ಕರುನಾಡಿನ ಇನ್ನೊಂದು ಹೊಸ ಅನ್ನಭಾಗ್ಯ “ಸರ್ವೇ ಜನಾ: ಸುಖಿನೇೂ ಭವಂತು”…!

ಕರುನಾಡಿನ ಜನ ಹಸಿದ ಹೊಟ್ಟೆಯಲ್ಲಿ ಯಾರು ಮಲಗಬಾರದು ಅನ್ನುವ ಉದ್ದಾತವಾದ ಸಂಕಲ್ಪದೊಂದಿಗೆ ಬಂದ ಗ್ಯಾರಂಟಿಯೇೂಜನೆಗಳಲ್ಲಿ ಅನ್ನ ಭಾಗ್ಯ ಯೇೂಜನೆಯೂ ಒಂದು. ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ ಹತ್ತು ಕೆ.ಜಿ.ಅಕ್ಕಿ ಉಚಿತವಾಗಿ ನೀಡುವ ಮಹಾ ಪುಣ್ಯದ ಕೆಲಸವೊಂದನ್ನು ಕರುನಾಡಿನ ನಾಡ ದೊರೆಗಳು ಅನುಷ್ಠಾನ ಗೊಳಿಸಿಯೇ ಬಿಟ್ಟರು. ಈ ಪುಣ್ಯದ ಫಲವನ್ನು ಅನುಭವಿಸಬೇಕಾದವರು ಬಡತನದಿಂದ ಕೆಳಗಿರುವ ಪಡಿತರ ಚೀಟಿದಾರರು ಅಂದರೆ (BPL ರೇಷನ್ ಕಾಡು೯ದಾರರು). ಒಂದು ರೀತಿಯಲ್ಲಿ ಇದೊಂದು ಮಾನವೀಯತೆಯನ್ನು ಬಿಂಬಿಸುವ ಕಾರ್ಯಕ್ರಮವೂ ಹೌದು. ಇದರಲ್ಲಿ ಎರಡು ಮಾತಿಲ್ಲ. ಆದರೆ ವಾಸ್ತವಿಕತೆಯ ಪರಿಸ್ಥಿತಿ ಏನಾಗಿದೆ ಅಂದರೆ ಇಷ್ಟೊಂದು ಅನ್ನ ಭಾಗ್ಯವನ್ನು ಮನೆಯಲ್ಲಿ ತಿನ್ನುವವರು ಯಾರು..? ಅನ್ನುವ ಸಮಸ್ಯೆ ಉದ್ಬವಾಗಿದೆ. ಕೆಲವೊಂದು ಕಡೆ ಅರೆ ಬೆಂದ ಕುಚ್ಚಿಲು ಅಕ್ಕಿ. ಇನ್ನೂ ಕೆಲವು ಕಡೆ ಬೆಳ್ತಿಗೆ ಅಕ್ಕಿ. ಅಂತು ಇದೆನ್ನೆಲ್ಲ ತಿಂದು ಮುಗಿಸುವುದಾದರೂ ಹೇಗೆ ಪಾಪ..!? ಅದಕ್ಕಾಗಿಯೇ ಇರಬೇಕು ಹಸಿವಿನ ಹೊಟ್ಟೆಯವರು ಹೊಸದೊಂದು ಉಪಾಯ ಕಂಡುಕೊಂಡು ಬಿಟ್ಟಿದ್ದಾರೆ. ಅದು ಕೂಡಾ ಎಲ್ಲರ ಹಿತಕ್ಕಾಗಿಯೇ. “ಸರ್ವೇ ಜನಾ: ಸುಖಿನೇೂ ಭವಂತು” ಅನ್ನುವ ಇನ್ನೊಂದು ಅನ್ನ ಭಾಗ್ಯ ಕಾರ್ಯಕ್ರಮ.

