ಕುಂದಾಪುರ: “ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್” ಕನ್ನಡ, ತುಳು ಭಾಷೆಯಲ್ಲಿ ಆಲ್ಬಮ್ ಗೀತೆ ಬಿಡುಗಡೆಗೆ ಸಿದ್ದ

ಉಡುಪಿ(ಉಡುಪಿ ಟೈಮ್ಸ್ ವರದಿ): ಕುಂದಾಪುರದ ಕಲತ್ವ ಮತ್ತು ಸಿರಿ ಹಾಗೂ ವನಸ್ತಾ ಆಗ್ರೋ ಫುಡ್ಸ್ ರವರ ನಿರ್ಮಾಣದಲ್ಲಿ ಕನ್ನಡ, ತುಳು ಆಲ್ಬಮ್ ಗೀತೆ “ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್” ಬಿಡುಗಡೆಗೆ ಸಜ್ಜಾಗಿದೆ.

“ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್ ” ಆಲ್ಬಮ್ ನಲ್ಲಿ ಖಾಸಗಿ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದ ಸೂರಜ್, ಶ್ರಾವ್ಯ ಮರವಂತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಖ್ಯಾತ ಯೋಗಪಟು ತನ್ವಿತ ವಿ ಕುಂದಾಪುರ ಈ ಹಾಡಿಗೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ . ಶಿವು ಕುಂದಾಪುರ ರವರ ನಿರ್ದೇಶನ ಹಾಗೂ ಮನೀಶ್ ಮೊಯ್ಲಿಯವರ ಸಹ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಹಾಡು ಏಕಕಾಲದಲ್ಲಿ ಕನ್ನಡ ಹಾಗೂ ತುಳು ಎರಡು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಹಾಡಿಗೆ ಶೀತಲ್ ಎಸ್ ಎಂ ಧ್ವನಿ ನೀಡಿದರೆ, ತುಳು ಹಾಡಿಗೆ ಕೆಪಿ ಮಿಲನ್ ಹಾಗೂ ರೋಷನಿ ಪೂಜಾರಿ ಧ್ವನಿ ನೀಡಿದ್ದಾರೆ, ಹಾಗೆ ಕನ್ನಡ ಸಾಹಿತ್ಯ ಮನೀಶ್ ಮೊಯ್ಲಿ ಹಾಗೂ ತುಳು ಸಾಹಿತ್ಯ ಶ್ರೀಧರ್ ಕರ್ಕೇರ ರವರ ಬರವಣಿಗೆಯಲ್ಲಿ ಮೂಡಿಬಂದಿದೆ. ಒಲವೇ ಖ್ಯಾತಿಯ ಸನತ್ ಉಪ್ಪುಂದರವರ ಛಾಯಾಗ್ರಹಣವಿದೆ ಹಾಗೂ ನಿತೀಶ್ ಭಾರಧ್ವಾಜ್ ರವರು ಪ್ರೊಡಕ್ಷನ್ ಮ್ಯಾನೇಜರ್ ಕಾರ್ಯವನ್ನ ನಿರ್ವಹಿಸಿದ್ದಾರೆ. ಪ್ರಚಾರ ಕಲೆಯಲ್ಲಿ ಶ್ರೀಶ ಉಪ್ಪುಂದ ಹಾಗೂ ಹಂಚಿಕೆ ವಿಭಾಗದಲ್ಲಿ ರವಿರಾಜ್ ಪೂಜಾರಿ, ಹರ್ಷಿತ್ ತೆಕ್ಕಟ್ಟೆ ಕಾರ್ಯ ನಿರ್ವಹಿಸಿದ್ದಾರೆ.

ದುಬಾರಿ ವೆಚ್ಚದಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಿಸಿರುವುದು ಈ ಆಲ್ಬಮ್ ಹಾಡಿನ ವಿಶೇಷ. ಸಾಮಾಜಿಕ ಜಾಲತಾಣಗಳಲ್ಲಿ ಹೆಸರುವಾಸಿಯಾಗಿರುವ ಕುಂದಾಪುರ ಟ್ರೊಲ್ಸ್ ಸಹಾಭಾಗಿತ್ವದಲ್ಲಿ ಮೂಡಿ ಬಂದಿರುವ ಈ ಹಾಡು ಅತೀ ಶೀಘ್ರದಲ್ಲೇ ಟೀಮ್ ಕಲತ್ವ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ

1 thought on “ಕುಂದಾಪುರ: “ರಾಮಾಚಾರಿ ವೆಡ್ಸ್ ಮಾರ್ಗರೆಟ್ಸ್” ಕನ್ನಡ, ತುಳು ಭಾಷೆಯಲ್ಲಿ ಆಲ್ಬಮ್ ಗೀತೆ ಬಿಡುಗಡೆಗೆ ಸಿದ್ದ

Leave a Reply

Your email address will not be published. Required fields are marked *

error: Content is protected !!