ಸಿದ್ದರಾಮಯ್ಯ ಎತ್ತಿದ ಇನ್ನೊಂದು ಸಂಸದೀಯ ಪ್ರಶ್ನೆ ?

ಲೇಖಕರು: ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ .

“ವಿಧಾನ ಸಭೆಯ ವಿಪಕ್ಷ ನಾಯಕರಾದ ನಾನು ರಾಜ್ಯದ ಜಿಲ್ಲಾಧಿಕಾರಿಗಳ ಜೂಮ್ ಮೀಟಿಂಗ್ ಕರೆದು ಅವರ ಜೊತೆ ರಾಜ್ಯದ ಸಮಸ್ಯೆಗಳ ಕುರಿತಾಗಿ ಚಚಿ೯ಸುತ್ತೇನೆ.ಅದಕ್ಕೆ ಸಮಯ ನಿಗದಿ ಪಡಿಸುವಂತೆ ರಾಜ್ಯದ ಮುಖ್ಯ ಕಾಯ೯ದಶಿ೯ಗಳಿಗೆ ಪತ್ರ ಬರೆದರು.ಆದರೆ ಅದಕ್ಕೆ ಮುಖ್ಯ ಕಾಯ೯ದಶಿ೯ಗಳು ತುಂಬಾ ಸರಳವಾಗಿ ಸಾಧ್ಯವಾಗದು ಅನ್ನುವ ರೀತಿಯಲ್ಲಿ ನಾಜೂಕವಾಗಿ ಉತ್ತರ ನೀಡಿದರು.ಇದಕ್ಕೆ ಸಿದ್ದರಾಮಯ್ಯ ನವರು ನಾನು ಪ್ರಜಾಪ್ರಭುತ್ವ ದಾರಿಯಲ್ಲಿ ಹೇೂರಾಟ ನಡೆಸುತ್ತೇನೆ ಅನ್ನುವ ಉತ್ತರ ನೀಡಿದರು.ಬಿಜೆಪಿ ಕೂಡಾ ತೀವ್ರ ವಾಗಿ ಸಿದ್ದರಾಮಯ್ಯ ನವರ ಸೇೂಲು ಗೆಲುವಿನ ಲೆಕ್ಕಾಚಾರ ಮುಂದಿಟ್ಟು ನಿಮ್ಮ ಸ್ಥಾನ ಅಧಿಕಾರ ಏನು ಅನ್ನುವುದನ್ನು ಪರೀಕ್ಷಿಸಿ ಕೊಳ್ಳಿ ಅನ್ನುವ ಹಾಗೆ ಪ್ರತಿಕ್ರಿಯೆ ನೀಡಿದೆ.

ಈಗ ನಮ್ಮ ಮುಂದಿರು ಬಹು ಮುಖ್ಯ ಪ್ರಶ್ನೆ ಅಂದರೆ ಸಂಸದೀಯ ವ್ಯವಸ್ಥೆಯಲ್ಲಿ ವಿಪಕ್ಷಕ್ಕೆ ಅಥಾ೯ತ್ ಅದರ ನಾಯಕರಿಗೆ ಆಡಳಿತದಲ್ಲಿ ನೇರವಾಗಿ ಪ್ರವೇಶಿಸುವ ಹಸ್ತಕ್ಷೇಪ ಮಾಡುವ ಅಧಿಕಾರ ವಿದೆಯೇ ಅನ್ನುವುದು ಮೂಲ ಭೂತ ಪ್ರಶ್ನೆ .ಸಂಸದೀಯ ಪದ್ದತಿಯಲ್ಲಿ ವಿಪಕ್ಷಕ್ಕೆ ಸರ್ಕಾರ ವನ್ನು ಪ್ರಶ್ನಿಸುವ ಮಾಹಿತಿಯನ್ನು ಪಡೆದು ಕೊಳ್ಳುವ ಅಧಿಕಾರ ಪ್ರಾಪ್ತ ಮಾಡಲಾಗಿದೇ ಹೊರತು ಆಡಳಿತದಲ್ಲಿ ನೇರವಾಗಿ ಪ್ರವೇಶಿಸಿ ಅಧಿಕಾರ ಚಲಾಯಿಸುವ ಮಟ್ಟಿಗೆ ಅಧಿಕಾರ ವ್ಯಾಪ್ತಿ ನೀಡಿಲ್ಲ.

