ಪತ್ನಿಗೆ ಕತ್ತಿಯಿಂದ ಕಡಿದು ರಕ್ತ ನೋಡಿ ಹೆದರಿದ ಪತಿ ನೇಣಿಗೆ ಶರಣು
ಕಾರ್ಕಳ: ಪತ್ನಿಗೆ ಕತ್ತಿಯಿಂದ ಕಡಿದು ರಕ್ತ ಬರುತ್ತಿರುವುದನ್ನು ನೋಡಿ ಹೆದರಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿರ್ಗಾನ ಗ್ರಾಮದ ಚಿಕ್ಕಲ್ಬೆಟ್ಟು ನಡಿಮತ್ತಾವು ಎಂಬಲ್ಲಿ ಮಂಗಳವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹಿರ್ಗಾನ ನಡಿಮತ್ತಾವು ನಿವಾಸಿ ಗೋಪಾಲ ಕೃಷ್ಣ ಎಂದು ಗುರುತಿಸಲಾಗಿದೆ.
ಗೋಪಾಲಕೃಷ್ಣ ಎಂಬಾತ ತನ್ನ ಪತ್ನಿ ಸುರೇಖಾ ಎನ್ನುವವರಿಗೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಆಕೆಯ ಮೈಯಿಂದ ರಕ್ತ ಬರುವುದನ್ನು ನೋಡಿ ಹೆದರಿದ ಗೋಪಾಲಕೃಷ್ಣ ಮನೆಯ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





