ರೋಟರಾಕ್ಟ್ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನ ದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಉಡುಪಿ: ಶ್ರೀ ಕೃಷ್ಣ ಬಾಲನಿಕೇತನ ದಲ್ಲಿ ರೋಟರಾಕ್ಟ್ ಕ್ಲಬ್ ಉಡುಪಿ ವತಿಯಿಂದ ಅಂತರಾಷ್ಟ್ರೀಯ ಯೋಗದಿನಾಚರಣೆಯು ಮಾಹೆ ಯ ಯೋಗ ವಿಭಾಗ ದ ಸಹ ಪ್ರಾಧ್ಯಪಕಿ ಡಾ. ಲಾವ್ಯ ಶೆಟ್ಟಿ ಯವರ ನೇತೃತ್ವ ದಲ್ಲಿ ನಡೆಯಿತು. ಬಾಲನಿಕೇತನದ ಮಕ್ಕಳಿಂದ ಪ್ರಾರ್ಥನೆ ಯ ಬಳಿಕ ರೋಟರಾಕ್ಟ್ ಅಧ್ಯಕ್ಷ ರೋ. ಅಂಶ್ ಕೋಟ್ಯಾನ್ ರವರು ಎಲ್ಲರನ್ನು ಸ್ವಾಗತಿಸಿದರು. ಯೋಗದ ಮಹತ್ವದ ಬಗ್ಗೆ ಮುಖ್ಯ ಅತಿಥಿ ಡಾ.ಲಾವ್ಯ ಶೆಟ್ಟಿಯವರು ವಿವರಿಸಿ ಮಕ್ಕಳಿಂದ ಯೋಗ ಪ್ರಾತ್ಯಕ್ಷಿಕೆ ಯನ್ನು ಮಾಡಿಸಿದರು. ಕಾರ್ಯಕ್ರಮ ದಲ್ಲಿ ರೋಟರಿ ಉಡುಪಿ ಅಧ್ಯಕ್ಷ ರೋ. ಗುರುರಾಜ್ ಭಟ್, ರೋಟರಾಕ್ಟ್ ಸಭಾಪತಿ ರೋ.ಬಿ.ಕೆ ನಾರಾಯಣ, ಬಾಲನಿಕೇತನದ ಕಾರ್ಯದರ್ಶಿ ರೋ ರಾಮಚಂದ್ರ ಉಪಾಧ್ಯಾಯ, ಮಾತಾಜಿಯವರು ಉಪಸ್ಥಿತರಿದ್ದರು. ರೋ. ಅಪೂರ್ವ ಬಿ.ಕೆ ಕಾರ್ಯಕ್ರಮ ಸಂಯೋಜಿಸಿದ್ದರು.





