ಜನವರಿ ಒಳಗೆ ದೇಶಕ್ಕೆ ಕಾದಿದೆ ದೊಡ್ಡ ಗಂಡಾಂತರ: ಕೋಡಿಮಠದ ಶ್ರೀ ಭವಿಷ್ಯ

ಹಾಸನ: ಜನವರಿ ಒಳಗೆ ದೇಶಕ್ಕೆ ದೊಡ್ಡ ಗಂಡಾಂತರ ಇದೆ. ನಿರೀಕ್ಷೆಗೂ ಮೀರಿದ ದುಃಖ ದೇಶವನ್ನು ಬಾಧಿಸಲಿದೆ. ಊಹಿಸಲಾರದ ದುಃಖ ಭಾರತಕ್ಕೂ ಬರಲಿದೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಶ್ರೀಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ಒಳಗೆ ಮೇಘ ಸ್ಫೋಟವಾಗುವ ಸಾಧ್ಯತೆ ಇದೆ. ಇದರಿಂದ ಜನಜೀವನ ಕೂಡ ಅಸ್ತವ್ಯಸ್ತವಾಗಲಿದೆ. ಯುದ್ಧ ನಡೆಯಲಿದೆ. ಅರಸನ ಆಲಯಕ್ಕೆ ಕಾರ್ಮೋಡ ಕವಿಯಲಿದೆ. ಇದು ರಾಜ್ಯಕ್ಕೂ, ದೇಶಕ್ಕೂ ಅನ್ವಯಿಸಲಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯವನವರಿಗೆ ಏನೂ ತೊಂದರೆ ಇಲ್ಲ. ಯುದ್ಧ ನಿಲ್ಲುವುದು ಸಂವತ್ಸರ ಪರ್ವದಲ್ಲಿ ಕಷ್ಟ. ಯಾರೂ ಊಹಿಸದ ದುಃಖ ಎದುರಾಗಲಿದೆ ಎಂದಿದ್ದಾರೆ.
ಇನ್ನು, ಮನೆಯಿಂದ ಹೊರಗೆ ಹೋದವರು ಯಾವಾಗ ವಾಪಸ್‌ ಬರುತ್ತಾರೆ ಎಂದು ಹೇಳುವುದು ಕಷ್ಟ. ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ ಎಂದು ಹೇಳಿದ್ದೆ, ಅದು ಮುಂದುವರಿಯಲಿದೆ. ಸಾಗರದಲ್ಲಿ ಜಲಸ್ಫೋಟವು ಸಂಭವಿಸಲಿದೆ. ಸೂಳೆಯ ಮಗನುಟ್ಟಿ, ಆಳುವವನು ಮುನಿಪುರವ, ಯುದ್ಧವಿಲ್ಲದೇ ಮಡಿಯೇ ಪುರವೆಲ್ಲ ಕೂಳಾದೀತು ಎಂದು ನುಡಿದಿದ್ದಾರೆ. ಇದರ ಅರ್ಥವನ್ನು ಮುಂದೆ ಹೇಳುತ್ತೇನೆ ಎಂದ ಶ್ರೀ ಗಳು ಕೊರೊನಾ ಇನ್ನೊಂದು ರೂಪ ತಾಳಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!