ಸೀತಾಫಲ ಹಣ್ಣನ್ನು ತಿನ್ನಿ ಹೃದಯನ್ನು ಆರೋಗ್ಯವಾಗಿರಿಸಿ
ದೇಹಾರೋಗ್ಯ ಕಾಪಾಡಿಕೊಳ್ಳಲು ಹಣ್ಣುಗಳ ಸೇವನೆ ಉತ್ತಮ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಡಾಕ್ಟರ್ ಕೂಡ ಹಣ್ಣನ್ನು ತಿನ್ನುವಂತೆ ಸಲಹೆ ನಿಡುತ್ತಾರೆ. ಹೀಗಿರುವಾಗ ನಾವು ಯಾವುದೋ ಒಂದು ಹಣ್ಣನ್ನು ತಿನ್ನುತ್ತೇವೆ. ಆದರೆ ತಿನ್ನುವಾಗ ಯಾವ ಹಣ್ಣು ಆರೋಗ್ಯಕ್ಕೆ ಹೆಚ್ಚು ಉತ್ತಮ ಎಂದು ತಿಳಿದುಕೊಂಡು ತಿನ್ನುವುದು ಒಳ್ಳೆಯದು. ಸೀತಾಫಲ ಒಂದು ವಿಟಮನ್-ಸಿ ಇರುವ ಹಣ್ಣಾಗಿದ್ದು, ಇದು ಎಲ್ಲಾ ಕಾಲದಲ್ಲಿಯೂ ಸಿಗುವುದಿಲ್ಲ. ಬೇರೆ ಹಣ್ಣುಗಳಿಗೆ ಹೋಲಿಸಿದರೆ ಈ ಸೀತಾಫಲ ಹಣ್ಣಿನಲ್ಲಿ ಕ್ಯಾಲೋರಿ ಅಂಶ ಸಾಕಷ್ಟಿದೆ. ಇದರ ಇನ್ನಿತರ ಉಪಯೋಗಗಳನ್ನು ಹೇಳ್ತೇವೆ ನೋಡಿ.

ಈ ಸೀತಾಫಲ ಹಣ್ಣು ಹೃದಯ, ಎಲುಬು, ಚರ್ಮ ರಕ್ಷಣೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಪೊಟ್ಯಾಶಿಯಂ ಹೃದಯಬೇನೆ, ಪಾರ್ಶ್ವವಾಯು ಬರದಂತೆ ನೋಡಿಕೊಳ್ಳುತ್ತದೆ. ಕ್ರಮವಾಗಿ ಈ ಹಣ್ಣು ಸೇವಿಸುವವರಲ್ಲಿ ಕೀಲುನೋವು, ಆರ್ಥ್ರೈಟಿಸ್ ಬರುವ ಸಾಧ್ಯತೆ ಕಮ್ಮಿ. ಇದು ನೋವು ನಿವಾರಕ ಮತ್ತು ಹೊಟ್ಟೆಯಲ್ಲಿನ ಅಲ್ಸರ್ ಅನ್ನು ಗುಣಪಡಿಸುತ್ತದೆ. ಇದರಲ್ಲಿನ ನಾರು ಸತ್ವ ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಕೊಲೆಸ್ಟ್ರಾಲ್ ತಗ್ಗಿಸಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಇದರಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಇದು ದೃಷ್ಟಿ ಸ್ಪಷ್ಟತೆಗೆ ಸಹಾಯಕವಾಗಿದೆ. ಗರ್ಭಿಣಿಯರಿಗೆ ಇದೊಂದು ಉತ್ತಮ ಆಹಾರ. ವಾಂತಿ, ವಿಕಾರ, ರಕ್ತಹೀನತೆ ಇತ್ಯಾದಿಯನ್ನು ಹೋಗಲಾಡಿಸುತ್ತದೆ. ಮಲಬದ್ಧತೆ ಸಮಸ್ಯೆಗೂ ಪರಿಹಾರ ನೀಡುತ್ತದೆ. ಇದರಲ್ಲಿನ ಫಿನಾಲಿಕ್ ಪದಾರ್ಥ ಒಳ್ಳೆಯ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.





