ವೈಶ್ಯವಾಟಿಕೆ ದಂದೆಗೆ ಕೈ ಹಾಕಿ ಪೋಲಿಸರ ಅತಿಥಿಯಾದ ಸೆಕ್ಯೂರಿಟಿ ಗಾರ್ಡ್!

ಮಣಿಪಾಲ: ಈಶ್ವರನಗರ 20 ನೇ ಕ್ರಾಸ್‌‌ನ ಅಪಾರ್ಟ್‌ಮೆಂಟ್‌ ನ ಮೊದಲನೇ ಮಹಡಿಯ ರೂಮ್‌ನಲ್ಲಿ ಮಹಿಳೆಯನ್ನು ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸೆಕ್ಯೂರಿಟಿ ಗಾರ್ಡ್‌ನನ್ನು ಬಂಧಿಸಲಾಗಿದೆ.ಇನ್ನೋರ್ವ ಆರೋಪಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ಹೊನ್ನಾವರ ಗಣೇಶ್ ಗಣಪ ನಾಯ್ಕ್ (38) ಬಂಧಿತ ಆರೋಪಿ. ಇತನಿಗೆ ಅಪಾರ್ಟ್​​ಮೆಂಟ್ ಮನೆಯ ಮಾಲೀಕರು ಮನೆಯ ಬೀಗವನ್ನು ಕೊಟ್ಟು ಹೊರಗೆ ಹೋದಾಗ, ಚಾಲಾಕಿ ಸೆಕ್ಯೂರಿಟಿ ಗಾರ್ಡ್ ಮನೆಯ ಕೀಯನ್ನ ಬಳಸಿಕೊಂಡು ವೇಶ್ಯಾವಾಟಿಕೆ ವ್ಯವಹಾರಕ್ಕೆ ಬಳಸಿದ್ದಾನೆ.

ವೇಶ್ಯಾವಾಟಿಕೆ ದಂದೆಯಲ್ಲಿ ತೊಡಗಿದ್ದ ಮಂದಿಗೆ ಮನೆಯ ಕೀಯನ್ನು ಒಂದು ಸಾವಿರ ರೂಪಾಯಿಗಳಿಗೆ ನೀಡ್ತಿದ್ದ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. ಸದ್ಯ ಓರ್ವ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ ಇನ್ನೊಬ್ಬನಿಗೆ ಪೋಲಿಸರು ಬಲೆ ಬಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!