ಜನಸಂಘದ ಸ್ಥಾಪಕ ಡಾ.ಶ್ಯಾಮಪ್ರಸಾದ್ ಮುಖರ್ಜಿರಿಗೆ ನುಡಿ ನಮನ ಕಾರ್ಯಕ್ರಮ
ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಪ್ರಯುಕ್ತ ಕರಂಬಳ್ಳಿ ವಾರ್ಡಿನ ಬಿಜೆಪಿ ಬೂತ್‌ಗಳಲ್ಲಿ ಅವರ ನಮನ ಕಾರ್ಯಕ್ರಮ ನಡೆಸಲಾಯಿತು.
ಕರಂಬಳ್ಳಿ ವಾರ್ಡಿನ ಬಿಜೆಪಿ ಬೂತ್ ನಂಬರ್ 146,147,148,149 ರಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ, ಬೂತ್ ಅಧ್ಯಕ್ಷರಾದ ಗೀತಾ ಎನ್ ಸೇರಿಗಾರ್, ಕೃಷ್ಣ ನಾಯ್ಕ್, ಪ್ರಥ್ವಿ ರಾಜ್, ಚಂದ್ರಶೇಖರ್ ನಾಯ್ಕ್, ರಘುರಾಮ್ ಶೆಟ್ಟಿ, ಲಕ್ಸ್ಮಿ ನಾರಾಯಣ್, ಕಿಶೋರ್ ಕುಮಾರ್, ರಮೇಶ್ ಬಾರಿತ್ತಾಯ, ಎಂ ಆರ್ ಪೈ ಅಂಬಾಗಿಲು, ಕೇಶವ ದೇವಾಡಿಗ,ಜಯಕರ್ ಆಚಾರ್ಯ, ಪ್ರಶಾಂತ್, ಪ್ರಸಾದ್ ಶೆಟ್ಟಿ, ಗೋಪಾಲ್ ಕುಂದರ್, ರಮ ಶೆಟ್ಟಿಗಾರ್, ರಾಘವೇಂದ್ರ ನಾಯ್ಕ್, ಕೃಷ್ಣ ಶ್ರೀಧರನ್, ಹಾಗೂ ಪ್ರದೀಪ್ ಉಪಸ್ಥಿತರಿದ್ದರು.





