ಅಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾಗಿ ಜಯಾನಂದ ಕೊಡವೂರು ಆಯ್ಕೆ
ಅಲಯನ್ಸ್ ಕ್ಲಬ್ ಉಡುಪಿ ಇದರ ಸ್ಥಾಪಕ ಅಧ್ಯಕರಾಗಿ ಉಡುಪಿಯ ಸಾಮಾಜಿಕ ಕಾರ್ಯಕರ್ತ ಜಯಾನಂದ ಕೊಡವೂರು ಆಯ್ಕೆಯಾಗಿದ್ದಾರೆ.
ಈ ಕ್ಲಬ್ ಜಿಲ್ಲೆ 275 ರಲ್ಲಿ ಅತೀ ದೊಡ್ಡ ಕ್ಲಬ್ ಆಗಿದ್ದು ಈ ಕ್ಲಬ್ ನ ಹಲವಾರು ಸದಸ್ಯರು ಸಂಪುಟದ ಸದಸ್ಯರಾಗಿರುತ್ತಾರೆ.
ಈ ಸಂಸ್ಥೆಯ ಕಾರ್ಯದರ್ಶಿಯಾಗಿ ಕೇಶವ ಅಮೀನ್ ಮತ್ತು ಖಜಾಂಚಿಯಾಗಿ ಪ್ರಶಾಂತ್ ಭಂಡಾರಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲೆಯ ಪ್ರಥಮ ಉಪ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ತಿಳಿಸಿರುತ್ತಾರೆ.





