ಬ್ರೌನ್ ರೈಸ್ ಬಗ್ಗೆ ನಿಮಗೆಷ್ಟು ತಿಳಿದಿದೆ..!

ಸಾಮಾನ್ಯವಾಗಿ ಬಿಳಿ ರೈಸ್ ಅನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಬ್ರೌನ್ ರೈಸ್ ಅನ್ನು ಯಾರೂ ಕುಡ ಅಷ್ಟಾಗಿ ಇಷ್ಟಪಡುವುದಿಲ್ಲ. ಮಾನವನು ಪ್ರತಿಯೊಂದು ಆಹಾರದಲ್ಲಿ ರುಚಿಯನ್ನು ಹುಡುಕುವ ಬದಲಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಅಂತೆಯೇ ಈ ಬಿಳಿ ರೈಸ್ ಗಿಂತ ಬ್ರೌನ್ ರೈಸ್ ಆರೋಗ್ಯ ಬಹಳ ಪ್ರಯೋಜನಕಾರಿಯಾಗಿದೆ.

ಈ ಬ್ರೌನ್ ರೈಸ್ ಹಲವಾರು ಕಾಯಿಲೆಗಳನ್ನು ಹತೋಟಿಗೆ ತರುತ್ತದೆ.
ಹೌದು, ಅನ್ನವನ್ನು ಕರಾವಳಿ ಭಾಗದ ಜನರು ಹೆಚ್ಚಾಗಿ ಬಳಸುತ್ತಾರೆ…. ಇದು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಉಪಯೋಗವಾಗುತ್ತದೆ…. ಬ್ರೌನ್ ರೈಸ್ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿರಿಸುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣಾಂಶ ಕಡಿಮೆಯಾಗಿ ಸದಾ ಲವಲವಿಕೆಯಿಂದ ಇರಲು ಸಹಾಯವಾಗುತ್ತದೆ….. ಇದನ್ನು ಗಂಜಿ ಮಾಡಿ ಸೇವಿಸಿದರೆ ದೇಹಕ್ಕೆ ಬೇಕಾದ ಪ್ರೋಟೀನ್ಗಳು ನಮಗೆ ಸಿಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಉಪಯುಕ್ತವಾಗಿದ್ದು ಇದನ್ನು ಹೆಚ್ಚಾಗಿ ಸೇವಿಸುವುದರಿಂದ ನಮಗೆ ಕಾಯಿಲೆಗಳು ಬರುವುದು ಕಡಿಮೆಯಾಗುತ್ತದೆ…..

ಇನ್ನು, ಈ ಬ್ರೌನ್ ರೈಸ್ ಅನ್ನು ಯಾವುದೇ ಕಾರಣಕ್ಕೂ ಪಾಲಿಶ್ ಮಾಡುವುದಿಲ್ಲ. ಬ್ರೌನ್ ರೈಸ್ ಯೂಸ್ ಮಾಡುವುದರಿಂದ ಯಾವುದೇ ತರಹದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ. ಈ ಅನ್ನವನ್ನು ಸೇವನೆ ಮಾಡುವುದರಿಂದ ತೂಕವನ್ನು ಕೂಡ ಕಡಿಮೆಗೊಳಿಸಬಹುದು.

Leave a Reply

Your email address will not be published. Required fields are marked *

error: Content is protected !!