ಬಾಳೆ ಹಣ್ಣು ಮಾತ್ರವಲ್ಲ, ಬಾಳೆ ಹೂವಿನಲ್ಲೂ ಅಡಗಿದೆ ಆರೋಗ್ಯಕರ ಗುಣ..!
ಬಾಳೆ ಗಿಡದ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಅದರಲ್ಲಿ ಬಿಡುವ ಹಣ್ಣು ನಮಗೆ ಆರೋಗ್ಯಕರ ಎಂದು ನಮಗೆ ತಿಳಿದಿದೆ. ಬಾಳೆಹಣ್ಣು, ಬಾಳೆಎಲೆ ಹೀಗೆ ಬಾಳೆಯ ಪ್ರತಿಯೊಂದು ಭಾಗವೂ ಕೂಡ ಸಾಕಷ್ಟು ಆರೋಗ್ಯ ಪ್ರಯೋಜನವನ್ನು ಹೊಂದಿರುತ್ತದೆ. ಅದೇ ರೀತಿ ಬಾಳೆ ಹೂವು ಕೂಡ ಒಂದು. ಬಾಳೆಹೂವಿನಲ್ಲಿಯೂ ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆದರೆ ಈ ಬಾಳೆ ಹೂವಿನ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿರುತ್ತದೆ. ಹೌದು ಬಾಳೆ ಹೂವಿನಲ್ಲೂ ಕೂಡ ಆರೋಗ್ಯಕರವಾದ ಗುಣಗಳಿವೆ. ಫೋಟೋಶಿಯಂ, ಫೈಬರ್, ಕ್ಯಾಲ್ಸಿಯಂ, ಮ್ಯಾಗ್ನೀಶಿಯಂ ಮುಂತಾದ ಪೋಷಕಾಂಶಗಳು ಕೂಡ ಇದರಲ್ಲಿ ಹೇರಳವಾಗಿದೆ.

ಮಹಿಳೆಯರ ಪಾಲಿಗಂತೂ ಇದು ಒಂದು ತರಹ ಸಂಜೀವಿನಿ ಇದ್ದಂತೆ ಎಂದು ಹೇಳಬಹುದು. ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದರಲ್ಲಿ ಹಿಮೋಗ್ಲೋಬಿನ್ ಅಂಶ ಕೂಡ ಹೆಚ್ಚಾಗುತ್ತದೆ.

ಮೂತ್ರಪಿಂಡದಲ್ಲಿ ಏನಾದರೂ ಸಮಸ್ಯೆ ಇದ್ದರೂ ಕೂಡ ಬಾಳೆ ಹೂವಿನಿಂದ ನಿವಾರಣೆಯಾಗುತ್ತದೆ. ಮಕ್ಕಳಿಗೆ ಹಾಲು ಕುಡಿಸುವ ಮಹಿಳೆಯರಿಗೆ ಇದು ಹಾಲನ್ನು ಹೆಚ್ಚಿಸುತ್ತದೆ. ಹೀಗೆ ಇದರಲ್ಲಿ ಅನೇಕವಾದ ಪ್ರಯೋಜನಗಳಿವೆ, ಇದರಿಂದ ನಮಗೆ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು. ಅದರಿಂದ ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಸೇವನೆ ಮಾಡುವುದು ಒಳ್ಳೆಯದು. ಏಕೆಂದರೆ ನಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ತಿಳಿದುಕೊಂಡು ಅವುಗಳ ಸೇವನೆ ಹೆಚ್ಚಾಗಿ ಮಾಡಬೇಕು. ಇದನ್ನು ತಿಳಿದುಕೊಂಡು ಉಪಯೋಗಿಸುವುದರಿಂದ ನಿಮಗೆ ಒಳ್ಳೆ ಫಲಿತಾಂಶ ಕೂಡ ಲಭಿಸುತ್ತದೆ. ಆದ್ದರಿಂದ ಬಾಳೆ ಹೂವನ್ನು ಉಪಯೋಗಿಸಿ ನಿಮ್ಮ ಆರೋಗ್ಯದಲ್ಲಿರುವ ಕೆಲವೊಂದು ಏರುಪೇರುಗಳನ್ನು ಸರಿಪಡಿಸಿಕೊಳ್ಳಿ.





