ಯಾವುದೇ ಕಾರಣಕ್ಕೂ ಊಟ ಮಾಡಿದ ತಕ್ಷಣ ನೀವು ಈ ಆಹಾರವನ್ನು ಸೇವಿಸಬೇಡಿ..!
ಇಂದಿನ ದಿನಮಾನದ ಜನರು ಊಟ ಆದ ತಕ್ಷಣವೇ ಕೆಲವೊಂದು ಆಹಾರಗಳನ್ನು ತಿನ್ನಲೇಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಅವರಿಗೆ ಈ ರೀತಿ ತಿನ್ನುವುದರಿಂದ ಏನು ಸಮಸ್ಯೆ ಆಗುತ್ತದೆ ಎನ್ನುವುದು ಕೂಡ ತಿಳಿದಿರುವುದಿಲ್ಲ. ಹಾಗೆಯೇ ಇದರಿಂದ ನಮ್ಮ ಆರೋಗ್ಯವೂ ಕೂಡ ಹಾಳಾಗುತ್ತದೆ ಎನ್ನುವ ಸ್ವಲ್ಪ ಜ್ಞಾನವು ಅವರಲ್ಲಿ ಇರುವುದಿಲ್ಲ. ಹಾಗೆಯೇ ಕೆಲವರಲ್ಲಿ ಊಟ ಆದ ತಕ್ಷಣವೇ ಮಲಗಿಕೊಂಡು ಬಿಡುತ್ತಾರೆ. ಇದು ತಪ್ಪು, ಈ ರೀತಿ ಮಲಗಿಕೊಳ್ಳುವ ಅಭ್ಯಾಸವಿದ್ದರೆ, ನಿಮ್ಮ ದೇಹಕ್ಕೆ ತುಂಬಾ ಹಾನಿಕಾರಕವಾಗಬಹುದು. ಏಕೆಂದರೆ ಮಲಗಿದ ಮೇಲೆ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಒಂದು ವೇಳೆ ತಿಂದ ಆಹಾರ ಸರಿಯಾಗಿ ಜೀರ್ಣವಾಗಿಲ್ಲ ಎಂದರೆ ಹೊಟ್ಟೆಯಲ್ಲಿ ಗ್ಯಾಸ್ ನ ಅಂಶ ಉದ್ಭವಾಗುತ್ತದೆ ಹಾಗೂ ಬೇರೆ ಬೇರೆ ತೊಂದರೆಗಳು ಸಹ ಕಾಣಿಸಿಕೊಳ್ಳುತ್ತದೆ.

ಕೆಲವರಿಗೆ ಊಟ ಆದ ತಕ್ಷಣವೇ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ತರಹ ಚಹ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಊಟದ ನಂತರ ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡಬಾರದು. ಈ ತರಹ ಸ್ನಾನ ಮಾಡುವುದರಿಂದ ರಕ್ತದ ಹರಿಯುವಿಕೆ ಜಾಸ್ತಿಯಾಗಿ ಜೀರ್ಣ ವ್ಯವಸ್ಥೆ ಬಲಹೀನವಾಗುತ್ತದೆ. ಆದ್ದರಿಂದ ಮೇಲಿನವುಗಳನ್ನು ತಿಳಿದುಕೊಂಡು ನೀವು ಸರಿಯಾದ ಆರೋಗ್ಯವನ್ನು ಕಾಪಾಡಿಕೊಂಡು ಮುಂದುವರಿದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.





