ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಮತ್ತೊಂದು ಚಿತ್ರ ‘ಲಗಾಮ್’ನ ಚಿತ್ರೀಕರಣ

ಬೆಂಗಳೂರು ಎ.19: ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಮತ್ತೊಂದು ಹೊಸ ಚಿತ್ರ ‘ಲಗಾಮ್’ ನ ಚಿತ್ರೀಕರಣ ಇದೇ ತಿಂಗಳು ಆರಂಭಗೊಳ್ಳಲಿದೆ.

ಈ ಚಿತ್ರದ ಚಿತ್ರೀಕರಣ ಇದೇ ಎ.26 ರಂದು ಆರಂಭಗೊಳ್ಳಲಿದ್ದು, ಈ ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿ ಹರಿಪ್ರಿಯಾ ಅವರು ತೆರೆ ಹಂಚಿಕೊಂಡಿದ್ದಾರೆ. ಕೆ.ಮಾದೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಎಂ.ಆರ್ ಗೌಡ ಅವರು ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಮುಹೂರ್ತ ನೆರವೇರಿಸಿದ್ದರು. ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಮೈಸೂರಿನಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಚಿತ್ರದಲ್ಲಿ ರಂಗಾಯಣ ರಘು, ಶೋಭರಾಜ್, ಸಾಧುಕೋಕಿಲ ಸೇರಿದಂತೆ ಮೊದಲಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಉಪ್ಪಿಯ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!