ಹೇಗೂ ಇಷ್ಟೊಂದು ಅಕ್ಕಿ ಉಚಿತವಾಗಿ ಬಂದಿದೆ. ಕೆಲವರಿಂಗತೂ ಕುಚ್ಚಿಲ ಅಕ್ಕಿ ಊಟ ಮಾಡಿ ಅಭ್ಯಾಸವಿಲ್ಲ. ಇದನ್ನು ತಿನ್ನುವ ಎ.ಪಿ.ಎಲ್.. ಚೀಟಿದಾರರಿಗೊ.. ಅಥವಾ ಇದನ್ನೇ ವ್ಯವಹಾರಕ್ಕಾಗಿ ಕಾದು ಕುಳಿತಿರುವ ಅಂಗಡಿ ಮಾಲೀಕರಿಗೆ ಕೆ.ಜಿ.ಒಂದಕ್ಕೆ ಹದಿನೈದೋ, ಇಪ್ಪತ್ತು ರೂಪಾಯಿಗೆ ಮಾರಿದರೆ ಪಾಪ ಈ ಹಸಿದ ಹೊಟ್ಟೆಯ ಅನ್ನ ಭಾಗ್ಯದ ಪುಣ್ಯ ಅವರಿಗೂ ಪ್ರಾಪ್ತಿಯಾಗುತ್ತದೆ ಅನ್ನುವ ಮಾನವೀಯತೆಯ ಗುಣ ಹಸಿದ ಹೊಟ್ಟೆಯಲ್ಲಿ ಮಲಗುವ ಪುಣ್ಯಾತ್ಮರಿಗೂ ಬಂದು ಬಿಟ್ಟಿದೆ. ಇದರಲ್ಲಿ ಅಂಗಡಿ ಸಾಹುಕಾರರಿಗಂತೂ ಮಹಾಪ್ರಸಾದ ಪಡೆಯುವ ಸಿರಿವಂತಿಕೆಯ ಭಾಗ್ಯ. ಹತ್ತು ಇಪ್ಪತ್ತು ರೂಪಾಯಿ ದರದಲ್ಲಿ ಮನೆ ಮನೆಗೆ ಹೇೂಗಿ ಖರೀದಿಸಿ ತಂದು ತಮ್ಮ ಅಂಗಡಿಯಲ್ಲಿ ನಲ್ವತ್ತು ಐವತ್ತು ರೂಪಾಯಿ ದರದಲ್ಲಿ ಇದೇ ಅಕ್ಕಿಯನ್ನು ಪೇಟೆಯಲ್ಲಿ ಮಾರುತ್ತಿದ್ದಾರೆ. ಬಂದ ಲಾಭದಲ್ಲಿ ಇದೇ ಹಸಿದ ಹೊಟ್ಟೆಯ ಬಿಪಿಎಲ್ ದಾರರು ಬಿಗ್ ಬಿಗ್ ಮಹಲುಗಳಿಗೆ ಹೇೂಗಿ ಪರಿಮಳಯುಕ್ತವಾದ ಸೇೂನಾ ಮಸೂರಿ ತಂದು ಸುವಾಸನೆ ಬೀರುವ ಅನ್ನ ಭಾಗ್ಯ ಸವಿಯುವ ಭಾಗ್ಯ. ಇದನ್ನೇ ಕರೆಯುವುದು ಕರುನಾಡ ಅನ್ನ ಭಾಗ್ಯ..!

