ಉಡುಪಿ: ಮಾಜಿ ಯೋಧ ಸುಬ್ರಮಣಿಯನ್ ನಿಧನ
ಉಡುಪಿ ಜೂ.23(ಉಡುಪಿ ಟೈಮ್ಸ್ ವರದಿ): ನಗರದ ಮಾಂಡವಿ ಕೋರ್ಟ್ ನ ನಿವಾಸಿಯಾಗಿದ್ದ ಮಾಜಿ ಯೋಧ ಸುಬ್ರಮಣಿಯನ್ ಉಪಾಧ್ಯ (45) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಬ್ರಮಣಿಯನ್ ಅವರು ಭೂಸೇನೆಯಲ್ಲಿ 22 ವರ್ಷಗಳ ಕಾಲ ಹವಾಲ್ದಾರ್ ಅಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರು ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ಸಕ್ರಿಯ ಸದಸ್ಯರಾಗಿದ್ದರು.
ಅವರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಹಾಗೂ ತಂದೆ-ತಾಯಿ ಮತ್ತು ತಮ್ಮ-ತಂಗಿಗಳನ್ನು ಅಗಲಿದ್ದಾರೆ.





