಹಸಿ ಅರಿಶಿಣದಲ್ಲಿ ಹಾಲನ್ನು ಬೆರೆಸಿ ಪೇಸ್ಟ್ ಮಾಡಿ ಮತ್ತು ಅದನ್ನು ಪ್ರತಿದಿನ ಮುಖಕ್ಕೆ ಹಚ್ಚಬೇಕು. ನಂತರ ಸುಮಾರು ಅರ್ಧ ಘಂಟೆಯ ನಂತರ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

Leave a Reply

Your email address will not be published. Required fields are marked *

error: Content is protected !!