*ಈಗ ತಾನೇ ಇನ್ನೊಂದು ಪರಿಸ್ಕೃತವಾದ ಯೇೂಜನೆ ಬರುವ ಹಂತದಲ್ಲಿ ಇದೆಯಂತೆ. ಬಹುಶಃ ಈ ಅನ್ನ ಭಾಗ್ಯ ಸ್ವಲ್ಪ ಅಜೀರ್ಣವಾಗುವ ಪರಿಸ್ಥಿತಿಗೆ ಬಂದಿದೆ ಅನ್ನುವುದು ಸರ್ಕಾರ ದ ಅನುಭವಕ್ಕೆ ಬಂದಿರಬೇಕು. ಇನ್ನು ಮುಂದೆ 5 ಕೆ.ಜಿ.ಅಕ್ಕಿಗೆ ಕೊಡುವ ಹಣದ ಬದಲಾಗಿ ಬೆಳೆಕಾಳುಗಳಾದ ತೊಗರಿ ಬೇಳೆ, ಗೇೂಧಿ, ಸಕ್ಕರೆ ಮುಂತಾದ ದಿನಿಸಿ ವಸ್ತುಗಳನ್ನು ಬಿಪಿಎಲ್ ಪಡಿತದಾರಿಗೆ ಉಚಿತವಾಗಿ ನೀಡಲು ಕರುನಾಡ ಸರ್ಕಾರ ಮುಂದಾಗಿದೆ. ಹಾಗಾಗಿ ನಮ್ಮ ಎಪಿಎಲ್ ಚೀಟಿದಾರರು ಮತ್ತು ಅಂಗಡಿ ವ್ಯಾಪಾರಸ್ಥರು ನೇರವಾಗಿ ಕೂಡಲೇ ಸಂಪಕಿ೯ಸಬೇಕಾದ ವಿಳಾಸವೆಂದರೆ ಇದೇ ಅನ್ನ ಭಾಗ್ಯದ ಬಿಪಿಎಲ್ ದಾರರನ್ನು.. ಇಲ್ಲಿ ಕೂಡಾ ” ಸವೇ೯ ಜನಾ: ಸುಖಿನೇೂ ಭವಂತು ಯೇೂಜನೆ”ಗೆ ಶಕ್ತಿ ನೀಡಲು ಮುಂದಾಗಬಹುದು!
*ಇಷ್ಟೆಲ್ಲಾ ವಿವರಿಸಿದ ಮೇಲೆ ನಾನು ತುಂಬಾ ನೇೂವಿನಿಂದ ಕೇಳಬೇಕಾದ ಒಂದು ಮೂಲಭೂತವಾದ ಪ್ರಶ್ನೆ ಅಂದರೆ ಈ ಅನ್ನಭಾಗ್ಯ ಕಾರ್ಯಕ್ರಮ ನಿಜವಾಗಿ ಹಸಿದವರಿಗೆ ಸಿಕ್ಕಿದರೆ ಅತ್ಯಂತ ಸಂತೇೂಷ ಪಡೆಯುವುದರಲ್ಲಿ ನಾನು ಒಬ್ಬ. ಆದರೆ ಈ ಯೇೂಜನೆ ಯಾವ ರೀತಿಯಲ್ಲಿ ದುರ್ಬಳಕೆಯಾಗುತ್ತಿದೆ ಎನ್ನುವ ಕುರಿತಾಗಿ ಸರ್ಕಾರದ ಗಮನಕ್ಕೆ ಇನ್ನೂ ಬಾರದಿರುವುದು ಆಶ್ಚರ್ಯ. ಅಷ್ಟು ಮಾತ್ರವಲ್ಲ ಪ್ರತಿ ಜಿಲ್ಲೆಯಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿಯಂತೆ ಇದೆ. ಇವರ ಜವಾಬ್ದಾರಿ ಏನು ಕೇವಲ ಯಾರಿಗೆ ತಲುಪಲಿಲ್ಲ ಅನ್ನುವ ಲೆಕ್ಕಾಚಾರ ಹಾಕುವುದು ಮಾತ್ರವೇ ?ಅಥವಾ ಯಾವ ರೀತಿಯಲ್ಲಿ ಅನುಷ್ಠಾನ ಗೊಳ್ಳುತ್ತಿದೆ. ಯಾವ ರೀತಿಯಲ್ಲಿ ದುರ್ಬಳಕ್ಕೆಯಾಗುತ್ತಿದೆ ಅನ್ನುವ ಕುರಿತಾಗಿ ಇವರ ಗಮನಕ್ಕೆ ಇನ್ನೂ ಬರಲಿಲ್ಲವೇ? ಇದನ್ನು ದುರಸ್ತಿ ಮಾಡಲಿಕ್ಕೆ ಹೋದರೆ ಬರುವಂತ ಓಟು ಕೈ ತಪ್ಪಿಹೇೂದರೆ ಅನ್ನುವ ಭಯವೂ ಕಾಡುತ್ತಿರಬಹುದು.? ಸಾರ್ವಜನಿಕ ಹಿತದೃಷ್ಟಿಯಂದ ಈ ಕಡೆ ಗಂಭೀರವಾಗಿ ಗಮನಹರಿಸಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ.

ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

Leave a Reply

Your email address will not be published. Required fields are marked *

error: Content is protected !!