ಸುಪ್ರೀಂ ಕೋರ್ಟ್‌ನ ಕಚೇರಿಗಳು 2ನೇ & 4ನೇ ಶನಿವಾರವೂ ಕರ್ತವ್ಯ ನಿರ್ವಹಿಸಲಿವೆ

ನವದೆಹಲಿ: ಜುಲೈ 14ರಿಂದ ಸುಪ್ರೀಂ ಕೋರ್ಟ್‌ನ ನೋಂದಾವಣೆ ಮತ್ತು ಕಚೇರಿ ಸಿಬ್ಬಂದಿಗಳು ಈಗ 2ನೇ ಮತ್ತು 4ನೇ ಶನಿವಾರ ಕೂಡ ಕರ್ತವ್ಯ ನಿರ್ವಹಿಸಲಿದ್ದಾರೆ.
ಗಜೆಟ್‌ ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, ಈ ಬದಲಾವಣೆ ಸುಪ್ರೀಂ ಕೋರ್ಟ್‌ ನಿಯಮಗಳ ಆದೇಶ II, ನಿಯಮಗಳು 1 ರಿಂದ 3 ರ ಅಡಿಯಲ್ಲಿದ್ದು, ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿವೆ. ಹೊಸ ಅಧಿಸೂಚನೆಯ ಪ್ರಕಾರ, ಸುಪ್ರೀಂ ಕೋರ್ಟ್‌ನ ಕಚೇರಿಗಳು ಈಗ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ.
ನ್ಯಾಯಾಲಯದ ಕಚೇರಿಗಳು ಇನ್ನು ಮುಂದೆ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ ಎಲ್ಲಾ ಶನಿವಾರ ಕೂಡ ಕರ್ತವ್ಯ ನಿರ್ವಹಿಸಲಿವೆ. ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಕೆಲಸ ನಿರ್ವಹಿಸುತ್ತವೆ. ಅಂತೆಯೇ ತುರ್ತು ವಿಷಯಗಳನ್ನು ಮಧ್ಯಾಹ್ನ 12 ಗಂಟೆಯ ಮೊದಲು ಸಲ್ಲಿಸುವಂತೆ ತಿಳಿಸಲಾಗಿದೆ. ಇನ್ನು, ಕ್ರಿಸ್‌ಮಸ್‌ ಹಾಗೂ ಹೊಸವರ್ಷದಂತ ವಿಶೇಷ ರಜೆಗಳಿಗೆ ಕೆಲಸದ ಸಮಯವನ್ನು ಭಾರತದ ಮುಖ್ಯ ನ್ಯಾಯಾಧಿಶರು ಪ್ರಕರಣದಿಂದ ಪ್ರಕರಣಕ್ಕೆ ಅನುಗುಣವಾಗಿ ನಿರ್ಧರಿಸಿ ಘೋಷಿಸಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!