ಸಂಸದೀಯ ಕಾಯಾ೯ಂಗದಲ್ಲಿ ಎರಡು ಕಾಯಾ೯ಂಗಗಳು ಕಾಯ೯ ನಿವ೯ಹಿಸುತ್ತವೆ . 1.ರಾಜಕೀಯ ಕಾಯಾ೯ಂಗ ಉದಾ:ಮುಖ್ಯಮಂತ್ರಿ (ರಾಜ್ಯ ದಲ್ಲಿ )ಹಾಗೂ ಅವರ ಸಚಿವ ಸಂಪುಟ . 2.ಅದರ ಕೆಳಗೆ ನಿರಂತರವಾಗಿ ಶಾಶ್ವತವಾಗಿ ಕಾಯ೯ ಮಾಡುವ ನಾಗರಿಕ ಸೇವಾ ವಗ೯.ಇವರು ರಾಜಕೀಯ ಕಾಯ೯ಂಗಕ್ಕೆ ಉತ್ತರ ದಾಯಿತ್ವ ವಾಗಿ ಕಾಯ೯ನಿವ೯ಹಿಸ ಬೇಕು.ಅದು ಬಿಟ್ಟು ನಾಗರಿಕ ಸೇವಾ ಕಾಯ೯ದಲ್ಲಿ ವಿಪಕ್ಷಗಳು ನೇರ ಪ್ರವೇಶಿಸುವದರಿಂದ ಆಡಳಿತ ವ್ಯವಸ್ಥೆಯಲ್ಲಿ ಇನ್ನಷ್ಟು ಗೊಂದಲ ಸೃಷ್ಟಿ ಆಗುತ್ತದೆ ಅನ್ನುವ ಕಾರಣಕ್ಕಾಗಿಯೇ ಸರಕಾರದ ವತು೯ಲದಿಂದ ಹೊರಗೆ ಇಟ್ಟಿರುವುದು.


ಕಾಯಾ೯ಂಗದ ಪರಿಧಿ ಒಳಗೆ ವಿಪಕ್ಷ ಬರುವುದಿಲ್ಲ ಅನ್ನುವ ಸಂಸದೀಯ ನಡವಳಿಕೆಯ ನಿಯಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ತಿಳಿದಿರ ಬೇಕಾಗಿತ್ತು.ಬಿ.ಎಲ್ ಶಂಕರ್ ಒಂದು ಹೆಜ್ಜೆ ಮುಂದೆ ಹೇೂಗಿ ವಿಪಕ್ಷ ನಾಯಕ ಶ್ಯಾಡೊ ಮುಖ್ಯಮಂತ್ರಿ ಅನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆ ಅಂದರೆ ಅದು ಪಯಾ೯ಯ ಸರಕಾರ ಅನ್ನುವ ಅಥ೯ದಲ್ಲಿ ಹೊರತು ಒಬ್ಬ ಮುಖ್ಯಮಂತ್ರಿ ಅಧಿಕಾರದಲ್ಲಿ ಇರುವಾಗ ಅಲ್ಲ ಅನ್ನುವುದು “ಶ್ಯಾಡೊ”ಪದದ ಅಥ೯.ಅಂತೂ ಸಂಸದೀಯ ಸರಕಾರದ ವಿನ್ಯಾಸದ ಕುರಿತಾಗಿ ಮರು ಚಿಂತನೆ ಮಾಡುವ ವೇದಿಕೆ ನಿಮಿ೯ಸಿ ಕೊಟ್ಟಿದ್ದಾರೆ ಅಷ್ಟೇ ..ಪ್ರತಿಕ್ರಿಯೆ ಮೂಡಿಬರಲಿ.

ಲೇಖಕರು: ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ .

Leave a Reply

Your email address will not be published. Required fields are marked *

error: Content is protected !!