ಗೀತೋಪದೇಶ-ಪ್ರಥಮೋಧ್ಯಾಯ- ಶ್ಲೋಕ -೩

ಅರ್ಜುನ ವಿಷಾದಯೋಗ

ಶ್ಲೋಕ ..೩

ಸಂಜಯ ಉವಾಚ…

ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್|
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ|

ಕುರುಕ್ಷೇತ್ರ ಯುದ್ದದ ರಣಭೂಮಿಯಲ್ಲಿ ತನ್ನವರಾದ  ಕೌರವರು ಮತ್ತು ಪಾಂಡವರು ಏನು ಮಾಡುತ್ತಿದ್ದಾರೆ ಎಂಬ ಧೃತರಾಷ್ಟ್ರನ ಪ್ರಶ್ನೆಗೆ ಸಂಜಯ ಉತ್ತರಿಸುತ್ತಾ ,ನುಡಿಯುತ್ತಾನೆ .." ಹೇ ರಾಜನ್... ದುರ್ಯೋಧನ ತನ್ನ ಎದುರಾಳಿಗಳಾದ ಪಾಂಡವರ ಸೇನೆಯ  ರಚನೆಯನ್ನು ನೋಡಿ , ತನ್ನ ಗುರುಗಳಾದ ದ್ರೋಣಾಚಾರ್ಯರ  ಬಳಿ ಬಂದು ,  ಆಚಾರ್ಯರೇ! ತಮ್ಮ ಶಿಷ್ಯರಲ್ಲಿ ಬುದ್ಧಿವಂತನಾದ , ದ್ರುಪದನ ಮಗನಾದ ಧೃಷ್ಟದ್ಯುಮ್ನನಿಂದ  ಸುಸಜ್ಜಿತವಾಗಿ  ವ್ಯೂಹಾಕಾರವಾಗಿ ರಚಿಸಲ್ಪಟ್ಟ ಪಾಂಡು ಪುತ್ರರ ಆ ಬಹು ದೊಡ್ಡ ಸೈನ್ಯವನ್ನು ನೋಡಿರಿ .."ಎಂದು ತನ್ನ ಗುರುಗಳಿಗೇ  ದುರ್ಯೋಧನ ಮಾತಿನಲ್ಲೇ  ವ್ಯಂಗ್ಯದಿಂದ ಕುಟುಕಿ  ಹೇಳುತ್ತಿದ್ಧಾನೆ .  ಅಂದರೆ ಇಲ್ಲಿ ದುರ್ಯೋಧನನ  ಒಳಮನಸ್ಸಿಗೂ  ತಿಳಿದಿದೆ ..ತನ್ನ ಗುರು ದ್ರೋಣರೂ ಸಹ ತನ್ನ ಮೇಲಿನ ಪ್ರೀತಿಯಿಂದ ತನ್ನ ಪಕ್ಷ ಸೇರಲಿಲ್ಲಾ , ಬದಲಿಗೆ ತನ್ನ ಅನ್ನದ ಋಣಕ್ಕೆ ಕಟ್ಟುಬಿದ್ದು ಅಸಹಾಯಕರಾಗಿ ತಮ್ಮ ಜೊತೆ ನಿಂತಿದ್ದಾರೆ ..ಆದರೆ ಅವರು ಮನಸ್ಸಿನಲ್ಲಿ  ಪಾಂಡವರಿಗೇ ಜಯವಾಗಲಿ ಎಂದು ಹಾರೈಸುವವರು  ಎಂಬುದು ತಿಳಿದಿದ್ದರಿಂದಲೇ ದ್ರೋಣರ ಬಳಿ ಹೀಗೆ  ಅಣಕವಾಡುವನು ..ಹಾಗೇ ಇಲ್ಲಿ ದುರ್ಯೋಧನನಿಗೆ ವಿದ್ಯೆ ಕಲಿಸಿದ ಗುರುಗಳ ಬಳಿ  ಹೇಗೆ ಸೌಜನ್ಯದಿಂದ ನಡೆದುಕೊಳ್ಳಬೇಕೆಂದು ತಿಳಿದಿಲ್ಲ ಎಂಬುದನ್ನೂ ನಾವು  ನೋಡಬಹುದು . ಹಾಗೇ  ದುರ್ಯೋಧನ  ದ್ರೋಣರ   ಬಳಿ  ಇನ್ನೇನು ಹೇಳಿದ ?? ನಾಳೆ ನೋಡೋಣ 🙏 

ಸುನೀತಾ ಉಡುಪ ಜನ್ನಾಡಿ..ಬಿದ್ಕಲ್ ಕಟ್ಟೆ

Leave a Reply

Your email address will not be published. Required fields are marked *

error: Content is protected !!